Advertisement

100 ಅಂಕಕ್ಕೆ ವಿಮಾನ‌ ಭಾಗ್ಯ

11:10 AM Oct 30, 2017 | Harsha Rao |

ಚೆನ್ನೈ: ಇಲ್ಲಿನ ಪೆರುತಲೈವರ್‌ ಕಾಮರಾಜರ್‌ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿನಿಯರಲ್ಲಿ ಶೇ. 100ರಷ್ಟು ಅಂಕ ತಗೆಯುವಂತೆ ಪ್ರೋತ್ಸಾಹಿಸಲು ದುಬಾರಿ ಕನಸೊಂದು ಬಿತ್ತಿದ್ದು ಮಾತ್ರವಲ್ಲ, ಗುರಿ ಸಾಧಿಸಿದವರಿಗೆ ಆ ಕನಸು ನನಸಾಗುವಂತೆ ಮಾಡಿ ಮಾದರಿ ಶಿಕ್ಷಕಿ ಎನಿಸಿದ್ದಾರೆ.  

Advertisement

ಶಾಲೆಯಲ್ಲಿ ಸಮಾಜ ಶಾಸ್ತ್ರದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸೆಲ್ವ ಕುಮಾರಿ, ಕಳೆದ ಶೈಕ್ಷಣಿಕ ವರ್ಷಾರಂಭದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ 2016-17ರ ಸಿಬಿಎಸ್‌ಸಿ ಮಂಡಳಿ ಪರೀಕ್ಷೆಯಲ್ಲಿ 100 ಅಂಕ ಗಳಿಸಿದವರಿಗೆ ವಿಮಾನಯಾನದ ಅವಕಾಶವನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದರು.

ಬಡ ಮಕ್ಕಳ ಆಗರವಾಗಿರುವ ಆ ಶಾಲೆಯ ವಿದ್ಯಾರ್ಥಿನಿಯರಿಗೆ ಸೆಲ್ವಿ ಮೇಡಂ ಬಿತ್ತಿದ ಆಸೆ ಸ್ಫೂರ್ತಿ ತುಂಬಿತು. ಶಿಕ್ಷಕಿ ನೀಡಿದ್ದ ಗುರಿ ಸಾಧಿಸಿದ ಪಿ. ಶರಣ್ಯ ಹಾಗೂ ಎಚ್‌. ಯಮುನಾ ಎಂಬಿಬ್ಬರು ವಿದ್ಯಾರ್ಥಿನಿಯರು ಸೆಲ್ವಿಯವರ ಬಹುಮಾನಕ್ಕೆ ಭಾಜನರಾದರಲ್ಲದೆ, ರವಿವಾರ (ಅ. 29) ಇದೇ ಮೊದಲ ಬಾರಿಗೆ ಕೊಯಮತ್ತೂರಿಗೆ ವಿಮಾನದಲ್ಲಿ ಹೋಗಿ ಬಂದಿದ್ದಾರೆ.

ತಮ್ಮ ವಿದ್ಯಾರ್ಥಿನಿಯರಿಗೆ ಇಂಥ ಅವಕಾಶ ಕಲ್ಪಿಸಿದ ಸೆಲ್ವಿ ಅವರೇನೂ ಅನುಕೂಲಸ್ಥರಲ್ಲ. ತಮ್ಮ ಇತಿಮಿತಿಯ ಜೀವನದ ನಡುವೆ ತಿಂಗಳುಗಳ ಕಾಲ ಇಷ್ಟಿಷ್ಟೇ ಹಣ ಕೂಡಿಟ್ಟು, ವಿದ್ಯಾರ್ಥಿನಿಯರಿಗೆ ಬೇಕಾದ ಟಿಕೆಟ್‌ ಖರೀದಿಸಿದ್ದಾರೆ ಅವರು. ತಮ್ಮ ಉದ್ದೇಶ ಫ‌ಲಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ಉತ್ತೇಜಿತರಾಗಿರುವ ಸೆಲ್ವಿ, ಮುಂದಿನ ವರ್ಷ ಶೇ. 100ರಷ್ಟು ಅಂಕ ತಗೆಯುವವರಿಗೆ ದಿಲ್ಲಿ ಪ್ರವಾಸ ಮಾಡಿಸುವುದಾಗಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next