ಮೆಲ್ಬೋರ್ನ್: ಕೆಲವು ವರ್ಷಗಳಲ್ಲೇ ವಿದ್ಯುತ್ ಚಾಲಿತ ಹಾರಾಡುವ ಕಾರುಗಳು ರಸ್ತೆಗಿಳಿಯುತ್ತವೆ ಎಂದು ಕೆಲವು ವರದಿಗಳು ಬಂದಿದ್ದವು. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ಏರ್‌ಸ್ಪೀಡರ್ ಎಂಬ ಕಂಪೆನಿ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ಎಂ.ಕೆ. 3 ರೇಸಿಂಗ್ ಪ್ರೋಟೋಟೈಪ್ ಎಂಬ ವಿದ್ಯುತ್ ಚಾಲಿತ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಇದರಲ್ಲೇನು ವಿಶೇಷ ಅಂತೀರಾ? ನೆನಪಿಡಿ… ಇದು ರಸ್ತೆಯ ಮೇಲೆ ಓಡಾಡುವ ಕಾರಲ್ಲ. ಆಕಾಶದಲ್ಲಿ ಹಾರಾಡುವ ಕಾರು! ಏರ್‌ಸ್ಪೀಡರ್ ಕಂಪೆನಿಯ ಸಹೋದರ ಸಂಸ್ಥೆಯಾದ ಅಲೌಡಾ ಏರೋನಾಟಿಕ್ಸ್ ಸಂಸ್ಥೆ ಇದನ್ನು ವಿನ್ಯಾಸಗೊಳಿಸಿದೆ.
ಇದನ್ನೂ ಓದಿ:7 ದಶಕಗಳ ಬಳಿಕ ಭಾರತಕ್ಕೆ “ಚೀತಾ’ಗಮನ
ಕಂಪೆನಿ ಹೇಳುವ ಪ್ರಕಾರ, ಇದು ವಿಶ್ವದ ಮೊದಲ ಆಕಾಶ ಸಂಚಾರಿ ರೇಸ್ ಕಾರು. ಅಂದಹಾಗೆ, ಫಾರ್ಮುಲಾ ಎಫ್ 1, ಫೈಟರ್ ಜೆಟ್ ಹಾಗೂ ಹೆಲಿಕಾಪ್ಟರ್‌ಗಳ ಸಂಯುಕ್ತ ರೂಪ ಎಂದು ಇದರ ವಿನ್ಯಾಸ ವಿಭಾಗದ ಮುಖ್ಯಸ್ಥರಾದ ಫೆಲಿಕ್ಸ್ ಪಿಯರ್ಸನ್ ಹೇಳುತ್ತಾರೆ.
ವಿಶೇಷಗಳು
-ಇದೊಂದು ರಿಮೋಟ್ ಪೈಲೆಟೆಡ್ ವಿದ್ಯುತ್ ಚಾಲಿತ ಕಾರು
-ಇದರ ಎಂಜಿನ್ ಶಕ್ತಿ ಆಡಿ ಎಸ್‌ಕ್ಯು7 ಕಾರಿಗೆ ಸರಿಸಾಟಿ
-ಆಕಾಶ ಮಾರ್ಗದಲ್ಲಿ ಸಾಗುವಂಥ ರೇಸ್ ಕಾರು.
-ಏಕ ವ್ಯಕ್ತಿ ಚಾಲನೆ ಮಾದರಿಯ ಕಾರು