Advertisement
ಕುಶಲಕರ್ಮಿಗಳು ಮತ್ತು ನೇಕಾರರು ಹಬ್ಬದ ಸೀಸನ್ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರ ನೆಲೆಯನ್ನು ತಲುಪುವ ನಿಟ್ಟಿನಲ್ಲಿ ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾ ಎಂಬ ವಿನೂತನವಾದ ಪರಿಕಲ್ಪನೆಯಡಿಯಲ್ಲಿ ವಿಶೇಷವಾದ ಉತ್ಪನ್ನಗಳನ್ನು ಸಂಗ್ರಹಿಸಲಾಗಿದೆ.
Related Articles
Advertisement
ಆರ್ಟ್ ಫಾರ್ಮ್ ಆಫ್ ಇಂಡಿಯಾ 28 ಉತ್ಪನ್ನಗಳನ್ನು ಹೊಂದಿದೆ. ದೇಶದ ಪಶ್ಚಿಮ ಭಾಗದ ಅತಿದೊಡ್ಡ ಎಂಪೋರಿಯಂಗಳಲ್ಲಿ ಒಂದಾಗಿರುವ ಗಾರ್ವಿ ಗರ್ಜರಿಯಂತಹ ಪಾಲುದಾರರಿಂದ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ರಾಜ್ಯಾದ್ಯಂತ 2,000 ಕ್ಕೂ ಹೆಚ್ಚು ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತದೆ. ಬುಡಕಟ್ಟು ಕಲ್ಯಾಣ ಸಚಿವಾಲಯದಿಂದ ಬುಡಕಟ್ಟು ಸಮುದಾಯದ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಮಾರುಕಟ್ಟೆ ಒದಗಿಸುವ ಹೊಣೆಗಾರಿಕೆಯನ್ನು ಹೊಂದಿದೆ. ದೇಶಾದ್ಯಂತದ 3,50,000 ಆದಿವಾಸಿಗಳ ಮೇಲೆ ಇದು ಉತ್ತಮ ಪರಿಣಾಮ ಬೀರುತ್ತದೆ
ಇದರ ಜೊತೆಗೆ, ಫ್ಲಿಪ್‌ಕಾರ್ಟ್ ಕ್ಯಾಮೆರಾ ಮೂಲಕ ಫ್ಲಿಪ್‌ಕಾರ್ಟ್ 3ಡಿ ಮತ್ತು ಎಆರ್ ಸಾಮರ್ಥ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಇದರ ಮೂಲಕ ಗ್ರಾಹಕರು ‘ಆರ್ಟ್ ಫಾರ್ಮ್‌ಸ್ ಆಫ್ ಇಂಡಿಯಾದಿಂದ ಉತ್ಪನ್ನಗಳನ್ನು ಶಾಪಿಂಗ್ ಮಾಡಬಹುದು. ಇದರ ಮೂಲಕ ಗ್ರಾಹಕರು ಆಯ್ದ ಕರಕುಶಲ ವಸ್ತುಗಳೊಂದಿಗೆ ಹ್ಯಾಂಡ್‌ಬ್ಯಾಗ್ ಮತ್ತು ಗೃಹಾಲಂಕಾರ ಉತ್ಪನ್ನಗಳ ಬಗ್ಗೆ ಸಂವಹನ ನಡೆಸಬಹುದು ಅಥವಾ ಅವುಗಳನ್ನು ತಮ್ಮ ಜಾಗದಲ್ಲಿಯೇ ಕುಳಿತು ವೀಕ್ಷಿಸಿ ಅವುಗಳ ಖರೀದಿ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.