Advertisement

ಲೈಂಗಿಕ ದುರ್ವರ್ತನೆ: ಫ್ಲಿಪ್‌ ಕಾರ್ಟ್‌ ಸಿಇಓ ಬನ್ಸಾಲ್‌ ರಾಜೀನಾಮೆ

07:20 PM Nov 13, 2018 | |

ಹೊಸದಿಲ್ಲಿ : ಫ್ಲಿಪ್‌ ಕಾರ್ಟ್‌ ಸಹ ಸ್ಥಾಪಕ ಮತ್ತು ಸಮೂಹದ ಸಿಇಓ ಆಗಿರುವ ಬಿನ್ನಿ ಬನ್ಸಾಲ್‌ ಅವರು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಕಂಪೆನಿಗೆ ರಾಜೀನಾಮೆ ನೀಡಿದ್ದಾರೆ. 

Advertisement

ಬನ್ಸಾಲ್‌ ವಿರುದ್ಧ ಇರುವ ಗಂಭೀರ ವೈಯಕ್ತಿಕ ಲೈಂಗಿಕ ದುರ್ವರ್ತನೆಯ ಆರೋಪಗಳ ಬಗ್ಗೆ ಫ್ಲಿಪ್‌ ಕಾರ್ಟ್‌ ಮತ್ತು ಸಂಸ್ಥೆಯ ಹಾಲಿ ಮಾಲಕ ವಾಲ್‌ಮಾರ್ಟ್‌ ಪರವಾಗಿ ನಡೆಸಲಾದ ಸ್ವತಂತ್ರ ತನಿಖೆಯನ್ನು ಅನುಸರಿಸಿ ಬನ್ಸಾಲ್‌ ರಾಜೀನಾಮೆ ನೀಡಿರುವುದಾಗಿ ಕಂಪೆನಿಯ ಹೇಳಿಕೆ ತಿಳಿಸಿದೆ. ಆದರೆ ಬನ್ಸಾಲ್‌ ತನ್ನ ವಿರುದ್ಧದ ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ. 

ಫ್ಲಿಪ್‌ ಕಾರ್ಟ್‌ ಸಂಸ್ಥೆಯ ನಿಯಂತ್ರಣ ಪ್ರಕೃತ ವಾಲ್‌ಮಾರ್ಟ್‌ ಇಂಕ್‌ ಕೈಯಲ್ಲಿದೆ.  ವಾಲ್‌ ಮಾರ್ಟ್‌ ಈ ವರ್ಷ ಮೇ ತಿಂಗಳಲ್ಲಿ  16 ಶತಕೋಟಿ ಡಾಲರ್‌ ತೆತ್ತು ಫ್ಲಿಪ್‌ ಕಾರ್ಟ್‌ನ ಶೇ.77 ಒಡೆತನವನ್ನು ವಶಪಡಿಸಿಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next