Advertisement
ಸಂಸ್ಥೆಯನ್ನು ಬಂಡವಾಳ ಸ್ನೇಹಿಯಾಗಿ ಮಾಡಲು ಸರ್ಕಾರ ಈಗಾಗಲೇ 2021 ರ ಬಜೆಟ್‌ನಲ್ಲಿ 20,000 ಕೋಟಿ ಹಣವನ್ನು ಎಫ್ ವೈ(ಫೈನಾನ್ಶಿಯಲ್ ಈಯರ್/ಆರ್ಥಿಕ ವರ್ಷ) 22 ರಲ್ಲಿ ನಿಗದಿಪಡಿಸಿದೆ.
Related Articles
Advertisement
ಉದ್ದೇಶಿತ ಡಿ ಎಫ್ ಐ(ಡೆವೆಲಪ್ಮೆಂಟ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಶನ್) ಶೇಕಡಾ 50 ರಷ್ಟು ಅಧಿಕೃತವಲ್ಲದ ನಿರ್ದೇಶಕರನ್ನು ಹೊಂದಿರುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಮತ್ತು ಡಿ ಎಫ್ ಐ ಹತ್ತು ವರ್ಷಗಳ ಕಾಲ ಕೆಲವು ತೆರಿಗೆ ಪ್ರಯೋಜನಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಹಣಕಾಸು ಅಭಿವೃದ್ಧಿ ಸಂಸ್ಥೆಗೆ ಕೆಲವು ಭದ್ರತೆಗಳನ್ನು ನೀಡಲು ಯೋಜನೆ ಮಾಡುತ್ತಿದೆ. ಈ ಮೂಲಕ ಹಣದ ವೆಚ್ಚವು ಕಡಿಮೆಯಾಗುತ್ತದೆ. “ಇವೆಲ್ಲವೂ ಡಿ ಎಫ್ ಐ ಆರಂಭಿಕ ಬಂಡವಾಳವನ್ನು ಹತೋಟಿಗೆ ತರಲು ಸಹಾಯ ಮಾಡುತ್ತದೆ ಭಾರತದ ಬಾಂಡ್ ಮಾರ್ಕೇಟ್ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಹಣಕಾಸು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಡಿ ಎಫ್ ಐ ಶೇ. 100 ರಷ್ಟು ಸರ್ಕಾರಿ ಮಾಲೀಕತ್ವದೊಂದಿಗೆ ಪ್ರಾರಂಭವಾಗಲಿದೆ ಮತ್ತು ಕ್ರಮೇಣ ಅದು ಶೇ. 26ಕ್ಕೆ ಇಳಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.
ಓದಿ : ನೀತಾ ಅಂಬಾನಿಯನ್ನು ಸಂದರ್ಶಕ ಉಪನ್ಯಾಸಕಿಯಾಗಿ ನೇಮಿಸುವ ಪ್ರಸ್ತಾಪ:BHU ವಿದ್ಯಾರ್ಥಿಗಳ ಆಕ್ಷೇಪ