Advertisement

ಕಾಸರಗೋಡಿನ ಕಲಾವಿದರಿಗೆ ಸುವರ್ಣವಕಾಶ ಕಲ್ಪಿಸುತ್ತಿರುವ ಫ್ಲವರ್ ಚಾನೆಲ್

02:26 PM Jan 04, 2018 | Team Udayavani |

ಬದಿಯಡ್ಕ: ಫ್ಲವರ್ ಕಾಮಿಡಿ ಉತ್ಸವ್‌ ಎಂಬ ಕಾಮಿಡಿಯಾತ್ರೆಯು ಆಯ್ಕೆ ಪ್ರಕ್ರಿಯೆ ಕಾಸರಗೋಡಿನಿಂದ ಪ್ರಾರಂಭಗೊಂಡು ಕೇರಳದಾದ್ಯಂತ ಸಂಚರಿಸಿ ಗಾಯಕರನ್ನು, ವಾದಕರನ್ನು, ಮಿಮಿಕ್ರಿ ಮುಂತಾದ ಕ್ಷೇತ್ರದಲ್ಲಿ ಅಸಾಮಾನ್ಯ ಪ್ರತಿಭೆಯಿರುವ ಅಂಗವಿಕಲತೆಯಿಂದ ತೆರೆಮರೆಯಲ್ಲೇ ಉಳಿದಿರುವವರನ್ನು ಆಯ್ಕೆ ಮಾಡಿ ಕಾಮಿಡಿ ಉತ್ಸವದ ವೇದಿಕೆಯಲ್ಲಿ ಕಲಾಪ್ರದರ್ಶನಕ್ಕೆ ಅವಕಾಶ ನೀಡುವುದು ಹಾಗೂ ದೇಶ ವಿದೇಶಗಳ ಕಲಾಭಿಮಾನಿಗಳಿಗೆ ಈ ಮೂಲಕ ಸಾಧಕರನ್ನು ಪರಿಚಯಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಉದುಮ ಶಾಸಕ ಕುಂಞಿರಾಮನ್‌ ಹೆಶಿದರು.

Advertisement

ಅವರು ಫ್ಲವರ್ ಚಾನೆಲ್‌ ಬೋವಿಕ್ಕಾನದ ಸೌರ್ಪಣಿಕ ಅಡಿಟೋರಿಯಂನಲ್ಲಿ ಹಮ್ಮಿಕೊಂಡ ಕಾಮಿಡಿ ಯಾತ್ರೆಯನ್ನು  ದೀಪಬೆಳಗಿಸಿ ಉದ್ಘಾಟಿಸಿದರು.  ದೂರದ ಕೊಚ್ಚಿಯಿಂದ ಜನಸಾಮಾನ್ಯರ ಬಳಿಗೆ ಬಂದು ನಡೆಸುವ ಆಯ್ಕೆ ಪ್ರಕ್ರಿಯೆಯು ನಮ್ಮೂರ ಪ್ರತಿಭೆಗಳಿಗೆ ವರದಾನವಾಗಿ ಪರಿಣಮಿಸಲಿದೆ. ಕಲಾವಿದರಿಗೊಂದು ಸುವರ್ಣವಕಾಶ ಎಂದು ಶಾಸ ಕರು ಅಭಿಪ್ರಾಯ ವ್ಯಕ್ತಪಡಿಸಿದರು.  ಮುಳಿಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಖಾಲಿದ್‌ ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಅದೂರು ಸಿ.ಐ, ಚಲನ ಚಿತ್ರನಟರು ಆದ ಸಿಬಿ ಥೋಮಸ್‌ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. 

ಪ್ರಸ್ತುತ ಕಾರ್ಯಕ್ರಮದಲ್ಲಿ ಮುಳಿಯಾರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಗೀತಾಗೋಪಾಲನ್‌, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರನ್‌ ಕೆ, ಕ್ಷೇಮ ಸಮಿತಿ ಅಧ್ಯಕ್ಷ ಜಸೀಲಾ ಅಸ್ಲಾಂ ಕುಂಜಾರು ಹಾಗೂ ಮುಳಿಯಾರು ಗ್ರಾಮ.ಪಂ ಸದಸ್ಯರಾದ ಆಸಿಯಾ ಹಮೀದ್‌, ಅನೀಸಾ ಮನ್ಸೂರ್‌, ಗಣೇಶ್‌, ಬಾಲಕೃಷ್ಣನ್‌ ಪಿ, ಮಿನಿ ಪಿ.ಬಿ, ಶೋಭಾ, ಸುರೇಂದ್ರನ್‌ ಕೆ, ಮಾಧವನ್‌, ನಸೀಮಾ ಎ, ಅಸೀಸ್‌ ಎಂ.ಎ, ಕಮರುನಿಸಾ ಹಾಗೂ ಮಿಮಿಕ್ರಿ ಕಲಾವಿದೆಯರಾದ ಅಂಬಿಕಾ ಪ್ರಸನ್ನ ಚಂದ್ರನ್‌ ಹಾಗೂ ಸರಿತಾ ಮಲ್ಲ ಮತ್ತು ಪ್ಲವರ್ ಚಾನೆಲ್‌ ಕಾಮಿಡಿ ಉತ್ಸವದ ನಿರ್ದೇಶಕ ಹಾಗೂ ನಿರ್ಮಾಪಕರಾದ ಮಿಥಿಲ್‌ ರಾಜ್‌, ಸತೀಶ್‌, ಶಿಬು ಕುಂಜೀರಾ, ಸುಧಿ ಮೊದಲಾದವರು ಸಮಾರಂಭದ ವೇೆದಿಕೆಯಲ್ಲಿ ಉಪಸ್ಥಿತರಿದ್ದರು. 

ಮುಳಿಯಾರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 35 ಪ್ರತಿಭಾ ಸಂಪನ್ನ ಕಾಮಿಡಿ ಉತ್ಸವದಲ್ಲಿ ಭಾಗವಹಿಸುವ ಭಾಗ್ಯವನ್ನು ತಮ್ಮದಾಗಿಸಿಕೊಂಡರು.

ಆಯ್ಕೆ ಪ್ರಕ್ರಿಯೆ ಸ್ಥಳಗಳು  
ಜ.4 ಬೆಳಿಗ್ಗೆ 9 ಕ್ಕೆ ಜ್ಯೋತಿಭವನ ನರಿಮಾಳಂ, ಮಧ್ಯಾಹ್ನ 12 ಪರಪ್ಪ ರೋಯಲ್‌ ಪಾಲೆಸ್‌ ಅಡಿಟೋರಿಯಮ್‌, 3.30ಕ್ಕೆ ಸ್ನೇಹ ಭವನ್‌ ಅಂಬಲತ್ತರ, 5.30 ಆಕಾಶ ಪರವಗಲ್‌ ಅಂಬಲತ್ತರ, ಬೆಳಿಗ್ಗೆ 9 ಗಂಟೆಗೆ ಸತ್ಯಸಾಯಿ ಗ್ರಾಮಂ ಇರಿಯ(ಎಂಡೋಸಲ್ಫಾನ್‌ ಬಾಧಿತನ ಕೇಂದ್ರ), ಮಧ್ಯಾಹ್ನ 12 ಗಂಟೆಗೆ ರಾಣಿಪುರಂ, 3.30ಕ್ಕೆ ಕೋಳಿಚ್ಚಾಲ್‌, 5.30ಕ್ಕೆ ಮಿಮಿಕ್ನಿ ಕಲಾವಿದರಾದ ಪುಲ್ಲಡಿ ಅನಿಲ್‌ ಸಿ.ಆರ್‌ ಅವರ ಮನೆಯಲ್ಲಿ, ಬೆಳಗ್ಗೆ 9 ಕ್ಕೆ ಚೀರ್ಕಾಯ, ಸುಬ್ರಹ್ಮಣ್ಯ ಸ್ವಾಮಿ ಅಡಿಟೋರಿಯಂ, 12 ಕ್ಕೆ ಎಸ್‌.ಬಿ.ಐ ಸಮೀಪ ವೆಳ್ಳರಿಕುಂಡ್‌, 2 ಕ್ಕೆ ರಾಮಚಂದ್ರನ್‌ ಮಿಮಿಕ್ರಿ ಕಲಾವಿದರ ಮನೆ, 4.30ಕ್ಕೆ ಎಂ.ಜಿ.ಎಂ.ಯು.ಪಿ ಶಾಲೆ ಕೋಟಮಲೆ ನರ್ಕಿಲಕ್ಕಾಡ್‌ ಮುಂತಾದ ಕಡೆ ಆಯ್ಕೆ ಪ್ರಕ್ರಿಯೆ ನಡೆಯಲಿರುವುದು. ಜ.6ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿರುವುದು ಎಂದು ಸುಧೀಶ್‌ ಕೆ.ಕೆ. ತಿಳಿಸಿದ್ದಾರೆ.

Advertisement

ಕಲೆ  ಒಲಿಸಿಕೊಂಡವರು 
ಹಲವರು ಇದ್ದಾರಾದರೂ ಪ್ರೋತ್ಸಾಹ ಹಾಗೂ ಅವಕಾಶದ ಕೊರತೆ ಅವರನ್ನು ಎಲೆ ಮರೆಯಲ್ಲೇ ಉಳಿಯುವಂತೆ ಮಾಡಿದೆ.  ಅದರಲ್ಲೂ ದೈಹಿಕವಾದ ಸಮಸ್ಯೆಗಳಿಂದ ಸಾಮಾನ್ಯ ಜನರಂತೆ ಓಡಾಡ ಲಾಗದೆ, ಇತರರ ಸಹಾಯದಿಂದ ಬದುಕುವ ಕಲಾವಿದರ ಪ್ರತಿಭೆಯನ್ನು ಸಾಧನೆಯನ್ನು ಗುರುತಿಸಿ ಅವರಿಗೂ ಒಂದು ಸೂಕ್ತ  ವೇದಿಕೆಯನ್ನು ಒದಗಿಸಿ ಅವರನ್ನೂ ಜನರಿಗೆ ಪರಿಚಯಿಸುವ ಉದ್ಧೇಶದಿಂದ ಕೇರಳದ ಪ್ರತಿಯೊಂದು ಜಿಲ್ಲೆಗಳಲ್ಲೂ ಪ್ರತಿಭೆಯ ಬೇಟೆಗೆ ಮುಂದಾಗಿರುವುದೇ ಪ್ಲವರ್ ಚಾನೆಲ್‌.

ಸುಪ್ತ ಪ್ರತಿಭೆಗಳನ್ನು ಹೊರತರುವುದರ ಮೂಲಕ ಅವರಿಗೆ ಅನುಕೂಲ ಹಾಗೂ ಅವಕಾಶಗಳನ್ನು ಲಭಿಸುವಂತೆ ಮಾಡುವುದೇ ನಮ್ಮ ಪ್ರಧಾನ ಉದ್ದೇಶ ಲಕ್ಷಾಂತರ ಪ್ರೇಕ್ಷಕರನ್ನು ಹೊಂದಿರುವ ಕಾರ್ಯಕ್ರಮ ಇದಾಗಿದೆ.
ಸುಧೀಶ್‌ ಕೆ.ಕೆ. ಯಾತ್ರೆಯ ಕೋರ್ಡಿನೇಟರ್‌

ಬಹುಭಾಷಾ ಸಂಗಮ ಭೂಮಿ ಕಾಸರಗೋಡು ಕಲಾವಿದರಿಂದಲೂ ಸಂಪನ್ನವಾಗಿದೆ. ಆದರೆ ಸರಿಯಾದ ಅವಕಾಶದ ಕೊರತೆ ಹಾಗೂ ಕೆಲವು ತೊಂದರೆಗಳು ಅವರನ್ನು ಕಾಡುತ್ತಿದೆ. ಆದುದರಿಂದ ಕಾಸರಗೋಡಿನಿಂದಲೇ ಈ ಯಾತ್ರೆಯನ್ನು ಪ್ರಾರಂಭಿಸಲು ತೀರ್ಮಾನಿಸಿದೆ.
ಮಿಥುಲ್‌ ರಾಜ್‌, ನಿರ್ದೇಶಕ ಹಾಗೂ ನಿರ್ಮಾಪಕ, ಫ್ಲವರ್ ಚಾನೆಲ್‌

ಅಂಗವೈಕಲ್ಯದಿಂದ ಯಾವುದೇ ಅವಕಾಶಗಳನ್ನು ತಿಳಿಸಿ ಕೊಳ್ಳಲಾಗದೆ ಇರುವ ನಮ್ಮಂತವರಿಗೆ ಈ ಯಾತ್ರೆ ಜೀವನದ ಹೊಸಯಾತ್ರೆಯೆಂದರೂ ತಪ್ಪಲ್ಲ. ನಮಗೆ ಅವಕಾಶವನ್ನು ಒದಗಿಸಿ ನಮ್ಮಲ್ಲಿ ಅತ್ಮವಿಶ್ವಾಸವನ್ನು ತುಂಬಿಸಿದ ಯಾತ್ರೆ ಕಾಮಿಡಿ ಉತ್ಸವ ಯಾತ್ರೆ.
ದೇವಿಕಿರಣ್‌ ಬೀಜತಕಟ್ಟೆ ಬೆಳ್ಳೂರು(ಯಾತ್ರೆಯಲ್ಲಿ ಪಾಲ್ಗೊಂಡ ಅಂಧ ವಿದ್ಯಾರ್ಥಿ)

Advertisement

Udayavani is now on Telegram. Click here to join our channel and stay updated with the latest news.

Next