Advertisement

Ram Mandir: ಹೂವುಗಳ ತ್ಯಾಜ್ಯವು ಗಂಧದಕಡ್ಡಿಯಾಗಿ ಬದಲಾಗುತ್ತೆ!

12:27 AM Jan 23, 2024 | Team Udayavani |

ಅಯೋಧ್ಯಾ: ಅಯೋಧ್ಯಾಧಾಮದಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠೆ ವೇಳೆ ಬಳಸಲಾದ ಭಾರೀ ಪ್ರಮಾಣದ ಹೂವುಗಳು ಒಂದೆರಡು ದಿನಗಳಲ್ಲೇ ಒಣಗಿ ಹೋಗಿ, ವ್ಯರ್ಥವಾಗುತ್ತವೆ ಎಂದು ಭಾವಿಸಿದ್ದೀರಾ? ಖಂಡಿತಾ ಇಲ್ಲ.

Advertisement

ಈ ಎಲ್ಲ ಹೂವುಗಳು ಕೆಲವೇ ದಿನಗಳಲ್ಲಿ ಸುಗಂಧ ಬೀರುವ ಗಂಧದ ಕಡ್ಡಿಗಳಾಗಿ ಬದಲಾಗಲಿವೆ. ಹೌದು, ಅಯೋಧ್ಯೆ ನಗರ ಪಾಲಿಕೆಯು ಹೂವುಗಳ ತ್ಯಾಜ್ಯಗಳನ್ನು ಸಂಸ್ಕರಿಸಿ, ಅವುಗಳಿಂದ ಅಗರಬತ್ತಿಗಳನ್ನು ತಯಾರಿಸುವ ಪ್ರಕ್ರಿಯೆ ಆರಂಭಿಸಿದೆ. ಅಂದಾಜಿನ ಪ್ರಕಾರ, ಅಯೋಧ್ಯಾಧಾಮದ ಎಲ್ಲ ದೇಗುಲಗಳಲ್ಲಿ 9 ಮೆಟ್ರಿಕ್‌ ಟನ್‌ನಷ್ಟು ಹೂವುಗಳ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಪ್ರಕ್ರಿಯೆಯಿಂದ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಜತೆಗೆ, ಹೂವುಗಳ ಸಮರ್ಪಕ ಪುನರ್ಬಳಕೆಯೂ ಸಾಧ್ಯವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next