ಹುಮನಾಬಾದ: ಬಸವಣ್ಣನವರು ಸಾರಿದ “ಕಾಯಕವೇ ಕೈಲಾಸ’ ಎನ್ನುವ ಮಾತಿಗೆ ಹೂಗಾರ ಮಾದಯ್ಯ ಉತ್ತಮ ನಿದರ್ಶನವಾಗಿದ್ದರು ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ಹೇಳಿದರು. ಹಳ್ಳಿಖೇಡ(ಬಿ) ಪಟ್ಟಣದ ಆರ್ಯ ಸಮಾದಲ್ಲಿ ನಡೆದ ತಾಲೂಕು ಹೂಗಾರ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಕ್ರಾಂತಿ ಕಾರ್ಯಗಳಿಗೆ ಶ್ರಮಿಸಿದ ನೂರಾರು ಶರಣರೊಂದಿಗೆ ಹೂಗಾರ ಮಾದಣ್ಣನವರ ಸೇವೆ ಕೂಡ ಅಪಾರವಾಗಿದೆ. ಮನುಷ್ಯ ಹುಟ್ಟಿನಿಂದ ಸಾಯುವನತಕ ಹೂಗಾರನ ಸೇವೆ ಅವಶ್ಯವಾದದ್ದು. ಹೂವು ಇಲ್ಲದ ಕಾರ್ಯಗಳು ಯಾವುದೂ ಇಲ್ಲ. ಹೂಗಾರ ನೀಡುವ ಹೂಗಳು ದೇವರ ಶಿರಕ್ಕೆ ಅರ್ಪಣೆಯಾದರೆ, ಗುರುವಿನ ಕಾಲಿಗೆ ಶೋಭೆ ನೀಡುತ್ತವೆ. ಅಲ್ಲದೆ ಮಹಿಳೆಯರಿಗೆ ಶೃಂಗಾಂರ ನೀಡುವ ಶಕ್ತಿ ಹೂವಿಗಿದೆ. ಜಾತಿ, ಭೇದಗಳಿಗೆ ಅವಕಾಶ ನೀಡದೇ ನಿರಂತರಾಗಿ ಸೇವೆ ಸಲ್ಲಿಸುವ ಹೂಗಾರ ಸಮಾಜವನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಅನುಭವ ಮಟ್ಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವಾದಿ ಶರಣರ ಸಮಕಾಲಿನ ಹೂಗಾರ ಮಾದಣ್ಣ ಅವರ ಸೇವೆ ಅಪಾರವಾಗಿದೆ. ಎಲ್ಲಾ ಶರಣರ ಪೂಜೆಗಳಿಗೆ ಹೂ ಪೂರೈಸುವುದರೊಂದಿಗೆ ಅನೇಕ ವಚನಗಳನ್ನು ರಚಿಸಿದ ಕೀರ್ತಿ ಹೂಗಾರ ಮಾದಣ್ಣನವರಿಗಿದೆ. ಕಾಯಕದ ಮೂಲಕವೇ ಗುರುತಿಸಿಕೊಂಡ ಹೂಗಾರ ಸಮಾಜದವರ ಕಾರ್ಯ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು.
ದತ್ತ ದಿಗಂಬರ ಶಂಕರಲಿಂಗ ಆಶ್ರಮದ ಶಂಕರಲಿಂಗ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹೂಗಾರ ಸಮಾಜದ ರಾಜ್ಯ ಅಧ್ಯಕ್ಷ ಅರವಿಂದ ಹೂಗಾರ, ಪ್ರಧಾನ ಕಾರ್ಯದರ್ಶಿ ಲೋಚನೇಶ ಹೂಗಾರ, ಜಿಲ್ಲಾ ಅಧ್ಯಕ್ಷರು ಚಂದ್ರಕಾಂತ ಹೂಗಾರ ಗಾದಗಿ, ಪ್ರವೀಣ ಹೂಗಾರ ಹಳ್ಳಿಖೇಡ(ಬಿ), ಜಿಪಂ ಸದಸ್ಯೆ ಸುನಿತಾ ಸಗರ, ತಾಪಂ ಸದಸ್ಯ ಮಲ್ಲಿಕಾರ್ಜುನ ಪ್ರಭಾ, ಶಾರಾದಾಬಾಯಿ ಬಾವಗಿ, ಸೂರ್ಯಕಾಂತ ಫುಲಾರಿ ಕಲಬುರಗಿ, ಕಲಬುರಗಿ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಹೂಗಾರ, ಭಾರತಿ ಹೂಗಾರ, ಈರಮ್ಮಾ ಹೂಗಾರ, ಧನರಾಜ ಫುಲಾರಿ ಬೀದರ, ಅಶೋಕ ಹೂಗಾರ, ರವಿಕಾಂತ ಹೂಗಾರ, ಶರಣು ಹೂಗಾರ, ಶಿವಪುತ್ರ ಹೂಗಾರ, ಮನೋಹರ ಫುಲಾರಿ, ಸೂರ್ಯಕಾಂತ ಫುಲಾರಿ ಔರಾದ, ಶ್ರೀದೇವಿ ಹೂಗಾರ, ವಿನೋದ ಹೂಗಾರ, ಪ್ರವೀಣ ಹೂಗಾರ, ವಿಷ್ಣುಕಾಂತ ಹೂಗಾರ, ಸಂಗಂಮೇಶ ಹೂಗಾರ, ಶಶಿಕಾಂತ ಹೂಗಾರ, ಶಶಿಧರ ಹೂಗಾರ, ಮಹೇಶ ಹೂಗಾರ, ಕೈಲಾಸ ಹೂಗಾರ, ಬಸವರಾಜ ಹೂಗಾರ, ವಿಜಕುಮಾರ ಹೂಗಾರ, ಶಿವಕುಮಾರ ಹೂಗಾರ, ಸಂಜುಕುಮಾರ ಹೂಗಾರ, ಜಗನ್ನಾಥ ಹೂಗಾರ, ಕಾಶಪ್ಪಾ ಹೂಗಾರ, ಶ್ರೀಕಾಂತ ಹೂಗಾರ, ಶಾಮಣ್ಣಾ ಹೂಗಾರ ಇದ್ದರು.