Advertisement

ಫ್ಲಿಪ್‌ಕಾರ್ಟ್‌ ಷೇರು ಸೇಲ್‌?

06:45 AM Feb 01, 2018 | Harsha Rao |

ಹೊಸದಿಲ್ಲಿ: ದೇಶದಲ್ಲಿ ಇ-ಕಾಮರ್ಸ್‌ ಶುರು ಮಾಡಿರುವ ಬೆಂಗಳೂರಿನ ಫ್ಲಿಪ್‌ಕಾರ್ಟ್‌ನ ಸಣ್ಣ  ಪ್ರಮಾಣದ ಷೇರನ್ನು ಅಮೆರಿಕದ ಚಿಲ್ಲರೆ ಮಾರುಕಟ್ಟೆ ದೈತ್ಯ ವಾಲ್‌ಮಾರ್ಟ್‌ ಖರೀದಿಸಲಿದೆ. ಮಾರ್ಚ್‌ನಲ್ಲಿ ಈ ಬಗೆಗಿನ ಒಪ್ಪಂದ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ವಾಲ್‌ಮಾರ್ಟ್‌ ಸಿಇಒ ಡಾಗ್‌ ಮ್ಯಾಕ್‌ಮಿಲನ್‌ ಅವರನ್ನು ಒಳಗೊಂಡ ನಿಯೋಗ ಕಳೆದ ವಾರ ಬೆಂಗಳೂರಿನಲ್ಲಿರುವ ಫ್ಲಿಪ್‌ಕಾರ್ಟ್‌ ಪ್ರಧಾನ ಕಚೇರಿಗೆ ಭೇಟಿ ನೀಡಿ, ಈ ಬಗ್ಗೆ ಮಾತುಕತೆ ನಡೆಸಿತ್ತು. ಅವರ ಜತೆಗೆ ವಾಲ್‌ಮಾರ್ಟ್‌ ಇ-ಕಾಮರ್ಸ್‌ನ ಸಿಇಒ ಮಾರ್ಕ್‌ ಲೋರ್‌ ಕೂಡ ಇದ್ದರು. 

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ವಾಲ್‌ಮಾರ್ಟ್‌ ನಿರಾಕರಿಸಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಖರೀದಿ ಪ್ರಮಾಣ ಎಷ್ಟು?: ಅಮೆರಿಕದ ಚಿಲ್ಲರೆ ಮಾರುಕಟ್ಟೆ ದೈತ್ಯ ಶೇ.15-ಶೇ.20ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಅಮೆರಿಕದ ಮತ್ತೂಂದು ಪ್ರಮುಖ ಇ-ಕಾಮರ್ಸ್‌ ಕಂಪನಿ ಅಮೆಜಾನ್‌ ವಿರುದ್ಧ ಭಾರತದಲ್ಲಿ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಪ್ರಾಥ ಮಿಕ ಮತ್ತು ದ್ವಿತೀಯ ಹಂತದ ಮಾರು ಕಟ್ಟೆಯೂ ಸೇರಿದೆ. ಇನ್ನೂ ಗಮನಾರ್ಹ ವಿಚಾರವೆಂದರೆ ಕಳೆದ ಐದು ವರ್ಷಗಳಿಂದ ವಾಲ್‌ಮಾರ್ಟ್‌ 15 ಸ್ಟಾರ್ಟ್‌ ಅಪ್‌ಗ್ಳ ಖರೀದಿ ಮಾಡಿದೆ. ಕಳೆದ ವಾರ ಜಪಾನ್‌ನ ಇ-ಕಾಮರ್ಸ್‌ ಕಂಪನಿ ರಾಕುಟೆನ್‌ ಅನ್ನು ಖರೀದಿ ಮಾಡಿತ್ತು. ಅಮೆಜಾನ್‌ ಕೂಡ ಹೋಲ್‌ ಫ‌ುಡ್‌(ಗಜಟlಛಿ ಊಟಟಛs )ಅನ್ನು ಕಳೆದ ವರ್ಷ ಖರೀದಿ ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next