Advertisement

ದೇಶ ತೊರೆಯುವರ ವಿವರ 24 ಗಂಟೆ ಮುಂಚೆ ಕಸ್ಟಮ್ಸ್‌ ಇಲಾಖೆಗೆ

09:24 PM Aug 10, 2022 | Team Udayavani |

ನವದೆಹಲಿ: ಹೊರದೇಶಗಳಿಗೆ ಪ್ರಯಾಣಿಸುವ ಭಾರತೀಯ ಮಾಹಿತಿಗಳನ್ನು, ಅವರ ಪ್ರಯಾಣ ಆರಂಭವಾಗುವ ವೇಳೆಗೆ 24 ಗಂಟೆಗೆ ಮುಂಚಿತವಾಗಿಯೇ ದೇಶದ ಕಸ್ಟಮ್ಸ್‌ ಇಲಾಖೆಗೆ ರವಾನಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ, ದೇಶದಲ್ಲಿ ಆರ್ಥಿಕಾಪರಾಧಗಳನ್ನು ಮಾಡಿ ದೇಶ ಬಿಟ್ಟು ಪರಾರಿಯಾಗುವಂಥ ವ್ಯಕ್ತಿಗಳನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರಯಾಣಿಕರ ಹೆಸರು, ವಿಳಾಸ, ಇ-ಮೇಲ್‌ ಐಡಿ, ಫೋನ್‌ ನಂಬರ್‌, ಕ್ರೆಡಿಟ್‌ ಕಾರ್ಡ್‌ ಮಾಹಿತಿ, ಬ್ಯಾಗೇಜ್‌ ವಿವರ, ಟ್ರಾವೆಲ್‌ ಹಿಸ್ಟರಿ ಸೇರಿ ಕೆಲವು ಮಾಹಿತಿಗಳನ್ನು ಕಸ್ಟಮ್ಸ್‌ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಲಾಗಿದೆ.

ಕಸ್ಟಮ್ಸ್‌ ಇಲಾಖೆಯು ವಿಮಾನ ಸೇವಾ ಸಂಸ್ಥೆಗಳು ಕಳುಹಿಸುವ ಪ್ರಯಾಣಿಕರ ಮಾಹಿತಿಯನ್ನು ಅವಲೋಕಿಸಿ, ಆನಂತರ ಆ ಪಟ್ಟಿಯನ್ನು ನೂತನವಾಗಿ ಆರಂಭಿಸಲಾಗಿರುವ ನ್ಯಾಷನಲ್‌ ಕಸ್ಟಮ್ಸ್‌ ಟಾರ್ಗೆಟಿಂಗ್‌ ಸೆಂಟರ್‌- ಪ್ಯಾಸೆಂಜರ್ಸ್‌ (ಎನ್‌ಸಿಪಿಟಿ- ಪಿ) ವಿಭಾಗಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು.

ಪ್ರಯಾಣಿಕರ ವಿದೇಶ ಪ್ರಯಾಣ ಆರಂಭವಾಗುವ 24 ಗಂಟೆಯೊಳಗೆ ಈ ಎಲ್ಲಾ ಅವಲೋಕಗಳೂ ನಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next