ಬೆಂಗಳೂರು: ಮುಂಬರುವ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ತನ್ನ `ಫ್ಲಿಪ್ ಕಾರ್ಟ್ ಪೇ ಲೇಟರ್’ ಕೊಡುಗೆಯ ಪ್ರಯೋಜನಗಳನ್ನು ವಿಸ್ತರಣೆ ಮಾಡಿದೆ. `ಫ್ಲಿಪ್ ಕಾರ್ಟ್ ಪೇ ಲೇಟರ್ ಮೂಲಕ’ 70,000 ರೂಪಾಯಿಗಳವರೆಗಿನ ಸಾಲಕ್ಕೆ ಇಎಂಐ ಸೌಲಭ್ಯ ದೊರಕುತ್ತದೆ. ಈ ಸಾಲವನ್ನು 3, 6, 9 ಮತ್ತು 12 ತಿಂಗಳ
ಮರು ಪಾವತಿ ಮಾಡಲು ಅವಕಾಶವಿರುತ್ತದೆ. ಈ ಮುಂಚೆ ಪೇ ಲೇಟರ್ ಸೌಲಭ್ಯ 10,000 ರೂ.ಗಳ ಖರೀದಿಗೆ ಸೀಮಿತವಾಗಿತ್ತು. ಈ ಸೌಲಭ್ಯವನ್ನು ಬಳಸಿಕೊಂಡು ಗ್ರಾಹಕರು ಹಬ್ಬದ ಸೀಸನ್ ನಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಫ್ಲಿಪ್ ಕಾರ್ಟ್ ಪೇ ಲೇಟರ್’ ಎಲ್ಲಾ ಉತ್ಪನ್ನಗಳ ಖರೀದಿಗೆ ಅನ್ವಯವಾಗುತ್ತದೆ.
ಫ್ಲಿಪ್ ಕಾರ್ಟ್ ವ್ಯಾಪಕ ಶ್ರೇಣಿಯ ಉತ್ಪನ್ನಗಳಿಗೆ ನೋ ಕಾಸ್ಟ್ ( ಬಡ್ಡಿ ರಹಿತ) ಸಾಲ ಸೌಲಭ್ಯ ನೀಡುತ್ತಿದೆ. ಇದರ ಜೊತೆಗೆ ಅಮೆರಿಕನ್ ಎಕ್ಸ್ ಪ್ರೆಸ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಬ್ಯಾಂಕ್ ಆಫ್ ಬರೋಡಾ, ಸಿಟಿ ಬ್ಯಾಂಕ್, ಫೆಡರಲ್ ಬ್ಯಾಂಕ್ ಸೇರಿದಂತೆ 18 ಪ್ರಮುಖ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳ ಸಹಭಾಗಿತ್ವದಲ್ಲಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಸಾಮಾನ್ಯ ಇಎಂಐ ಸೌಲಭ್ಯ ದೊರಕುತ್ತಿದೆ. ಎಚ್ ಡಿಎಫ್ ಸಿ ಬ್ಯಾಂಕ್, ಹೋಂ ಕ್ರೆಡಿಟ್, ಎಚ್ಎಸ್ ಬಿಸಿ, ಐಸಿಐಸಿಐ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜೆ & ಕೆ ಬ್ಯಾಂಕ್, ಕೊಟಕ್ ಬ್ಯಾಂಕ್ ಆರ್ ಬಿಎಲ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್, ಎಸ್ ಬಿಐ, ಝೆಸ್ಟ್ ಮನಿ ಮತ್ತು ಇತರೆ ಬ್ಯಾಂಕುಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಸಂಸ್ಥೆಗಳು ಬಡ್ಡಿ ರಹಿತ ಇಎಂಐ ಮತ್ತು ಸಾಮಾನ್ಯ ಇಎಂಐಗಳ ಅವಧಿಯನ್ನು ಕ್ರಮವಾಗಿ 12 ತಿಂಗಳು ಮತ್ತು 36 ತಿಂಗಳವರೆಗೆ ನೀಡುತ್ತಿವೆ.
ಪೇ ಲೇಟರ್ ಸೌಲಭ್ಯ ಪಡೆಯುವುದು ಹೇಗೆ?:
ಫ್ಲಿಪ್ ಕಾರ್ಟ್ ಪೇ ಲೇಟರ್’ ಇಎಂಐ ಸೌಲಭ್ಯ ಪಡೆಯಲು ಬಳಕೆದಾರರು ಕೇವಲ ತಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಆ್ಯಪ್ ನಲ್ಲಿ ನಮೂದಿಸಬೇಕು, ಒಟಿಪಿಯೊಂದಿಗೆ ಆಧಾರ್ ಸಂಖ್ಯೆಯನ್ನು ಮತ್ತು ತಮ್ಮ ಬ್ಯಾಂಕ್ ವಿವರಗಳನ್ನು ಪರಿಶೀಲಿಸಬೇಕು. ತಮ್ಮ ಖರೀದಿಗೆ ಬಳಕೆದಾರರು `ಫ್ಲಿಪ್ ಕಾರ್ಟ್ ಪೇ ಲೇಟರ್ ಇಎಂಐ’ ಆಯ್ಕೆಯನ್ನು ಮಾಡಿಕೊಳ್ಳಬೇಕು ಮತ್ತು ತಮಗೆ ಸೂಕ್ತವಾದ ಇಎಂಐ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅರ್ಜಿಯ ಪ್ರಕ್ರಿಯೆ ತ್ವರಿತವಾಗಿರುತ್ತದೆ. ಈ ಪ್ರಕ್ರಿಯೆಗಳನ್ನು ಫ್ಲಿಪ್ ಕಾರ್ಟ್ ಆ್ಯಪ್ ನಲ್ಲಿ ಅತ್ಯಂತ ಸುಲಭವಾಗಿ ನಿರ್ವಹಿಸಬಹುದಾಗಿದೆ. ಈ ವರ್ಷಾಂತ್ಯದ ವೇಳೆಗೆ ಡಿಜಿಟಲ್ ಪರಿಹಾರಗಳು ಮತ್ತು ಮೌಲ್ಯಾಧಾರಿತ ಸಾಲ ಸೌಲಭ್ಯಗಳ ಆಯ್ಕೆಗಳ ಮೂಲಕ 100 ಮಿಲಿಯನ್ ಗೂ ಅಧಿಕ ವ್ಯವಹಾರಗಳನ್ನು ನಡೆಸುವ ಗುರಿಯನ್ನು ಫ್ಲಿಪ್ ಕಾರ್ಟ್ ಹೊಂದಿದೆ.
ಬೇನ್ ಮತ್ತು ಕಂಪನಿಯ ಇತ್ತೀಚಿನ ವರದಿಯ ಪ್ರಕಾರ, ಪ್ರತಿ ಮೂರು ಜನರಲ್ಲಿ ಒಬ್ಬರು ಕಳೆದ ವರ್ಷ ಒಮ್ಮೆಯಾದರೂ ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದ್ದಾರೆ. ಗ್ರಾಹಕರು ತಮ್ಮ ಆನ್ ಲೈನ್ ಖರೀದಿಗಳನ್ನು ಪೂರ್ಣಗೊಳಿಸಲು ಡಿಜಿಟಲ್ ಪಾವತಿ ಮತ್ತು ಕ್ರೆಡಿಟ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಪೇ ಲೇಟರ್ ಸೌಲಭ್ಯವು ಗ್ರಾಹಕರಿಗೆ ದೊಡ್ಡ ವೆಚ್ಚಗಳ ಹೊರೆಯನ್ನು ಕಡಿಮೆ ಮಾಡಿ, ಬಡ್ಡಿ ರಹಿತ ಇಎಂಐಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೈನಂದಿನ ಅಗತ್ಯ ವಸ್ತುಗಳ ಖರೀದಿಯನ್ನು ಸರಳಗೊಳಿಸುತ್ತದೆ ಮತ್ತು ಹೆಚ್ಚು ಬೆಲೆಯ ಉತ್ಪನ್ನಗಳನ್ನು ಕೈಗೆಟುಕುವುಂತೆ ಮಾಡುತ್ತದೆ.