ಕುಮಟಾ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಹಾತ್ಮಾ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಎಂ.ಅಜಿತ ರೈ ಧ್ವಜಾರೋಹಣ ನೆರವೇರಿಸಿದರು.
ತಾಲೂಕಿನ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಶಶಿಕಾಂತ ಕೋಲೇಕರ, ಅಂಗನವಾಡಿ ಸಹಾಯಕಿ ಸುಮತಿ ನಾಯ್ಕ, ಜ್ಯೂನಿಯರ್ ಪ್ರೋಗ್ರಾಮರ್ ಗೋವಿಂದ ಆಚಾರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಿ.ಟಿ ಗೌಡ, ಆಶಾ ಕಾರ್ಯಕರ್ತೆ ಕುಸುಮಾ ನಾಯ್ಕ, ಗ್ರಾಮ ಸಹಾಯಕ ಸುಮಿತ್ ನಾಯ್ಕ, ಸುಹಾಸ ಪಂಡಿತ, ಸಹಾಯಕ ಮಾರ್ಗದಾಳು ಮೋಹನ ಗೌಡ, ಬಿಲ್ ಕಲೆಕ್ಟರ್ ಗೀತಾ ಗೌಡ ಅವರನ್ನು ತಾಲೂಕಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ, ಉಪಾಧ್ಯಕ್ಷೆ ಗೀತಾ ಮುಕ್ರಿ, ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ತಾ.ಪಂ ಇಒ ಸಿ.ಟಿ. ನಾಯ್ಕ, ತಾ.ಪಂ ಅಭಿಯಂತರ ಆರ್.ಜಿ. ಗುನಗಿ, ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ., ಸಿಪಿಐ ಪರಮೇಶ್ವರ ಗುನಗಾ, ಪುರಸಭಾಸದಸ್ಯರಾದ ಶೈಲಾ ಗೌಡ, ತುಳುಸು ಗೌಡ ಸೇರಿದಂತೆ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ವಿವಿಧೆಡೆ 72ನೇ ಗಣರಾಜ್ಯೋತ್ಸವ ಸಂಭ್ರಮ
ಪಿಎಸ್‌ಐ ಆನಂದಮೂರ್ತಿ ಧ್ವಜವಂದನೆ ಸಲ್ಲಿಸಿದರು. ತಹಶೀಲ್ದಾರ್ ಮೇಘರಾಜ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ಬಿಇಒ ರಾಜೇಂದ್ರ ಭಟ್ಟ ವಂದಿಸಿದರು.