Advertisement

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

04:43 PM Sep 24, 2021 | Team Udayavani |

ಉಳ್ಳಾಲ: ಇಲ್ಲಿನ ಸೋಮೇಶ್ವರದಲ್ಲಿರುವ ರೈಲ್ವೇ ನಿಲ್ದಾಣದ ಹಿಂಭಾಗದ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Advertisement

ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಬೆಳಗ್ಗೆ ಸುಮಾರು 15 ಮನೆಗಳ ಗೇಟುಗಳಲ್ಲಿ ಕ್ರೈಸ್ತ ಧರ್ಮ ವಿಚಾರಗಳ ಕುರಿತ ಕನ್ನಡ ಹಾಗೂ ಮಲಯಾಳಂನಲ್ಲಿ ಬರೆದಿರುವ ಭಿತ್ತಿಪತ್ರ, ಎರಡು ಪುಸ್ತಕಗಳನ್ನು ಇರಿಸಿದ್ದಾನೆ. ಈ ಸಂದರ್ಭ ವೃದ್ಧೆಯೊಬ್ಬರು ವ್ಯಕ್ತಿಯನ್ನು ಗಮನಿಸಿ, ಆತ ಸೇಲ್ಸ್ ಮ್ಯಾನ್ ಅಂದುಕೊಂಡು ತಮಗೇ ಯಾವುದೇ ಸೊತ್ತುಗಳು ಬೇಡ ಅಂದಿದ್ದಾರೆ. ಆದರೂ ಆತ ಅವರ ಗೇಟಿನಲ್ಲಿ ಪುಸ್ತಕ, ಭಿತ್ತಿಪತ್ರ, ಸ್ಟಿಕ್ಕರ್ ಇರಿಸಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಮೊದಲು ಮತಾಂತರ ನಿಲ್ಲಬೇಕು: ಸಂಸದ ಪ್ರತಾಪ್ ಸಿಂಹ ಗುಡುಗು

ಘಟನೆಯಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಮತಾಂತರ ನಡೆಸುವ ಉದ್ದೇಶದಿಂದಲೇ ಕೃತ್ಯ ಎಸಗಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

Advertisement

ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌.

Advertisement

Udayavani is now on Telegram. Click here to join our channel and stay updated with the latest news.

Next