ಮುಂಬೈ: ಧಾರಾಕಾರ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನ ತಗ್ಗುಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ (ಜು.25) ವಿಮಾನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಹಲವಾರು ಪ್ರದೇಶಗಳು ಸಂಪೂರ್ಣವಾಗಿ ನೀರಿನಿಂದ ಆವೃತ್ತಗೊಂಡಿದೆ. ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ 7 ಕೆರೆಗಳಲ್ಲಿ ಎರಡು ಕೆರೆ ತುಂಬಿ ಹರಿಹರಿಯುತ್ತಿದೆ. ನಗರದ ಸಯನ್, ಚೆಂಬೂರ್ ಮತ್ತು ಅಂಧೇರಿ ಮಳೆಗೆ ತತ್ತರಿಸಿಹೋಗಿದೆ ಎಂದು ವರದಿ ವಿವರಿಸಿದೆ.
ಹವಾಮಾನ ಇಲಾಖಾ ಅಧಿಕಾರಿಗಳು, ಜುಲೈ 26ರ ಬೆಳಗ್ಗೆ 8-30ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಈ ವೇಳೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದಿರುವುದಾಗಿ ಮುನ್ನೆಚ್ಚರಿಕೆ ನೀಡಿದೆ.
ಮಳೆಯಿಂದಾಗಿ ವಿಮಾನ ಸಂಚಾರ ರದ್ದುಪಡಿಸಿರುವುದರಿಂದ ಟಿಕೆಟ್ ನ ಪೂರ್ಣ ಹಣ ವಾಪಸ್ ಕೊಡುವುದಾಗಿ ತಿಳಿಸಿರುವ ಏರ್ ಇಂಡಿಯಾ ಇಲ್ಲದಿದ್ದಲ್ಲಿ ಇಂದಿನ ಬುಕ್ಕಿಂಗ್ ನಲ್ಲಿ ಮರು ಟಿಕೆಟ್ ಬುಕ್ಕಿಂಗ್ ಗೆ ಒನ್ ಟೈಮ್ ಕಾಂಪ್ಲಿಮೆಂಟರಿ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪ್ಲೈಟ್ ಸ್ಟೇಟಸ್ ( Flight ಅನ್ನು ಪರಿಶೀಲಿಸುತ್ತಿರಬೇಕು ಎಂದು ಸ್ಪೈಸ್ ಜೆಟ್ ಸಂಸ್ಥೆ ತಿಳಿಸಿದೆ.