Advertisement
ದಟ್ಟವಾದ ಮಂಜು ಪ್ರದೇಶವನ್ನು ಆವರಿಸಿದ್ದು ಇದರಿಂದ ತಾಪಮಾನವು ಮತ್ತಷ್ಟು ಕುಸಿಯುತ್ತಿದೆ. ದೆಹಲಿಯಲ್ಲಿ, ಶುಕ್ರವಾರ ಬೆಳಿಗ್ಗೆ ಕನಿಷ್ಠ ತಾಪಮಾನವು 9.6 ° C ಇದ್ದು ಇದು ಸತತ ಐದನೇ ದಿನಕ್ಕೆ ಮುಂದುವರೆದಿದ್ದು ಇದರಿಂದ ಜನರ ದೈನಂದಿನ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರಿದೆ.
ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಕುಸಿದರೆ, ಸಫ್ದರ್ಜಂಗ್ ವಿಮಾನ ನಿಲ್ದಾಣವು 50 ಮೀಟರ್ ಗೋಚರತೆಯನ್ನು ವರದಿ ಮಾಡಿದೆ. ಪರಿಣಾಮ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು ಹಾಗಾಗಿ ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಿದೆ. ರೈಲು ಸಂಚಾರದಲ್ಲೂ ಸಮಯ ವ್ಯತ್ಯಯವಾಗುವ ಸಂಭವವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಶೂನ್ಯ ಗೋಚರತೆ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ವಿಳಂಬವಾಗಲಿದೆ ಜೊತೆಗೆ ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
Related Articles
Advertisement
ಇದನ್ನೂ ಓದಿ: Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ