Advertisement

ಮೂರೇ ಮೂರು ತಿಂಗಳಲ್ಲಿ ದೇಶದ 23 ಸಾವಿರ ಮಂದಿಗೆ ಉದ್ಯೋಗ ನೀಡಿದ ಫ್ಲಿಪ್ ಕಾರ್ಟ್..!

04:44 PM May 27, 2021 | |

ನವ ದೆಹಲಿ : ಕೋವಿಡ್-19 ಮಹಾಮಾರಿ ನಾಗರಿಕ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಎನ್ನುವುದರಲ್ಲಿ ಸಂಶಯ ಬೇಕಾಗಿಲ್ಲ.  ಕೋವಿಡ್ ಸೋಂಕು ಆರಂಭವಾದಾಗಿನಿಂದ ಹಾಗೂ ಲಾಕ್ ಡೌನ್  ಕಾರಣದಿಂದಾಗಿ ಇ-ಕಾಮರ್ಸ್ ವಲಯಕ್ಕೆ ದೊಡ್ಡ ಮಟ್ಟದ ಲಾಭವಾಗಿದೆ.

Advertisement

ಆನ್ ಲೈನ್ ವಹಿವಾಟು ಹೆಚ್ಚಾಗಿರುವುದರಿಂದ ಫ್ಲಿಪ್‌ ಕಾರ್ಟ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಈ ಕೋವಿಡ್ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಲಾಭ ಗಳಿಸಿದೆ.

ಇದನ್ನೂ ಓದಿ : ಸಿ.ಎಂ. ಬದಲಾವಣೆ ಅಸಾಧ್ಯ : ಯಡಿಯೂರಪ್ಪ ಬೆಂಬಲಕ್ಕೆ ನಿಂತ ಶಾಸಕ ನಡಹಳ್ಳಿ

ಹೌದು, ಲಾಕ್ ಡೌನ್ ಹಾಗೂ ಕೋವಿಡ್ ನ ಕಾರಣದಿಂದಾಗಿ ತನ್ನ ಸಂಸ್ಥೆಯ ಪೂರೈಕೆಯನ್ನು ವೃದ್ಧಿಸಿಕೊಳ್ಳುವ ಉದ್ದೆಶದಿಂದ ಮೂರು ತಿಂಗಳಲ್ಲಿ 23,000 ಜನರಿಗೆ ಉದ್ಯೋಗ ನೀಡಿದೆ ಫ್ಲಿಪ್ ಕಾರ್ಟ್.

ತನ್ನ ಪೂರೈಕೆ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಮಾರ್ಚ್  ಹಾಗೂ ಮೇ ನಡುವಿನ ಅವಧಿಯಲ್ಲಿ ಭಾರತದಾದ್ಯಂತ ಸುಮಾರು 23,000 ಜನರನ್ನು ನೇಮಿಸಿಕೊಂಡಿದೆ ಎಂದು ಫ್ಲಿಪ್‌ ಕಾರ್ಟ್‌ ಸಂಸ್ತೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಗೋ ಡೌನ್ ಹಾಗೂ ಮತ್ತು ವಿತರಣಾ ಶಾಖೆಗಳಿಗೆ ಕಳೆದ ಮಾರ್ಚ್ ಹಾಗೂ ಮೇ ತಿಂಗಳಿನಲ್ಲಿ 23,000 ಮಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಮಾಹಿತಿಯನ್ನು ಹಂಚಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫ್ಲಿಪ್‌ ಕಾರ್ಟ್‌ ಸಂಸ್ಥೆಯ ಪೂರೈಕೆ  ವಿಭಾಗದ ಉಪಾಧ್ಯಕ್ಷ ಹೇಮಂತ್ ಬಾದ್ರಿ, ಫ್ಲಿಪ್‌ ಕಾರ್ಟ್‌ ನಲ್ಲಿ ನೌಕರರ ಸುರಕ್ಷತೆಯ ಜೊತೆಗೆ, ಗ್ರಾಹಕರ ಅಗತ್ಯಗಳನ್ನು ಪೂರೈಸುವುದಕ್ಕೆ ಆದ್ಯತೆಯನ್ನು ನೀಡಲಾಗಿದೆ. ದೇಶದಾದ್ಯಂತ ಇ-ಕಾಮರ್ಸ್ ಸೇವೆಗಳಿಗೆ ಈಗ ಬೇಡಿಕೆ ಹೆಚ್ಚಿದ್ದು, ಈ ಸಂದರ್ಭದಲ್ಲಿ ನಮ್ಮ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸುವುದರಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ : ಗ್ಯಾಂಗ್ ಸ್ಟರ್ ಕಾಲಾ ಜತೇದಿ ಸಹೋದರನ ಜೊತೆ ಕುಸ್ತಿಪಟು ಸುಶೀಲ್ ಕುಮಾರ್!

Advertisement

Udayavani is now on Telegram. Click here to join our channel and stay updated with the latest news.

Next