Advertisement

ಬೇಸಗೆಯ ಸೆಕೆಗೆ ಫ್ಲಾಟ್ ಸ್ಯಾಂಡಲ್ಸ್

11:25 PM May 02, 2019 | Team Udayavani |

ಬೇಸಿಗೆ ಶುರುವಾಗಿದ್ದೇ ತಡ, ನಾವು ಶೂಗಳಿಂದ ಆದಷ್ಟು ದೂರವಿರಲು ಶುರು ಮಾಡುತ್ತೇವೆ. ಈ ಸೆಕೆಯಲ್ಲಿ ಶೂ-ಸಾಕ್ಸ್‌ ತೊಟ್ಟರೆ ಪಾದಗಳಿಂದ ದುರ್ವಾಸನೆ ಬರುವುದು ಖಚಿತ. ಬೆವರು, ದುರ್ವಾಸನೆ, ಕಿರಿಕಿರಿ ಇವೆಲ್ಲಕ್ಕೂ ಗುಡ್‌ಬೈ ಹೇಳಬೇಕು ಎಂದಾದರೆ ಚಪ್ಪಲಿಗಳನ್ನು ತೊಡುವುದು ಉತ್ತಮ. ಚಪ್ಪಲಿ ಎಂದರೆ ಬರೀ ಹವಾಯಿ ಚಪ್ಪಲಿ ಅಲ್ಲ! ಸ್ಟೈಲಿಶ್‌ ಮತ್ತು ಟ್ರೆಂಡಿ ಫ್ಲಾಟ್ಸ್ಯಾಂಡಲ್ಗಳು. ಸದ್ಯಕ್ಕೆ ಟೆಂಡ್‌ ಆಗುತ್ತಿರುವ ಸಮ್ಮರ್‌ ಫ‌ೂಟ್ವೇರ್‌ (ಬೇಸಗೆಯ ಪಾದರಕ್ಷೆಗಳು). ಪಾದಗಳಿಗೆ ಉಸಿರಾಡಲು ಇವಕ್ಕಿಂತ ಒಳ್ಳೆಯ ಪಾದರಕ್ಷೆ ಬೇರೆ ಇಲ್ಲ. ಓಪನ್‌ ಶೂಸ್‌, ಚಪ್ಪಲಿ, ಫ್ಲಿಪ್‌ಫ್ಲಾಪ್ಸ್‌, ಸ್ಯಾಂಡಲ್ಸ್ ಅಥವಾ ಗ್ಲಾಡಿಯೇಟರ್ ತೊಡಲು ಇದು ಒಳ್ಳೆಯ ಸಮಯ. ಎಲ್ಲಕ್ಕಿಂತ ಹೆಚ್ಚಾಗಿ, ಫ್ಲಾಟ್ ಸ್ಯಾಂಡಲ್ಗಳು ಬೇಸಗೆಗೆ ಅತ್ಯಂತ ಸೂಕ್ತವಾದುದು.

Advertisement

ಕಂಫ‌ರ್ಟ್‌ ಮತ್ತು ಸ್ಟೈಲಿಶ್‌
ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ, ಎರಡೂ ಪ್ರಕಾರದ ಉಡುಗೆಗಳ ಜೊತೆ ಫ್ಲಾಟ್ ಸ್ಯಾಂಡಲ್ಗಳು ಚೆನ್ನಾಗಿ ಕಾಣುತ್ತವೆ. ಹಾಗಾಗಿ, ಇವನ್ನು ಇವುಗಳನ್ನು ಬೀಚ್, ಪೂಲ್ ಸೈಡ್‌, ಶಾಪಿಂಗ್‌, ಔಟಿಂಗ್‌, ಪಾರ್ಟಿ, ಸಿನಿಮಾ, ಮತ್ತಿತರ ಜಾಗಗಳಿಗೂ ಧರಿಸಿಕೊಂಡು ಹೋಗಬಹುದು. ಇವುಗಳನ್ನು ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ತೊಡಬಹುದು. ಕಂಫ‌ರ್ಟ್‌ ಮತ್ತು ಸ್ಟೈಲ್ ಎರಡನ್ನೂ ನೀಡುವ ಈ ಫ್ಲಾಟ್ ಸ್ಯಾಂಡಲ್ಸ್ಗೆ ಬೇಸಗೆಯಲ್ಲೇ ಬಹಳ ಬೇಡಿಕೆ ಇರುವುದು.

ಉಡುಗೆಗೆ ಹೋಲುವಂಥ ಬಣ್ಣದ ಫ್ಲಾಟ್ ಸ್ಯಾಂಡಲ್ಸ್ , ತೊಟ್ಟ ಬೆಲ್r (ಸೊಂಟ ಪಟ್ಟಿ), ವಾಚ್, ಬ್ಯಾಗ್‌, ಆಭರಣ ಮತ್ತಿತರ ಆಕ್ಸೆಸರೀಸ್‌ಗೆ ಹೋಲುವಂಥ ಫ್ಲಾಟ್ ಸ್ಯಾಂಡಲ್ಸ್ ಅಥವಾ ಕೇಶದ ಬಣ್ಣ (ಹೇರ್‌ ಕಲರ್‌ ಮಾಡಿದ್ದರೆ) ಕ್ಕೆ ಹೋಲುವಂಥ ಫ್ಲಾಟ್ ಸ್ಯಾಂಡಲ್ಸ್ ಅಥವಾ ಕೇಶದ ಬಣ್ಣ (ಹೇರ್‌ ಕಲರ್‌ ಮಾಡಿದ್ದರೆ)ಕ್ಕೆ ಹೋಲುವಂಥ ಫ್ಲಾಟ್ ಸ್ಯಾಂಡಲ್ಸ್ ಅನ್ನು ತೊಟ್ಟು ಸ್ಟೈಲ್ ಸ್ಟೇಟ್ಮ್ಂಟ್ ಮಾಡಬಹುದು!

ಜತೆಗೆ ಸಾಕ್ಸ್‌ ಬೇಡ
ಇಂಥ ಚಪ್ಪಲಿಗಳಿಗೆ ಆ್ಯಂಕಲ್ ಸಪೋರ್ಟ್‌ ಇರುವುದಿಲ್ಲ. ಅಂದರೆ ಪಾದದ ಗಂಟಿನ ಸುತ್ತ ಯಾವುದೇ ಸ್ಟ್ರಾಪ್‌, ಬಕಲ್, ಎಲಾಸ್ಟಿಕ್‌ ಅಥವಾ ಬೆಲ್r ಇರುವುದಿಲ್ಲ. ಹಾಗಾಗಿ ನಡೆಯುವಾಗ ಪಟಾ ಪಟಾ ಎಂಬ ಸದ್ದು ಬರುತ್ತದೆ. ಒಂದು ವಿಷಯ ಗಮನದಲ್ಲಿರಲಿ. ಇಂಥ ಫ್ಲಾಟ್ ಸ್ಯಾಂಡಲ್ಸ್ ತೊಟ್ಟಾಗ ಕಾಲ ಬೆರಳುಗಳು ಕಾಣುವುದರಿಂದ ಅಂದದ ನೈಲ್ ಪೈಂಟ್ (ಉಗುರು ಬಣ್ಣ) ಹಚ್ಚಬಹುದು ಅಥವಾ ನೈಲ್ ಆರ್ಟ್‌ ಮಾಡಬಹುದು. ಇಂಥ ಫ್ಲಾಟ್ ಸ್ಯಾಂಡಲ್ಸ್ ಜೊತೆ ಯಾವುದೇ ಕಾರಣಕ್ಕೆ ಸಾಕ್ಸ್‌ ತೊಡುವ ಹಾಗಿಲ್ಲ. ಎಷ್ಟೇ ತೆಳ್ಳಗಿನ ಸಾಕ್ಸ್‌ ಆದರೂ ಇವುಗಳ ಜೊತೆ ತೊಡಬೇಡಿ. ಸಾಕ್ಸ್‌ ತೊಟ್ಟರೆ, ಸ್ಯಾಂಡಲ್ಸ್ ತೊಡುವ ಉದ್ದೇಶವೇ ತಪ್ಪಾಗುತ್ತದೆ.

-ಅದಿತಿಮಾನಸ ಟಿ.ಎಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next