Advertisement
ದೇಶಾದ್ಯಂತ NCERT ಪುಸ್ತಕಗಳು ಕೈಗೆಟುಕುವ ಮತ್ತು ತಡೆರಹಿತವಾಗಿ ಲಭ್ಯವಾಗುವಂತೆ ಮಾಡುವುದು ಈ ಮಹತ್ವದ ಒಪ್ಪಂದದ ಉದ್ದೇಶವಾಗಿದೆ.
Related Articles
Advertisement
ದೆಹಲಿಯ NCERT ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವಾಲಯ ಮತ್ತು NCERT ಅಧಿಕಾರಿಗಳು ಮತ್ತು ಫ್ಲಿಪ್ ಕಾರ್ಟ್ ಅಧಿಕಾರಿಗಳು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು. ಇದು ದೇಶಾದ್ಯಂತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳಿಗೆ ಹೆಚ್ಚಿನ ಪ್ರವೇಶವನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಈ ಸಹಯೋಗದಡಿ ಫ್ಲಿಪ್ ಕಾರ್ಟ್ ನಗರ ಮತ್ತು ಗ್ರಾಮೀಣ ಭಾರತದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ NCERT ಪಠ್ಯಗಳನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡುವ ಮೂಲಕ ವ್ಯಾಪಕ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ. ಇದಲ್ಲದೇ, ಅಧಿಕೃತ ಉತ್ತಮ ಗುಣಮಟ್ಟದ ವಿಷಯದ ಲಭ್ಯತೆಯನ್ನು ಖಾತರಿಪಡಿಸಲು ಫ್ಲಿಪ್ ಕಾರ್ಟ್ ಮತ್ತು NCERT ಒಟ್ಟಾಗಿ ಕೆಲಸ ಮಾಡಲಿವೆ.
ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಭಾರತದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ NCERT ಪ್ರಮುಖ ಪಾತ್ರ ವಹಿಸಿದೆ. ಫ್ಲಿಪ್ ಕಾರ್ಟ್ ನೊಂದಿಗೆ ಮಾಡಿಕೊಂಡಿರುವ ಸಹಯೋಗ ಎಲ್ಲರಿಗೂ ಕೈಗೆಟುಕುವ ಮತ್ತು ಸುಲಭವಾಗಿ ಪಡೆದುಕೊಳ್ಳಬಹುದಾದ ಶಿಕ್ಷಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಪರಿವರ್ತಕವಾದ ಹೆಜ್ಜೆಯನ್ನು ಇಟ್ಟಿದೆ. ಫ್ಲಿಪ್ ಕಾರ್ಟ್ ನ ವ್ಯಾಪಕವಾದ ತಾಂತ್ರಿಕ ಮತ್ತು ಲಾಜಿಸ್ಟಿಕಲ್ ವ್ಯಾಪ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಈ ಪಾಲುದಾರಿಕೆಯು NCERT ಪುಸ್ತಕಗಳ ಲಭ್ಯತೆಯನ್ನು ಹೆಚ್ಚು ಮಾಡುತ್ತದೆ ಎಂದರು.