ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಳೆಗಾಲದ ವೇಳೆಅತಿಯಾದ ಮಳೆಯಿಂದ ನೆರೆಬಂದು ಜನರು ನೀರಿನಲ್ಲಿಸಿಕ್ಕಿಕೊಂಡ ಸಂದರ್ಭಗಳಲ್ಲಿ ಪ್ರಾಥಮಿಕವಾಗಿ ಯಾವ ರೀತಿಯಲ್ಲಿಪಾರು ಮಾಡುಬಹುದು ಎಂದು ಎನ್‌ಡಿಆರ್‌ಎಫ್ ತಂಡಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಮಂಗಳವಾರ ತಾಲೂಕು ಆಡಳಿತದಿಂದ ಪಟ್ಟಣದ ದೊಡ್ಡಕೆರೆಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವಾಹದಲ್ಲಿ ನೀರಿಗೆ ಸಿಲುಕಿರುವಜನರನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡುವ ಬಗೆಯನ್ನುಹಾಸನ, ಮಡಿಕೇರಿ ಹಾಗೂ ಮೈಸೂರು ಜಿಲ್ಲೆಯ ಜವಾಬ್ದಾರಿಹೊಂದಿರುವ ಎನ್‌ಡಿಆರ್‌ಎಫ್ ತಂಡದಿಂದ ಪ್ರಾಯೋಗಿಕ ಮಾಡಿತೋರಿಸಲಾಯಿತು.
ಪ್ರವಾಹದ ಸಂದರ್ಭದಲ್ಲಿ ಮತ್ತೂಂದು ಭಾಗದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಪರಿತಪಿಸುವವರನ್ನು ಬೋಟ್‌ಗಳ ಸಹಾಯದಿಂದ ರಕ್ಷಣೆ ಮಾಡುವ, ಮುಳುಗಿರುವ ವ್ಯಕ್ತಿಗಳನ್ನು ಹಗ್ಗದ ಸಹಾಯದಿಂದ, ರಿಂಗ್‌ಟ್ಯೂಬ್‌ಗಳಹಾಗೂ ಬಂಬುವಿನಿಂದಯಾವ ರೀತಿ ರಕ್ಷಣೆ ಮಾಡಬಹುದು ಮತ್ತು ಮುಳುಗಿ ಪ್ರಜ್ಞಾಹೀನಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಹೇಗೆ ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆನೀಡಬೇಕು ಎಂಬುದನ್ನು ತೋರಿಸಲಾಯಿತು.
ಈ ಸಂದರ್ಭದಲ್ಲಿ ಗಿರೀಶ್ ನಂದನ್ ಮಾತನಾಡಿ, ಸಕಲೇಶಪುರದಲ್ಲಿ ಕಳೆದ ಎರಡು ವರ್ಷಗಳಿಂದ ಅತಿಯಾದ ಮಳೆಯಿಂದಾಗಿತಾಲೂಕಿನಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟ ಅನುಭವಿಸಿದಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಸಿಬ್ಬಂದಿಗಳು ಇಂತಹ ಸಂದರ್ಭಗಳಲ್ಲಿಯಾವ ರೀತಿಮುನ್ನೆಚ್ಚರಿಕೆವಹಿಸಬೇಕುಎಂಬುದು,ನೆರೆಯ ಸಂದರ್ಭದಲ್ಲಿ ಹೇಗೆ ಸನ್ನದ್ಧರಾಗಿ ಇರಬೇಕು ಎಂಬುದನ್ನುತಿಳಿಯಲು ಎನ್‌ಡಿಆರ್‌ಎಫ್ಹಾಗೂಅಗ್ನಿಶಾಮಕದಳದ ತಂಡಗಳಮುಖಾಂತರಪ್ರಾಯೋಗಿಕವಾಗಿ ತಿಳಿಸುವಪ್ರಯತ್ನ ಮಾಡುತ್ತಿದ್ದೇವೆ ಎಂದರು.
ತಹಶೀಲ್ದಾರ್ ಜಯಕುಮಾರ್, ಡಿವೈಎಸ್ಪಿ ಗೋಪಿ, ಎನ್‌ಡಿಆರ್‌ಎಫ್ ಟೀಮ್‌ಕಮಾಂಡೋ ಸೆಂಥಿಲ್ ಕುಮಾರ್,ಹರಿಶ್ಚಂದ್ರಪಾಂಡೆ, ಇಒ ಹರೀಶ್, ಬಿಇಒ ಶಿವಾನಂದ್, ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಬಸವರಾಜ್ ಚಿಂಚೋಳಿ, ಗೃಹರಕ್ಷಕಾ ದಳದ ಸಿಬ್ಬಂದಿ,ಧರ್ಮಸ್ಥಳ ಸಂಘದ ವಿಪತ್ತು ಕಾರ್ಯಪಡೆಯ ಕಾರ್ಯಕರ್ತರು,ವಿವಿಧ ಇಲಾಖೆ ಸಿಬ್ಬಂದಿ ಇದ್ದರು.