Advertisement

ರಾಜ್ಯದಲ್ಲೇ ಪ್ರಥಮ: ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ!

12:36 PM May 06, 2022 | Team Udayavani |

ಮಲ್ಪೆ: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹ ಕಾರದಲ್ಲಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ನಿರ್ಮಾಣವಾಗಿದೆ. ಇದು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದು ಮಲ್ಪೆ ಬೀಚ್‌ಗೆ ಮತ್ತೂಂದು ಗರಿಯಾಗಲಿದೆ.

Advertisement

ಇನ್ನು ಮುಂದೆ ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರು ಅಲೆಗಳ ಮೇಲೆ ನಡೆಯುವ ಅನುಭವವನ್ನು ಆನಂದಿಸಬಹುದು. ಸಾಹಸ ಕ್ರೀಡೆ ಇಷ್ಟಪಡುವವರಿಗೆ ಇದು ಅಚ್ಚುಮೆಚ್ಚು. ಕೇರಳದ ಬೇಪೋರ್‌ ಬೀಚ್‌ ನಲ್ಲಿ ಬಿಟ್ಟರೆ ಕರ್ನಾಟಕದ ಕೆಲವೊಂದು ಕಡೆ ಹಿನ್ನೀರಿನಲ್ಲಿ ಮಾತ್ರ ಕಂಡು ಬಂದಿದೆ ಎನ್ನಲಾಗಿದೆ.

ಸೇತುವೆಯು 100 ಮೀಟರ್‌ ಉದ್ದ ಮತ್ತು 3.5 ಮೀಟರ್‌ ಅಗಲವನ್ನು ಹೊಂದಿದ್ದು, ಹೆಚ್ಚಿನ ಸಾಂದ್ರತೆಯ ಪೊಂಟೋನ್ಸ್‌ ಬ್ಲಾಕ್‌ಗಳಿಂದ ಮಾಡಲ್ಪಟ್ಟಿದೆ. ಇದರಲ್ಲಿ ಒಂದು ಬಾರಿಗೆ 100 ಜನರು ಸಾಗಬಹುದು. ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್‌ ಉದ್ದ, 7.5 ಮೀಟರ್‌ ಅಗಲದ ವೇದಿಕೆ ಇದೆ. ಇದರಲ್ಲಿ 15 ನಿಮಿಷ ಕಾಲ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸೇತುವೆ ಇಕ್ಕೆಲಗಳಲ್ಲಿ 10 ಮಂದಿ ಲೈಫ್‌ ಗಾರ್ಡ್‌ ಇರುತ್ತಾರೆ. ಸ್ಥಳೀಯರು ಈ ತೇಲುವ ಸೇತುವೆಯನ್ನು ಸ್ಥಾಪಿಸಿದ್ದಾರೆ. ಸೇತುವೆಯು ಸಮುದ್ರದ ಅಲೆಗಳ ಉಬ್ಬರಕ್ಕೆ ಮೇಲೇರಿ ಕೆಳಗಿಳಿಯುವುದನ್ನು ಅನುಭವಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next