Advertisement

ಇ-ಕಾಮರ್ಸ್‌ನಲ್ಲಿ ಫ್ಲಾಶ್‌ ಸೇಲ್‌ ನಿಷೇಧ?

07:31 AM Jun 22, 2021 | |

ನವದೆಹಲಿ: ಇ-ಜಾಲತಾಣಗಳಲ್ಲಿ ಯಾವುದೇ ಉತ್ಪನ್ನವನ್ನು ಫ್ಲಾಶ್‌ ಸೇಲ್‌ ಅಡಿಯಲ್ಲಿ ಮಾರಾಟ ಮಾಡುವುದಕ್ಕೆಕೇಂದ್ರ ಸರ್ಕಾರ ನಿರ್ಬಂಧ ಹೇರಲು ನಿರ್ಧರಿಸಿದೆ. ಫ್ಲಾಶ್‌ ಸೇಲ್‌ ಹೆಸರಿನಲ್ಲಿ ನಕಲಿ ಕಂಪನಿಗಳು, ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ಲಗಾಮು ಹಾಕುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.

Advertisement

ಫ್ಲಾಶ್‌ ಸೇಲ್‌ನಿರ್ಬಂಧದಜೊತೆ,ಪ್ರತಿಯೊಂದು “ಇ-ಕಾಮರ್ಸ್‌’ ಜಾಲತಾಣ ತನ್ನಲ್ಲಿ ಅನುಸರಣ ಅಧಿಕಾರಿ ಹಾಗೂ ಸಾರ್ವಜನಿಕರ ಕುಂದು-ಕೊರತೆ ಆಲಿಸುವ ಅಧಿಕಾರಿಗಳನ್ನು ನೇಮಿಸುವ ಅಂಶಗಳುಳ್ಳ ಕರಡು ಪ್ರತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.

ಸಾರ್ವಜನಿಕರಿಂದ ಸಲಹೆ- ಅಭಿಪ್ರಾಯಗಳನ್ನು ಪಡೆದು ಆನಂತರ ಈ ನಿಯಮಗಳ ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಹೊಸ ನಿಯಮಗಳ ಜಾರಿಗಾಗಿ, 2020ರ ಇ-ಕಾಮರ್ಸ್‌ ಗ್ರಾಹಕರ ಹಕ್ಕುಗಳ ಸಂರಕ್ಷಣಾ ನಿಯಮಗಳನ್ನು ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ. 2020ರ ಇ-ಕಾಮರ್ಸ್‌ ಗ್ರಾಹಕರ ಹಕ್ಕುಗಳ ಸಂರಕ್ಷಣಾ ನಿಯಮಗಳನ್ನು ಕಳೆದ ವರ್ಷ ಜುಲೈನಲ್ಲಿ ಪ್ರಕಟಿಸಲಾಗಿತ್ತು. ಈ ನಿಯಮಗಳನ್ನು ಉಲ್ಲಂ ಸುವ ಇ-ಕಾಮರ್ಸ್‌ ಜಾಲತಾಣಗಳಿಗೆ ದಂಡ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next