Advertisement
ವಿದೇಶದಲ್ಲಿ ನಗರಗಳು ಇಂತಹ ಪಕೃತಿದತ್ತ ವಿಕೋಪಗಳಿಗೆ ತನ್ನ ಯೋಜಿತ ಹೊಳಹುಗಳ ಮೂಲಕ ನಗರದ ಸುರಕ್ಷತೆಗೆ ಒತ್ತು ನೀಡಿ ಪರಿಹಾರ ಕಂಡುಕೊಳ್ಳುತ್ತಿವೆ. ಮಳೆ ಅಥವಾ ನೆರೆಯಿಂದ ಉಂಟಾಗುವ ಕೃತಕ ನೆರೆಗಳಿಂಂದ ನಮ್ಮ ಮನೆ ಮತ್ತು ಬಡಾವಣೆಯನ್ನು ಸಂರಕ್ಷಿಸಿಕೊಳ್ಳಲು ಪ್ಲಡ್ ಬೇರಿಯರ್ಸ್ ಎಂಬ ವಿನೂತನವಾದ ಯೋಜನೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಪ್ರವಾಹ, ನೆರೆ ಸಂದರ್ಭ ನೀರನ್ನು ಹಾನಿಗೊಳಗಾಗುವಂತಹ ಪ್ರದೇಶಗಳಿಗೆ ಬಿಡದೆ ತನ್ನಲ್ಲೇ ಸಂಗ್ರಹಿಸಿ ಅಥವಾ ನೆರೆ ನೀರಿನ ದಿಕ್ಕನ್ನು ಬೇರೆಡೆಗೆ ಬದಲಿಸುವ ಪ್ರಕ್ರಿಯೇಯೇ ಪ್ಲಡ್ ಬೇರಿಯರ್ಸ್. ಬಾಕ್ಸಾ$Ìಲ್ ನಗರಕ್ಕೆ ಪದೇ ಪದೇ ಆವರಿಸಿಕೊಳ್ಳುತ್ತಿದ್ದ ಕೃತಕ ನೆರೆಯನ್ನು ತಡೆಯಲು ಪ್ಲಡ್ ಬೇರಿಯರ್ಸ್ ಎಂಬ ಮಾದರಿ ಯೋಜನೆಯನ್ನು ಪ್ರಯೋಗ ಮಾಡಲಾಯಿತು. ಪ್ಲರ್ಡ್ ಬೇರಿಯರ್ಸ್ ಎಂಬುವುದು ಸ್ವತಂತ್ರ ಪ್ರವಾಹ ತಡಗೋಡೆಯಾಗಿದೆ. ಇದರಿಂದ ಯಶಸ್ವಿಯಾಗಿ ಈ ಯೋಜನೆಯಿಂದ ಈ ನಗರವೂ ಪ್ರಪಂಚಕ್ಕೆ ಇಂದು ಮಾದರಿಯಾಗಿದೆ. ಪ್ಲರ್ಡ್ ಬೇರಿಯರ್ಸ್ ಎಂಬುವುದು ಡಾಮರಿನಿಂದ ರಚಿತಗೊಂಡ ಕಾಂಕ್ರೀಟ್ ಮೇಲ್ಮೆ„ನ್ನು ಹೊಂದಿರುವುರಿಂದ ನೆರೆ ನೀರನ್ನು ಯಾವ ಸಂಧಿಯಲ್ಲೂ ಹೋಗದಂತೆ ತಡೆಯುತ್ತದೆ. ಅಲ್ಲದೇ ಈ ತಡೆಗೋಡೆಗಳು ತಂತ್ರಜ್ಞಾನ ಪೂರಕವಾಗಿ ರಚಿತಗೊಂಡಿದ್ದು ಅಂತ್ಯಂತ ಹಗುರವಾಗಿವೆ. ಆದಷ್ಟು ಬೇಗ ಜೋಡಿಸಬಹುದಾಗಿದೆ. ಅಷ್ಟೇ ಅಲ್ಲದೇ ಒಂದರ ಮಧ್ಯೆ ಒಂದಕ್ಕೆ ಲಾಕರ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ತತ್‌ಕ್ಷಣದಲ್ಲಿ ನೆರೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
Related Articles
ಪ್ಲಡ್ ಬೇರಿಯರ್ಸ್ ನಂತಹ ತಂತ್ರಜ್ಞಾನಗಳು ಈಗಿನ ಪರಿಸ್ಥಿತಿಗೆ ತುಂಬಾ ಅವಶ್ಯವಾಗಿದೆ. ಅತೀ ಹೆಚ್ಚಾಗಿ ನೆರೆ, ಪ್ರವಾಹಗಳು ಉಂಟಾಗಿ ಹಾನಿಗೀಡಾಗುವ ಪ್ರದೇಶಗಳಲ್ಲಿ ಇಂತಹ ತಂತ್ರಜ್ಞಾನಗಳು ನಮ್ಮಲ್ಲಿ ಇದ್ದರೆ ಉತ್ತಮ. ಈ ಮೂಲಕ ಮಂಗಳೂರಿನ ಸ್ಮಾರ್ಟ್ ಕಲ್ಪನೆ ದಿನೇ ದಿನೇ ವಿಸ್ತಾರವಾಗುತ್ತಾ ಒಂದು ಮಾದರಿ,ಯೋಜಿತ ನಗರವನ್ನಾಗಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ.
Advertisement
ಮಂಗಳೂರಿಗೂ ಬರಲಿನಮ್ಮ ಕೆಲವೊಂದು ನಗರದ ಎಲ್ಲ ಮೂಲೆಗಳು ಅಷ್ಟೊಂದು ಯೋಜಿತವಲ್ಲದೆ ಸಣ್ಣ ಮಳೆಗೂ ಒದ್ದಾಡಿದ ಪ್ರಸಂಗಗಳು ಅನೇಕ. ಈಗಿರುವಾಗ ಯೋಜಿತವಲ್ಲದ ನಗರಗಳಲ್ಲಿ ಮತ್ತು ಪದೇ ಪದೇ ಇಂತಹ ನೆರೆಗಳು ಬರುವ ಮನೆ ಅಥವಾ ಅಂಗಡಿಗಳಲ್ಲಿ ಇಂತಹ ಅಪ್ಡೆಟೆಡ್ ಹೊಳಹುಗಳನ್ನು ಬಳಸಲು ನಗರಾಭಿವೃದ್ಧಿಯು ವ್ಯವಸ್ಥೆ ಕಲ್ಪಿಸಬೇಕಾಗಿದೆ. - ವಿರಾಜ್ ಹೆಗ್ಡೆ