Advertisement
ರಾಜ್ಯದಲ್ಲಿ 2021ರ ಜೂನ್‌ನಿಂದ ಅಕ್ಟೋಬರ್ ನಡುವೆ ಸಂಭವಿಸಿದ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಸುಮಾರು 55 ಲಕ್ಷ ಹೆಕ್ಟೇರ್ ಗಳಿಗಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಆದ್ದರಿಂದ ಎನ್‌ಡಿಆರ್‌ಎಫ್ ಮಾನದಂಡಗಳಿಗಾಗಿ ಕಾಯದೆ ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದ ರೈತರಿಗೆ ನೆರವು ಘೋಷಿಸಿದೆ. ಈ ನೆರವು 2 ಹೆಕ್ಟೇರ್ ಮಿತಿಯವರೆಗೆ ಒದಗಿಸಲಾಗುವುದು ಎಂದು ಸರಕಾರ ಹೇಳಿದೆ.
ಮಾದಕ ದ್ರವ್ಯ ತಡೆ ಕ್ರಿಯಾ ಯೋಜನೆ ಸಾಮಾಜಿಕ ನ್ಯಾಯ ಇಲಾಖೆಯು ಕೇಂದ್ರದ ಮಾದಕ ದ್ರವ್ಯ ತಡೆ ಕ್ರಿಯಾ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಿದೆ. ಮಾದಕ ವ್ಯಸನ ತಡೆಗೆ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
Related Articles
Advertisement
ಸಹಕಾರಿ ಸಂಘಗಳ ಸದಸ್ಯರ ನಿಯಮಿತ ತಿಳಿವಳಿಕೆಗಾಗಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಸರಕಾರ ನಿರ್ಧರಿಸಿದೆ. ಮಹಾರಾಷ್ಟ್ರ ಸಹಕಾರ ಸಂಘಗಳ ಕಾಯ್ದೆ, 1960ರ ಸೆಕ್ಷನ್ 73ಅ ಯ ಉಪವಿಭಾಗ (3)ಕ್ಕೆ ತಿದ್ದುಪಡಿ ತರಲು ನಿರ್ಧಾರ ತೆಗೆದುಕೊಳ್ಳಲಾಯಿತು
ಕಲಾವಿದರಿಗೆ ನೆರವುಕೊರೊನಾ ಹಿನ್ನೆಲೆಯಲ್ಲಿ ಕಲಾವಿದರು ಮತ್ತು ಸಂಸ್ಥೆಗಳಿಗೆ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ. ಕೊರೊನಾದಿಂದ ಸಂಸ್ಕೃತಿ ಮತ್ತು ಕಲೆಯ ಕ್ಷೇತ್ರದಲ್ಲಿ ವಿವಿಧ ಕಲಾವಿದರಿಗೆ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ರಾಜ್ಯದಲ್ಲಿ 56,000 ಕಲಾವಿದರಿದ್ದು, ಕಲಾವಿದರಿಗೆ ತಲಾ 5,000 ರೂ. ಗಳಂತೆ ಒಟ್ಟು 28 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು, ಪ್ರಾಯೋಗಿಕ ಕಲೆಗಳ ಕ್ಷೇತ್ರದಲ್ಲಿ 847 ಸಂಸ್ಥೆಗಳಿಗೆ ಒಟ್ಟು 34 ಕೋಟಿ ರೂ. ಆರ್ಥಿಕ ನೆರವು ಒದಗಿಸಲು ಮತ್ತು ಸ್ಥಳೀಯ ಜಾನಪದ ಕಲಾವಿದರ ಆಯ್ಕೆ ಪ್ರಕ್ರಿಯೆಗಾಗಿ 1 ಕೋಟಿ ರೂ.ಗಳ ಆಡಳಿತಾತ್ಮಕ ವೆಚ್ಚವನ್ನು ಸಚಿವ ಸಂಪುಟ ಅನುಮೋದಿಸಿದೆ.