Advertisement
ತೋಟಗಾರಿಕೆ ಮಹಾವಿದ್ಯಾಲಯ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿಯೂ ದೊಡ್ಡಮಟ್ಟದ ಔಷ ಧದ ಸಸ್ಯಗಳ ಸಂರಕ್ಷಣೆ ಮಾಡಬಹುದು ಎಂದು ತಿಳಿಸಿದ ಅವರು, ಮೂಡಿಗೆರೆಯಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ನಾನು ಇಲ್ಲಿ ಸಂರಕ್ಷಕನಾಗಿ, ಸಂವರ್ಧನಕಾರನಾಗಿ, ಸಂಶೋಧಕನಾಗಿ ಭಾಗವಹಿಸುತ್ತಿದ್ದೇನೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ತಪ್ಪಲಿನಲ್ಲಿ ಔಷಧೀಯ ಸಸ್ಯಗಳು ಹೇರಳವಾಗಿ ಸಿಗುತ್ತದೆ. ಸುಮಾರು 340 ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯತೋಟಗಳಿವೆ. ಅದರಲ್ಲಿ ಹೇರಳವಾಗಿ ಔಷಧೀಯ ಸಂರಕ್ಷಣೆ ಮಾಡಲಾಗುತ್ತಿದೆ. ಸುಮಾರು 80 ಸಾವಿರ ಎಕರೆ ಪ್ರದೇಶವಿದೆ. 2003ರಿಂದ ಈಚೆಗೆ ಮಳೆಕೊಯ್ಲು, ಅರಣ್ಯೀಕರಣಗಳನ್ನು ಮಾಡುವುದರ ಮೂಲಕ ಕಪ್ಪತ್ತಗುಡ್ಡದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ಕಪ್ಪತ್ತಗುಡ್ಡ ಬಂಗಾರದ ಗುಡ್ಡವಾಗಿದ್ದು, ಆರು ಜಿಲ್ಲೆಗಳಿಗೆ ಆಧಾರವಾಗಿದೆ ಎಂದರು.
Advertisement
ಸಸ್ಯಸಂಪತ್ತು ಜೀವಸಂಕುಲದ ಉಳಿವಿಗೆ ಕಾರಣ: ಸ್ವಾಮೀಜಿ
05:22 PM Apr 26, 2018 | |
Advertisement
Udayavani is now on Telegram. Click here to join our channel and stay updated with the latest news.