ನವದೆಹಲಿ: ಫ್ಲಿಫ್ ಕಾರ್ಟ್ ಮತ್ತೊಂದು ‘ಮೆಗಾ ಸೇಲ್’ ನೊಂದಿಗೆ ಹಿಂದಿರುಗಿದ್ದು ಆದರೆ, ಈ ಬಾರಿ ಸ್ಮಾರ್ಟ್ ಫೋನ್ ಗಳಿಗೆ ಯಾವುದೇ ಆಫರ್ ಗಳಿಲ್ಲ. ಬದಲಾಗಿ ಕೂಲರ್, ರೆಫ್ರಿಜರೇಟರ್, ಏರ್ ಕಂಡಿಷನರ್, ಫ್ಯಾನ್ಸ್, ಮುಂತಾದ ವಸ್ತುಗಳಿಗೆ ಆಫರ್ ಗಳಿದ್ದು, ಹೀಗಾಗಿ ಇದನ್ನು ‘ಕೂಲಿಂಗ್ ಡೇ ಸೇಲ್’ ಎಂದು ಕರೆಯಲಾಗಿದೆ.
ಈ ಸೇಲ್ ಫೆ. 20ರಿಂದ 24ರವರೆಗೆ ಇರಲಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆ ಹೊಂದಿರುವವರಿಗೆ ವಿಶೇಷ ಡಿಸ್ಕೌಂಟ್ ಲಭ್ಯವಿದೆ.
ಕೋಟಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ 10 % ಡಿಸ್ಕೌಂಟ್ ಸಿಗಲಿದ್ದು, ಇದರ ಜೊತೆಗೆ ಕೂಲಿಂಗ್ ಡೇಸ್ ಸೇಲ್ ನಲ್ಲಿ 10 ಸಾವಿರವರೆಗೂ ಹಣ ಉಳಿಸಬಹುದು. ಏಸಿ, ಕೂಲರ್, ಫ್ಯಾನ್ ಕೊಳ್ಳಬೇಕೆಂದು ಬಯಸುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಫ್ಲಿಫ್ ಕಾರ್ಟ್ ಹೇಳಿಕೊಂಡಿದೆ.
ಕೂಲಿಂಗ್ ಡೇಸ್ ಸ್ಪೆಷಲ್:
Related Articles
Whirlpool 1.5 Ton 5 Star Split Inverter AC – 33,999 ರೂ ಗಳಿಗೆ ಲಭ್ಯವಿದ್ದು, 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ. ಇದು ಆಟೊ ರಿಸ್ಟಾರ್ಟ್ ಮೆನು ಆಯ್ಕೆಯನ್ನು ಹೊಂದಿದ್ದು, ಅತ್ಯುತ್ತಮ ಫೀಚರ್ ಎಂದೇ ಪರಿಗಣಿಸಲಾಗಿದೆ.
Carrier 1.2 Ton 5 Star Split Inverter AC with PM 2.5 Filter- 32,999 ರೂ. ಗಳಿಗೆ ಇದು ದೊರಕಲಿದ್ದು, ಇದು ಕೂಡ 5 ಸ್ಟಾರ್ ರೇಟಿಂಗ್ ಹೊಂದಿದೆ.
LG 1.5 Ton 5 Star Split Dual Inverter AC – 38,999 ರೂ ಬೆಲೆಯುಳ್ಳ ಇದರಲ್ಲಿ ಸ್ಲೀಪ್ ಮೋಡ್, ಕಾಪರ್ ವೈರ್, ಆಟೋ ರಿಸ್ಟಾರ್ಟ್ ಮುಂತಾದ ಹಲವು ಫೀಚರ್ ಗಳಿವೆ.
Samsung 198 L Direct Cool Single Door – ಇದು 17, 690 ರೂ ಗಳಿಗೆ ಲಭ್ಯವಿದ್ದು, ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಅನ್ನು ಹೊಂದಿದೆ.
ಇದಲ್ಲದೆ 11, 790 ರೂ. ಗಳಿಗೆ ಸ್ಯಾಮ್ ಸಂಗ್ 192 ಲೀ. ಡೈರೆಕ್ಟ್ ಕೂಲ್ ಹಾಗೂ 24,990 ರೂ. ಗಳಿಗೆ ಡಬಲ್ ಡೋರ್ ಹೊಂದಿರುವ Whirlpool 265 L ಸಿಗಲಿದೆ. ಫ್ಲಿಫ್ ಕಾರ್ಟ್ ವೆಬ್ ಸೈಟ್ ನಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.