Advertisement

ಪೈಲಟ್‌ ಎಡವಟ್ಟಿನಿಂದ ವಿಮಾನ ಹೈಜಾಕ್‌ ಭೀತಿ

06:00 AM Nov 11, 2018 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಏರ್‌ಪೋರ್ಟಿಂದ ಅಫ್ಘಾನಿಸ್ತಾನದ ಕಂದಹಾರ್‌ಗೆ ಹೊರಡಬೇಕಿದ್ದ ವಿಮಾನ ಪೈಲಟ್‌ ಕಣ್ತಪ್ಪಿನಿಂದ ಹೈಜಾಕ್‌ ಬಟನ್‌ ಒತ್ತಿದ್ದ ಪರಿಣಾಮ ಶನಿವಾರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಏರಿಯಾನಾ ಆಫ್ಘಾನ್‌ ಏರ್‌ಲೈನ್ಸ್‌ನ ವಿಮಾನದ ಪೈಲಟ್‌ ಹೈಜಾಕ್‌ ಬಟನ್‌ ಒತ್ತಿದ ಕೂಡಲೇ ದೆಹಲಿ-ಕಂದಹಾರ್‌ ಎಫ್ಜಿ 312 ಮಾದರಿಯ ವಿಮಾನವನ್ನು ಎನ್‌ಎಸ್‌ಜಿ ಮತ್ತು ಇತರ ಭದ್ರತಾ ಸಿಬ್ಬಂದಿ  ತಕ್ಷಣವೇ ಭದ್ರತಾ ಸಿಬ್ಬಂದಿ ಸುತ್ತುವರಿದು ತೀವ್ರ ತಪಾಸಣೆ ನಡೆಸಿದರು. ಯಾವುದೇ ಅಪಾಯವಿಲ್ಲ ಎಂಬುದು ಸಾಬೀತಾದಾಗ ಎಲ್ಲರೂ ನಿಟ್ಟುಸಿರುಬಿಟ್ಟಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next