Advertisement

2023 Recap: ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ CNG ಕಾರುಗಳು

06:20 PM Dec 30, 2023 | Team Udayavani |

ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ನಲ್ಲಿ ಚಲಿಸುವ ಕಾರುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಮಾದರಿಗಳ ಬೆಲೆಯಲ್ಲಿ ಶೇ.49ರಷ್ಟು ಹೆಚ್ಚಳವಾಗಿದ್ದರೂ, ಸಿಎನ್‌ಜಿ ವಾಹನಗಳ ಮಾರಾಟದಲ್ಲಿ ಶೇ.40.7ರಷ್ಟು ಏರಿಕೆಯಾಗಿದೆ. ಪ್ರಸ್ತುತ, ಸಿಎನ್‌ಜಿ ವಾಹನಗಳು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸುಮಾರು 12 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿವೆ. 2023 ರಲ್ಲಿ ಏಳು ಸಿಎನ್‌ಜಿ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು ಯಾವೆಲ್ಲಾ ಕಾರು ಬಿಡುಗಡೆಯಾಗಿದೆ ಎಂಬುದನ್ನು ನೋಡೋಣ.

Advertisement

1. ಟಾಟಾ ಆಲ್ಟ್ರೋಜ್ ಸಿಎನ್‌ಜಿ
ಟಾಟಾ ಮೋಟಾರ್ಸ್ ಹೊಸ ಅವಳಿ-ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಮೇ 2023 ರಲ್ಲಿ ಆಲ್ಟ್ರೋಜ್ ​​ಹ್ಯಾಚ್‌ಬ್ಯಾಕ್ ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ಸನ್‌ರೂಫ್‌ನೊಂದಿಗೆ ಬಂದಿರುವ ಮೊದಲ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಕಾರು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಇದು ಟಾಟಾದ ಸಿಎನ್‌ಜಿ ತಂತ್ರಜ್ಞಾನದೊಂದಿಗೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. ಇದು ಗರಿಷ್ಠ 77bhp ಪವರ್ ಮತ್ತು 103Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ ರೂ.7.55 ಲಕ್ಷದಿಂದ ರೂ.10.55 ಲಕ್ಷ ರೂ ಆಗುತ್ತದೆ.

2. ಟಾಟಾ ಟಿಯಾಗೊ/ಟಿಗೊರ್ ಸಿಎನ್‌ಜಿ
ಟಾಟಾ ಮೋಟಾರ್ಸ್ ಹೊಸ ಟ್ವಿನ್ ಸಿಲಿಂಡರ್ ಸಿಎನ್‌ಜಿಯೊಂದಿಗೆ ಟಿಯಾಗೊ ಹ್ಯಾಚ್‌ಬ್ಯಾಕ್ ಮತ್ತು ಟಿಗೊರ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಪರಿಚಯಿಸಿದೆ. ಇದರ ಎಕ್ಸ್ ಶೋ ರೂಂ ಬೆಲೆ ಕ್ರಮವಾಗಿ ರೂ.6.55 ಲಕ್ಷದಿಂದ ರೂ.8.20 ಲಕ್ಷ. ಎರಡೂ ಸಿಎನ್‌ಜಿ ಕಾರುಗಳು 1.2ಲೀ, ಮೂರು-ಸಿಲಿಂಡರ್ ಪೆಟ್ರೋಲ್ ಮೋಟಾರ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ವಿನ್ಯಾಸವು ಗ್ರಾಹಕರಿಗೆ ಹೇಳಿ ಮಾಡಿಸಿದಂತಿದೆ.

Advertisement

3. ಟಾಟಾ ಪಂಚ್ ಸಿಎನ್‌ಜಿ
ಟಾಟಾ ಪಂಚ್ ಮಾದರಿ ಶ್ರೇಣಿಯು ಐದು ಸಿಎನ್‌ಜಿ ರೂಪಾಂತರಗಳನ್ನು ಒಳಗೊಂಡಿದೆ; ಪ್ಯೂರ್, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶ್ಡ್ ಮತ್ತು ಅಕಮ್ಪ್ಲಿಶ್ಡ್ ಡ್ಯಾಝಲ್ ಎಸ್ – ಎಕ್ಸ್ ಶೋರೂಂ ಬೆಲೆ ಕ್ರಮವಾಗಿ ರೂ.7.10 ಲಕ್ಷ, ರೂ.7.85 ಲಕ್ಷ, ರೂ.8.20 ಲಕ್ಷ, ರೂ.8.85 ಲಕ್ಷ ಮತ್ತು ರೂ.9.68 ಲಕ್ಷ. ಇದು ಸಿಎನ್‌ಜಿ ಕಿಟ್‌ನೊಂದಿಗೆ 1.2 ಲೀಟರ್, ಮೂರು ಸಿಲಿಂಡರ್ ಹೊಂದಿರುವ ಪೆಟ್ರೋಲ್ ಎಂಜಿನ್ ಹೊಂದಿದೆ.

4. ಮಾರುತಿ ಬ್ರೆಝಾ ಸಿಎನ್‌ಜಿ
ಮಾರುತಿ ಸುಜುಕಿಯ ಬ್ರೆಝಾ ಸಿಎನ್‌ಜಿಯೊಂದಿಗೆ ಬರುವ ಭಾರತದ ಮೊದಲ ಕಾಂಪ್ಯಾಕ್ಟ್ SUV ಕಾರು ಆಗಿದೆ. ಮಾರ್ಚ್ 2023 ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ಈ ಕಾರು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆಗಳು ಕ್ರಮವಾಗಿ 9.24 ಲಕ್ಷ, 10.59 ಲಕ್ಷ, 11.99 ಲಕ್ಷ ಮತ್ತು 12.15 ಲಕ್ಷ ರೂ. ಈ ಕಾಂಪ್ಯಾಕ್ಟ್ SUV 1.5L K15C ಡ್ಯುಯಲ್ಜೆಟ್ ಎಂಜಿನ್ ಹೊಂದಿದೆ.

5. ಮಾರುತಿ ಗ್ರ್ಯಾಂಡ್ ವಿಟಾರಾ ಸಿಎನ್‌ಜಿ
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿಯನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಲಾಗಿದ್ದು. ಇದರ ಎಕ್ಸ್ ಶೋರೂಂ ಬೆಲೆ 12.85 ಲಕ್ಷದಿಂದ 14.84 ಲಕ್ಷದ ವರೆಗೆ ಇರಲಿದೆ, ಅದರ ಡೆಲ್ಟಾ ಮತ್ತು ಝೀಟಾ ಸಿಎನ್‌ಜಿ ರೂಪಾಂತರಗಳು ಕ್ರಮವಾಗಿ ರೂ.13.05 ಲಕ್ಷ ಮತ್ತು ರೂ.14.86 ಲಕ್ಷ. ಈ SUV ಯಲ್ಲಿ ಸಿಎನ್‌ಜಿ ಕಿಟ್‌ನೊಂದಿಗೆ 1.5L K15 ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ.

6. ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್‌ಜಿ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಜನವರಿಯಲ್ಲಿ 13.23 ಲಕ್ಷದ ಆರಂಭಿಕ ಬೆಲೆಯಲ್ಲಿ ಹೈರೈಡರ್ ಸಿಎನ್‌ಜಿಯನ್ನು ಪರಿಚಯಿಸಿತು, ಇದು ಎಸ್ ಮತ್ತು ಜಿ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದು 1.5L, 4-ಸಿಲಿಂಡರ್ ಕೆ12ಸಿ ಎಂಜಿನ್ ಅನ್ನು ಹೊಂದಿದೆ, ಇದು ಪೆಟ್ರೋಲ್ ಮೋಡ್‌ನಲ್ಲಿ 136Nm ಜೊತೆಗೆ 103bhp ಮತ್ತು ಸಿಎನ್‌ಜಿ ಮೋಡ್‌ನಲ್ಲಿ 121.5Nm ಜೊತೆಗೆ 88bhp ಪವರ್ ಹೊಂದಲಿದೆ.

Advertisement

Udayavani is now on Telegram. Click here to join our channel and stay updated with the latest news.

Next