Advertisement
ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ನದಿಗೆ ಸುಮಾರು 90 ಸಾವಿರ ಕ್ಯೂಸೆಕ್ ನೀರನ್ನು ಬಿಡುತ್ತಿರುವುದರಿಂದ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಕೆಳಭಾಗದಲ್ಲಿ ನೀರು ಹರಿಯುತ್ತಿರುವುದು ಕಂಡು ಬಂದಿತು.
ಕಂಡು ಬಂತು. ಜೊತೆಗೆ ಕಂಪ್ಲಿಯಿಂದ ಗಂಗಾವತಿಗೆ ಹೋಗುವವರು ಹಾಗು ಗಂಗಾವತಿ ಭಾಗದಿಂದ ಕಂಪ್ಲಿ ಕಡೆಗೆ ಬರುವವರು ತಮ್ಮ ಸಾಮಗ್ರಿಗಳನ್ನು ಹೊತ್ತುಕೊಂಡು ಸೇತುವೆ ಮೇಲೆ ನಡೆದುಕೊಂಡು ಬರುವ ಹಾಗೂ ಆಟೋಗಳ ಮೂಲಕ ಸಂಚರಿಸುವ ದೃಶ್ಯ ಸಂಜೆಯವರೆಗೂ ಕಂಡು ಬಂತು. ಪುರಸಭೆ ಅಧ್ಯಕ್ಷರಾದ ಎಂ. ಸುಧೀರ್, ಕಂದಾಯ ಇಲಾಖೆ ಅಧಿಕಾರಿಗಳು ಸೇತುವೆ ಮೇಲಿನ ಕಸಕಡ್ಡಿ,ಗಿಡ ಮರಗಳ ತೆರವು ಕಾರ್ಯ ಪರಿಶೀಲಿಸಿದರು. ನದಿಯಲ್ಲಿ ಪ್ರವಾಹ ಕಡಿಮೆಯಾಗಿದ್ದರೂ ಯಾವ ಕ್ಷಣದಲ್ಲಿಯಾದರೂ ಪುನಃ ಪ್ರವಾಹ ಬರಬಹುದು ಎಂಬ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಕಂಪ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪುರಸಭೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು.