Advertisement
ಉಗ್ರರ ಮೃತದೇಹ ತೋರಿಸಿ: ಪುಲ್ವಾಮಾ ದಾಳಿಯಲ್ಲಿ ಅಸುನೀಗಿದ ಇಬ್ಬರು ಯೋಧರ ಕುಟುಂಬ ಸದಸ್ಯರು, ಐಎಎಫ್ ಬಾಲಾಕೋಟ್‌ನಲ್ಲಿ ನಡೆಸಿದ ದಾಳಿಯ ಬಗ್ಗೆ ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ. “ಯೋಧರ ಛಿದ್ರಗೊಂಡ ದೇಹದ ಭಾಗಗಳನ್ನು ನೋಡಿದ್ದೇವೆ. ಉಗ್ರರ ಮೃತದೇಹ ನೋಡಿದರಷ್ಟೇ ನಮಗೆ ಸಮಾಧಾನವಾಗುತ್ತದೆ’ ಎಂದಿದ್ದಾರೆ.
Related Articles
Advertisement
ಹೆಚ್ಚುವರಿ ಸೇನೆ ಜಮಾವಣೆಭಾರತ ಮತ್ತು ಪಾಕಿಸ್ಥಾನದ ನಡುವೆ ಸಮರದ ವಾತಾವರಣ ತಲೆದೋರಿರುವ ಬೆನ್ನಲ್ಲೇ, ಪಾಕಿಸ್ಥಾನವು ಕಾಶ್ಮೀರದ ಬಳಿಯಿರುವ ತನ್ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಹೆಚ್ಚುವರಿ ಸೈನ್ಯವನ್ನು ಹಾಗೂ ಯುದ್ಧ ಸಲಕರಣೆಗಳನ್ನು ಜಮೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆ ನಡೆಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಪಾಕಿಸ್ಥಾನ- ಆಫ್ಘಾನಿಸ್ಥಾನದ ಗಡಿಯಲ್ಲಿ ಜಮೆಗೊಂಡಿದ್ದ ಪಾಕಿಸ್ಥಾನದ ಹೆಚ್ಚುವರಿ ಸೈನ್ಯ ಹಾಗೂ ಯುದ್ಧ ಸಲಕರಣೆಗಳನ್ನು ಎಲ್‌ಒಸಿ ಬಳಿಯ ನೌಶೇರಾ ಪ್ರಾಂತ್ಯದ ಕಡೆಗೆ ರವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸೊಳ್ಳೆ ಹೊಡೆದ ಅನಂತರ ಲೆಕ್ಕ ಮಾಡುವುದಿಲ್ಲ
ಬಾಲಾಕೋಟ್‌ನಲ್ಲಿ ಭಾರತ ದಾಳಿ ನಡೆಸಿದ ಅನಂತರ ಅಲ್ಲಿ ಸತ್ತವರ ಸಂಖ್ಯೆಯೆಷ್ಟು ಎಂಬ ಬಗ್ಗೆ ಸಾಕ್ಷ್ಯ ನೀಡಿ ಎಂದು ವಿಪಕ್ಷಗಳು ಕೇಳುತ್ತಿರುವುದಕ್ಕೆ ಕೇಂದ್ರ ಸಚಿವ ವಿ.ಕೆ. ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸೊಳ್ಳೆಗಳನ್ನು ಸಾಯಿಸಿದ ಅನಂತರ ಅವುಗಳನ್ನು ಲೆಕ್ಕ ಮಾಡುತ್ತ ಕೂರುವುದಿಲ್ಲ. ಬದಲಿಗೆ ನೆಮ್ಮದಿಯಿಂದ ನಿದ್ರೆ ಮಾಡುತ್ತೇವೆಟ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಇನ್ನೊಂದೆಡೆ ಮುಂದಿನ ಬಾರಿ ಇಂಥ ದಾಳಿ ನಡೆಸುವಾಗ ಈ ರೀತಿ ಪ್ರಶ್ನೆ ಕೇಳುವವರನ್ನು ಕರೆದುಕೊಂಡು ಹೋಗಿ ಎಸೆಯ ಬೇಕು. ಎಷ್ಟು ಜನರು ಸತ್ತಿದ್ದಾರೆ ಎಂಬುದನ್ನು ನೋಡಿಕೊಂಡು ಬರಲಿ ಎಂದಿದ್ದಾರೆ.