Advertisement
ಪಟ್ಟಣದ ಎಪಿಎಂಸಿ ಮಾರ್ಕೇಟ್ ಯಾರ್ಡಿನ ಜನದಟ್ಟಣೆ ಇರುವ ಮುಖ್ಯರಸ್ತೆಯಲ್ಲಿಯೇ ಈ ಘಟನೆ ಜರುಗಿದ್ದು ದುರ್ವಾಸನೆಯಿಂದ ವರ್ತಕರು ಹಾಗೂ ರೈತರು ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.
ಮತ್ತು ಭೋಗೇಶ್ವರ ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು ಈ ದುರ್ನಾತದ ಪರಿಣಾಮ ಆಗಮಿಸುವ ಶಾಲಾ ಮಕ್ಕಳು
ಮತ್ತು ಮಹಿಳೆಯರು ಹಾಗೂ ಜನತೆ ಅಸಹ್ಯ ಪಟ್ಟುಕೊಂಡು ತಿರುಗಾಡುವಂತೆ ಮಾಡಿದೆ.
Related Articles
Advertisement
ಆದರೆ ಥರ್ಡ್ ಪಾರ್ಟಿ ಕೆಲೆವೆಡೆ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೆಲವು ಜಾಗೆಗಳನ್ನು ಗುರುತಿಸಿ ಕೊಟ್ಟಿದ್ದರು. ಆದರೆ ಥರ್ಡ್ ಪಾರ್ಟಿ ನೀಡಿದವರಗೂ ಬೆಲೆ ನೀಡದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮೂಗಿಗೆ ತುಪ್ಪ ಸವರಿದಂತೆ ಸರಿಪಡಿಸುವ ಭರವಸೆ ನೀಡಿದರು. ಆದರೆ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯಲಿಲ್ಲ. ಕಾಮಗಾರಿ ಅಪೂರ್ಣಗೊಂಡಿದೆ ಎಂಬ ಹಿನ್ನೆಲೆ ಇನ್ನೂ ಒಳಚರಂಡಿಯ ಉಸ್ತುವಾರಿಯನ್ನು ಪುರಸಭೆ ಕೂಡಾ ವಹಿಸಿಕೊಂಡಿಲ್ಲ.
ಸುಮಾರು ಎರಡು ತಿಂಗಳ ಹಿಂದೆ ಪಟ್ಟಣದ ಸಂಗಮ ಲಾಡ್ಜ್ ಹತ್ತಿರವೂ ಇದೇ ತರಹದ ಛೇಂಬರ್ ಸ್ಫೋಟಗೊಂಡುಮುಖ್ಯರಸ್ತೆಯಲ್ಲಿಯೇ ಮಲಮೂತ್ರ ಹರಿದು ಜನತೆ ಪ್ರತಿಭಟನೆ ಹಾದಿ ಹಿಡಿಯುವ ಹೊತ್ತಿಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿ ಕಾರಿಗಳು ಭೇಟಿ ನೀಡಿ ದುರಸ್ತಿಗೊಳಿಸಿ ತೆರಳಿದ್ದರು. ಆದರೆ ತಿಂಗಳ ಹೊತ್ತಿಗೆ ಮತ್ತೂಂದು ಛೇಂಬರ್ ಸ್ಫೋಟಗೊಂಡಿರುವುದು ಒಳಚರಂಡಿ ಕಾಮಗಾರಿ ಕಳಪೆ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿ¨