Advertisement

ಮಾಣಿ: ಪೇಟೆಯಲ್ಲಿ ಕೃತಕ ಪ್ರವಾಹ

02:35 AM Jun 09, 2018 | Team Udayavani |

ಮಾಣಿ : ಶುಕ್ರವಾರ ಸುರಿದ ಭಾರೀ ಮಳೆಗೆ ಮಾಣಿ ಪೇಟೆಯಲ್ಲಿ ಮತ್ತು ಗ್ರಾ.ಪಂ. ಕಚೇರಿಯಿಂದ ಹೊರಡುವ ರಸ್ತೆಯಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗಿದೆ. ಮಾಣಿಯಿಂದ ಕಾಪಿಕಾಡಿಗೆ ತೆರಳುವ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಮಾಣಿ ಗ್ರಾ.ಪಂ. ಕಚೇರಿಯಿಂದ ಹೊರಬರುವ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ನೀರು ಹರಿಯುವ ರಭಸಕ್ಕೆ ದೊಡ್ಡದಾದ ಹೊಂಡವೊಂದು ಉಂಟಾಗಿ ಅದರೊಳಗೆ ತುಂಬುತ್ತಿತ್ತು. ಅದನ್ನು ಮುಚ್ಚಿದ ಬಳಿಕ ರಸ್ತೆಯಲ್ಲೇ ಕೃತಕ ಪ್ರವಾಹ ಉಂಟಾಯಿತು. ರಾ. ಹೆ. ಬದಿಯಲ್ಲಿ ಚರಂಡಿ ಇಲ್ಲದೇ ರಸ್ತೆಯನ್ನು ನೀರು ಆವರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next