Advertisement

Imphal ಯುಎಫ್ಒ: ಏರ್‌ಪೋರ್ಟ್‌ ಕಾರ್ಯಾಚರಣೆ ಸ್ಥಗಿತ

11:41 PM Nov 19, 2023 | Team Udayavani |

ಇಂಫಾಲ್‌: ಮಣಿಪುರದ ಇಂಫಾಲ್‌ನ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಯುಎಫ್ಒ (ಅಪರಿಚಿತ ಹಾರುವ ವಸ್ತು)ವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ರವಿವಾರ ಏರ್‌ಪೋರ್ಟ್‌ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

Advertisement

ಇದರಿಂದಾಗಿ ಇಂಫಾಲ್‌ನಿಂದ ತೆರಳಬೇಕಿದ್ದ 3 ವಿಮಾನಗಳ ಸುಮಾರು 500ರಷ್ಟು ಪ್ರಯಾಣಿಕರು ವಿಮಾನ ನಿಲ್ದಾಣ ದಲ್ಲೇ ಉಳಿಯಬೇಕಾಯಿತು.

2 ವಿಮಾನಗಳ ಪಥ ಬದಲಿಸಿ ದರೆ, 3 ವಿಮಾನಗಳ ಸಂಚಾರ ವಿಳಂಬ ಗೊಳಿಸಲಾಯಿತು. ನಿರ್ಬಂಧಿತ ವಲಯದಲ್ಲಿ ಡ್ರೋನ್‌ನಂತಹ ವಸ್ತುವೊಂದು ಅನು ಮಾನಾ ಸ್ಪದವಾಗಿ ಹಾರುತ್ತಿರು ವುದು ಸಿಐಎಸ್‌ಎಫ್ ಸಿಬಂದಿಯ ಕಣ್ಣಿಗೆ ಬಿದ್ದಿದ್ದು, ಕೂಡಲೇ ವಿಮಾನಗಳ ಹಾರಾ ಟವನ್ನು ಸ್ಥಗಿತಗೊಳಿ ಸಲಾಯಿತು. 3 ಗಂಟೆಗಳ ಬಳಿಕ ವಾಯುಪಡೆ ತಂಡವು ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ ಬಳಿಕವೇ ಕಾರ್ಯಾಚರಣೆ ಆರಂಭಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next