Advertisement
ಬೆಂಗಳೂರು ಅರಮನೆ ಜನರಲ್ ಮ್ಯಾನೇಜರ್ ಪಾಂಡಿಯನ್ ನೀಡಿದ ದೂರು ಆಧರಿಸಿ ಅಶ್ರಫ್ ಅಲಿ, ಮಧು ಆಚಾರ್ಯ,ಅಬ್ದುಲ್ ರೆಹಮಾನ್, ರಜನಿ.ಸಿ ಭಟ್, ಚಂದ್ರಶೇಖರ್ ಸ್ವಾಮೀಜಿ ಹಾಗೂ ಗಿರೀಶ್ ಕಾಮತ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಮೊದಲನೇ ಆರೋಪಿಯಾಗಿರುವ ಅಶ್ರಫ್ ಅಲಿ, 2014ರ ಫೆ.2ರಂದು ಪ್ರಮೋದಾ ದೇವಿ ಒಡೆಯರ್ ಅವರ ಬಳಿ ಬಂದು ಲೈಸನ್ಸ್ ಅಗ್ರಿಮೆಂಟ್ ತೋರಿಸಿದ್ದರು. ಅದರಲ್ಲಿ, 2012ರ ಜು.18ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ನನ್ನ ಮಧ್ಯೆ ಒಂದು ಅಗ್ರಿಮೆಂಟ್ ಆಗಿದೆ. ಅರಮನೆ ಮೈದಾನದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಿ
ಒಡೆಯರ್ ಸಹಿ ಮಾಡಿದ್ದಾರೆ. ಅದಕ್ಕಾಗಿ ಏಳುವರೆ ಕೋಟಿ ರೂ. ಪಡೆದಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಪ್ರಮೋದಾ ದೇವಿ ಅವರು, ಅಗ್ರಿಮೆಂಟ್‌ನ ಅಸಲು ಪ್ರತಿಗಳನ್ನು ತೋರಿಸುವಂತೆ ಅಶ್ರಫ್ ಅಲಿ ಅವರಲ್ಲಿ ಕೇಳಿದ್ದರು. ಇದಕ್ಕೆ ಅಸಲಿ ದಾಖಲೆ ಒದಗಿಸಲಿಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಕೆಯಾಗಿತ್ತು.