ಭಾರತದಲ್ಲಿ ಹಾರುವ ಕಾರುಗಳು ಉತ್ಪಾದನೆಯಾಗಲಿವೆ. ನೆದರ್ಲೆಂಡ್ ಪಿಎಎಲ್-ವಿ ಕಂಪೆನಿ ಭಾರತದಲ್ಲಿ ಹಾರುವ ಕಾರುಗಳನ್ನು ತಯಾರಿಸಲು ಯೋಜನೆ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಗುಜರಾತ್‌ನಲ್ಲಿ ಹಾರುವ ಕಾರುಗಳ ಘಟಕವನ್ನು ಸಾuಪಿಸಲಿದೆ. ಹಾಗಾಗಿ ಪರ್ಸನಲ್ ಏರ್ ಲ್ಯಾಂಡ್ ವೆಹಿಕಲ್ (ಪಿಎಎಲ್ ವಿ) ಕಂಪೆನಿ 2021ರ ವೇಳೆಗೆ ಕಾರುಗಳನ್ನು ಇಲ್ಲಿಂದಲೇ ತಯಾರಿಸುವ ಗುರಿ ಹೊಂದಿದೆ.
ಹಾರುವ ಕಾರಿನ ಘಟಕ ಸ್ಥಾಪಿಸಲು ಈಗಾಗಲೇ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ಗುಜರಾತ್ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಕೆ ದಾಸ್ ಮತ್ತು ಪಿಎಎಲ್ ವಿ ಕಂಪನಿಯ ಉಪಾಧ್ಯಕ್ಷ ಕಾಲೋರ್ ಮಾಸೊºಮ್ಮೆಲ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಪಿಎಎಲ್ ವಿ ಕಂಪೆನಿ ತಯಾರಿಸುವ ಕಾರುಗಳು ಎರಡು ಎಂಜಿನ್ ಹೊಂದಿರಲಿದೆ. ಈ ಕಾರು ರಸ್ತೆ ಮೇಲೆ 160 ಲಿ.ಮೀ ವೇಗದಲ್ಲಿ ಸಂಚರಿಸಲಿದೆ. 180 ಕಿ.ಮೀ. ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿರಲಿದೆ.
ಕಾರು ಕೇವಲ ಮೂರು ನಿಮಿಷದಲ್ಲಿ ಹಾರಟ ನಡೆಸುವಂತೆ ಸಿದ್ಧವಾಗುತ್ತದೆ. ಅಲ್ಲದೆ. ಈ ಕಾರು ಒಂದು ಸಲ ಟ್ಯಾಂಕ್ ಪೂರ್ತಿ ಮಾಡಿದರೆ 500 ಕಿ.ಮೀಟರ್ ದೂರ ಸಂಚರಿಸಲಿದೆ.