Advertisement

ಅ.16:Flipkart ಬಿಗ್ ಬಿಲಿಯನ್ ಡೇಸ್:ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್

12:07 PM Nov 03, 2015 | Nagendra Trasi |

ಬೆಂಗಳೂರು: ಭಾರತದ ಪ್ರಮುಖ ಇ ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ನ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಶುಭ ಶುಕ್ರವಾರ(ಅಕ್ಟೋಬರ್ 16, 2020)ದಿಂದ ಆರಂಭಗೊಂಡಿದ್ದು, ಗ್ರಾಹಕರಿಗೆ ಭರ್ಜರಿ ಕೊಡುಗೆಗಳ ಆಫರ್ ಅನ್ನು ನೀಡಿದೆ. ಅಕ್ಟೋಬರ್ 16ರಿಂದ 21ರವರೆಗೆ ಬಿಗ್ ಬಿಲಿಯನ್ ಡೇಸ್ ಮೂಲಕ ಫ್ಲಿಪ್ ಕಾರ್ಟ್ ಗ್ರಾಹಕರು ಕಡಿಮೆ ದರದಲ್ಲಿ ವಸ್ತುಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದೆ.

Advertisement

ಬಿಗ್ ಬಿಲಿಯನ್ ಡೇಸ್ ಅಕ್ಟೋಬರ್ 16ರಂದು ಮಧ್ಯರಾತ್ರಿಯಿಂದ ಆರಂಭವಾಗಲಿದ್ದು, ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ಮೊದಲ ಅವಕಾಶ ಲಭ್ಯವಾಗಲಿದ್ದು, ಇದು ಅಕ್ಟೋಬರ್ 21ರವರೆಗೂ ಆಫರ್ ದೊರೆಯಲಿದೆ ಎಂದು ಹೇಳಿದೆ.

ಬೃಹತ್ ಮಾರಾಟ, ಭರ್ಜರಿ ಆಫರ್!

ಆರು ದಿನಗಳ ಬಿಗ್ ಬಿಲಿಯನ್ ಡೇ ನಲ್ಲಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿರುವ ಫ್ಲಿಪ್ ಕಾರ್ಟ್ ಮೊಬೈಲ್, ಟಿವಿ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಫ್ಯಾಶನ್ ಐಟಂಗಳು, ಫುಡ್, ಮಕ್ಕಳ ಆಟಿಕೆ, ಬೇಬಿ ಕೇರ್, ಅಡುಗೆ ಪಾತ್ರೆ, ಫರ್ನಿಚರ್, ತರಕಾರಿ ಸೇರಿದಂತೆ ಹಲವು ವಸ್ತುಗಳ ಮೇಲೆ ಭರ್ಜರಿ ಕಡಿತದೊಂದಿಗೆ ಮಾರಾಟ ಮಾಡುವುದಾಗಿ ವಿವರಿಸಿದೆ.

ಎಸ್ ಬಿಐ ಡೆಬಿಟ್ ಕಾರ್ಡ್ ಗೆ ಶೇ.10ರಷ್ಟು ಡಿಸ್ಕೌಂಟ್:

Advertisement

ಬಿಗ್ ಬಿಲಿಯನ್ ಡೇಸ್ ನಲ್ಲಿ ಫ್ಲಿಪ್ ಕಾರ್ಟ್ ಗ್ರಾಹಕರು ಶಾಪಿಂಗ್ ನಡೆಸುವ ಸಂದರ್ಭದಲ್ಲಿ ಎಸ್ ಬಿಐನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದ್ದಲ್ಲಿ ತಕ್ಷಣವೇ ಶೇ.10ರಷ್ಟು ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಯಾವುದೇ ಹೆಚ್ಚುವರಿ ವೆಚ್ಚ ವಿಧಿಸದ ಇಎಂಐಗಳ ಮೂಲಕ ಗ್ರಾಹಕರು ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ.

ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಬಜಾಜ್ ಫಿನ್ ಸರ್ವ್ ಇಎಂಐ ಕಾರುಗಳು ಮತ್ತು ಇತರ ಪ್ರಮುಖ ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಆಫರ್ ಅನ್ನು ಗ್ರಾಹಕರು ಪಡೆಯಬಹುದಾಗಿದೆ. ಫ್ಲಿಪ್ ಕಾರ್ಟ್ ಪೇಟಿಎಂ ಜತೆ ಕೂಡಾ ಸಹಭಾಗಿತ್ವ ಹೊಂದಿದ್ದು, ಪೇಟಿಎಂ ಮೂಲಕ ವ್ಯವಹಾರ ನಡೆಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಫರ್ ದೊರೆಯಲಿದೆ ಎಂದು ಹೇಳಿದೆ.

ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಗ್ರಾಹಕರಿಗೆ ಲಭ್ಯವಾಗುವ ಆಫರ್ ಮತ್ತು ಡಿಸ್ಕೌಂಟ್ ಇಲ್ಲಿದೆ…

*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ಡಿಸ್ಕೌಂಟ್ ಆಫರ್ ನೀಡಿದೆ.

*ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ಸ್ ಮೇಲಿನ ಇಎಂಐ ಮೇಲೆ ಯಾವುದೇ ವೆಚ್ಚ ಇಲ್ಲ.

*ಪೇಟಿಎಂ ವ್ಯಾಲೆಟ್ ಮತ್ತು ಪೇಟಿಎಂ ಯುಪಿಐ ಮೂಲಕ ವ್ಯವಹಾರ ನಡೆಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಫರ್

Advertisement

Udayavani is now on Telegram. Click here to join our channel and stay updated with the latest news.

Next