Advertisement

ಬದುಕನ್ನು ಬಯಸಿದ ಕಡೆಗೆ ಹರಿಯಿಸುವುದು

11:55 PM Dec 07, 2020 | mahesh |

ನಾವು ಜನಿಸುವಾಗಲೇ ನಮ್ಮೊಳಗೊಂದು ಸಾಫ್ಟ್ವೇರ್‌ ಅಳವಡಿಕೆಯಾಗಿರುತ್ತದೆ. ಅದು ಕಾಲ, ಶಕ್ತಿ ಮತ್ತು ವಂಶವಾಹಿ ಮಾಹಿತಿಗಳು – ಈ ಮೂರರ ಸಂಯೋಜನೆ. ಇವು ಮೂರು ಜತೆಯಾಗಿ ನಮ್ಮ ಬದುಕನ್ನು ನಿರ್ಧರಿಸುತ್ತವೆ. ನಾವು ಎಷ್ಟು ಕಾಲ ಬದುಕ ಬೇಕು, ಹೇಗೆ ಜೀವಿಸಬೇಕು ಎಂಬುದನ್ನು ನಿರ್ಧರಿಸುವುದು ಈ ತ್ರಿವಳಿಗಳೇ.

Advertisement

ಹಾಗಾದರೆ ನಮ್ಮ ಬದುಕು ಸಂಪೂರ್ಣ ಪೂರ್ವನಿರ್ಧರಿತವೇ? . ನಮ್ಮಲ್ಲಿರುವ ಮಾಹಿತಿಗಳು ಖಂಡಿತ ಪೂರ್ವ ನಿರ್ಧರಿತ. ಹಾಗೆಂದು, ಹೊಸ ಮಾಹಿತಿಗಳನ್ನು ಸ್ವೀಕರಿಸಲಾಗದು ಎಂದೇನಿಲ್ಲ. ಹೊಸತರ ಸ್ವೀಕಾರ ಮತ್ತು ಅಳವಡಿಕೆ ನಮ್ಮಲ್ಲಿ ಈಗಾಗಲೇ ಇರುವ ಮಾಹಿತಿಗಳು, ಬದುಕಿನಲ್ಲಿ ನಾವು ಯಾವುದರ ಕಡೆಗೆ ತುಡಿತ ಅಥವಾ ನಿರಾಕರಣೆಯನ್ನು ಹೊಂದಿರುತ್ತೇವೆ ಎಂಬು ದನ್ನು ಆಧರಿಸಿರುತ್ತದೆ.

ನಾವು ಹೊತ್ತು ತಂದಿರುವ ಈ ಮಾಹಿತಿ, ನೆನಪುಗಳ ಮೂಟೆಯೇ ಸಂಚಿತ ಕರ್ಮ. ಈ ಸಂಚಿತ ಕರ್ಮದ ಜಾಯಮಾನಕ್ಕೆ ಅನು ಗುಣವಾಗಿ ಶಕ್ತಿಯು ವಿವಿಧ ಆಯಾಮ ಗಳತ್ತ ಹರಿಯುತ್ತದೆ. ಸಂಚಿತ ಕರ್ಮವು ಐಹಿಕ ಸುಖಭೋಗಗಳತ್ತ ಹೆಚ್ಚು ಒಲವು ಹೊಂದಿದ್ದರೆ ಶಕ್ತಿಯೂ ಅತ್ತ ಹರಿಯುತ್ತದೆ. ಅದು ಬೌದ್ಧಿಕ ಒಲವುಳ್ಳದ್ದಾಗಿದ್ದರೆ ಶಕ್ತಿಯೂ ಅತ್ತ ಕೇಂದ್ರೀಕೃತವಾಗುತ್ತದೆ. ಅಧ್ಯಾತ್ಮಿಕ ಸ್ವರೂಪದ್ದಾಗಿದ್ದರೆ ಶಕ್ತಿಯು ಆ ಆಯಾ ಮದತ್ತ ಹೊರಳುತ್ತದೆ. ಒಂದೇ ಕುಟುಂಬ ದಲ್ಲಿ ಹುಟ್ಟಿದ್ದರೂ ಕೆಲವರು ಬುದ್ಧಿವಂತ ರಾಗಿರುವುದು, ಇನ್ನು ಕೆಲವರು ಆಧ್ಯಾತ್ಮಿಕ ಸೆಳೆತ ಹೊಂದಿರುವುದು; ತದ್ವಿರುದ್ಧ ಸ್ವಭಾವದ ಅಣ್ಣ ತಮ್ಮಂದಿರು ಇರುವುದು ಇದೇ ಕಾರಣಕ್ಕೆ.

ಈ ಹಂಚಿಕೆ ನಡೆಯುವುದು ನೈಸರ್ಗಿಕ ವಾಗಿ. ಆದರೆ ಇದನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ ಎಂದೇನಿಲ್ಲ. ಒಬ್ಟಾತ ನೈಸರ್ಗಿಕ ಸೆಳೆತಗಳನ್ನೇ ಅನುಸರಿಸಿ ಬದುಕುತ್ತಾನೆ ಎಂದಾದರೆ ಆತನ ಪಾಲಿಗೆ ಬದುಕು ಪೂರ್ವ ನಿರ್ಧರಿತ. ನೈಸರ್ಗಿಕ ಸೆಳೆತಗಳ ದಾಸರಾದರೆ ಬದುಕು ಅದರಷ್ಟಕ್ಕೆ ಅದರ ದಾರಿ ಹಿಡಿಯುತ್ತದೆ.

ಜೀವಿತದ ಶಕ್ತಿಯನ್ನು ಬೇಕಾದ ಕಡೆಗೆ ಹರಿಯಿಸುವುದು, ನಿಭಾಯಿಸುವುದು, ಶಕ್ತಿ ವರ್ಧನೆ ಅಥವಾ ದುರ್ಬಲಗೊಳಿಸುವುದು ನಮ್ಮ ಕೈಯಲ್ಲಿದೆ. ಆದರೆ ಮೂರನೆಯ ಅಂಶವಾದ ಕಾಲ ಸದಾ ಚಲನಶೀಲ. ಅದನ್ನು ನಿಲ್ಲಿಸಲಾಗದು, ಹಿಡಿದಿಡ ಲಾಗದು, ನಿಧಾನ . ಗೊಳಿಸಲಾಗದು.

Advertisement

ಹೀಗಾಗಿ ಬದುಕಿನ ಸಾಫ್ಟ್ವೇರ್‌ನ ಮೂರು ಅಂಶಗಳಲ್ಲಿ ಶಕ್ತಿ ಮತ್ತು ಸಂಚಿತ ಕರ್ಮವನ್ನು ನಿಭಾ ಯಿಸಬಹುದು. ಆದರೆ ಸಮಯವನ್ನು ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಬೇಕಾದಷ್ಟು ಶಕ್ತಿಯನ್ನು ಉತ್ಪಾದಿಸುವುದು ಮತ್ತು ಅಗತ್ಯವಿದ್ದ ಕಡೆಗೆ ಅದನ್ನು ಹರಿಯಿಸುವುದು ಸಾಧ್ಯ. ನೈಸರ್ಗಿಕ ಒಲವುಗಳಿಗೆ ಕಡಿವಾಣ ಹಾಕಿ ಬೇಕಾದ ಕಡೆಗೆ ತಿರುಗಿಸುವುದೂ ಸಾಧ್ಯ. ಇವೆರಡೂ ನಮ್ಮ ಹಿಡಿತದಲ್ಲಿದೆ. ನಾವು ದೃಢ ಮನಸ್ಸು ಮಾಡಿ ಸಂಕಲ್ಪ ತೊಟ್ಟು ಕಾರ್ಯೋನ್ಮುಖರಾದರೆ ಇವೆರ ಡರ ಮೇಲೂ ನಾವು ನಿಯಂತ್ರಣ ಸಾಧಿಸ ಬಹುದು ಆದರೆ ಸಮಯ ಹಾಗಲ್ಲ.

ಸಮಯವು ನಮ್ಮ ಜೀವಿತಾವಧಿ ಮತ್ತು ಮರಣವನ್ನು ನಿರ್ಧರಿಸುತ್ತದೆ. ಕಾಲವನ್ನು ಗೆಲ್ಲುವವನು ಬದುಕು ಮತ್ತು ಮರಣ ವನ್ನೂ ಗೆಲ್ಲಬಲ್ಲ. ತನ್ನ ಶಕ್ತಿಯ ಮೇಲೆ ಪ್ರಭುತ್ವವನ್ನು ಹೊಂದಿರುವಾತ ತನ್ನ ಬದುಕಿನ ಆಗು ಹೋಗುಗಳನ್ನು ನಿರ್ಧರಿ ಸಬಲ್ಲ. ಸಂಚಿತ ಕರ್ಮಗಳ ಮೇಲೆ ಮೇಲೆ ಪ್ರಭುತ್ವ ಹೊಂದಿ ನೈಸರ್ಗಿಕ ಒಲವುಗಳನ್ನು ಹಿಡಿದಿಡಬಲ್ಲವನು ಅಥವಾ ಅವುಗಳಿಂದ ಮುಕ್ತನಾದವನು ತನ್ನ ಜೀವನದ ಗುಣಮಟ್ಟವನ್ನು ನಿರ್ಧರಿಸಬಲ್ಲ.

ನಮ್ಮ ಬದುಕನ್ನು ಕಟ್ಟುವುದು ಇವೇ ಮೂರು. ಈ ಮೂರು ಸಂಗತಿಗಳ ಸಂಯೋಜನೆಯೇ ನಾವು ಈಗ ಏನಾಗಿದ್ದೇ ವೆಯೋ ಅದು. ತನ್ನೊಳಗಿನ ಚಾಲಕ ಶಕ್ತಿ ಯಾಗಿರುವ ಈ ಮೂರನ್ನೂ ಗ್ರಹಿಸಿ ಪ್ರಜ್ಞಾ ಪೂರ್ವಕವಾಗಿ ಚಲಾಯಿಸಬಲ್ಲವನು ಸರ್ವಸ್ವತಂತ್ರನಾಗಿರುತ್ತಾನೆ. ಮುಕ್ತಿ ಎಂದರೆ ಅದೇ.

Advertisement

Udayavani is now on Telegram. Click here to join our channel and stay updated with the latest news.

Next