Advertisement

ಬ್ರಹ್ಮಾನಂದ ರಥೋತ್ಸವಕ್ಕೆ ಕನ್ನಡ ಬಾವುಟ ಮೆರುಗು

05:09 PM Jun 14, 2022 | Team Udayavani |

ನರಗುಂದ: ಜಾತ್ರೆಗಳು ಕೇವಲ ಧಾರ್ಮಿಕ ವೈಭವೀಕರಣಕ್ಕೆ ಸೀಮಿತವಾಗದೇ ನಾಡಿನ ನೆಲ, ಜಲ, ಸಂಸ್ಕೃತಿ ಪ್ರತಿಬಿಂಬಿಸಬೇಕು. ಇದಕ್ಕೆ ಪೂರಕವಾಗಿ ಕನ್ನಡಿಗರಲ್ಲಿ ಮಾತೃಭಾಷೆ ಕನ್ನಡತನ ಜಾಗೃತಗೊಳಿಸಿ, ಭಾಷಾ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ತಾಲೂಕಿನ ಭೈರನಹಟ್ಟಿ ಗ್ರಾಮದ ಜಾತ್ರಾ ಮಹೋತ್ಸವದಲ್ಲೂ ಕನ್ನಡತನ ಜಾಗೃತಗೊಂಡಿದೆ. ಇಲ್ಲಿನ ಬ್ರಹ್ಮಾನಂದರ ರಥೋತ್ಸವದಲ್ಲಿ ಕನ್ನಡ ಬಾವುಟದ ಹಾರಾಟ ದಶಕಗಳ ಇತಿಹಾಸ ಕಂಡಿದೆ.

Advertisement

ಪ್ರತಿವರ್ಷ ಭೈರನಹಟ್ಟಿ ಜಾಗೃತ ಕೇಂದ್ರ ಬ್ರಹ್ಮಾನಂದ ದೇವಸ್ಥಾನದ ಕತೃì ಲಿಂ.ಬ್ರಹ್ಮಾನಂದ ಶಿವಯೋಗಿಗಳ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಸೋಮವಾರ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದ ಮಧ್ಯೆ ಜರುಗಿದ ಭವ್ಯ ರಥೋತ್ಸವದಲ್ಲಿ ಕನ್ನಡ ಬಾವುಟ ಹಾರಾಡಿದ್ದು ಗಮನ ಸೆಳೆಯಿತು.

ದಶಕಗಳ ಮೆರುಗು: ನಿರಂತರ ಕನ್ನಡ ಸೇವೆಯೊಂದಿಗೆ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ “ನಡೆ ಕನ್ನಡ-ನುಡಿ ಕನ್ನಡ’ ಎಂಬ ವೇದ ವಾಕ್ಯದೊಂದಿಗೆ »ಭೈರನಹಟ್ಟಿಯಿಂದ ನರಗುಂದವರೆಗೆ 13 ಕಿಮೀ ಅಂತರದಲ್ಲಿ ಮಠಾಧೀಶರು, ಕನ್ನಡಾ ಭಿಮಾನಿಗಳ ಬೃಹತ್‌ ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳ ಕನ್ನಡ ಸೇವೆ ಮಾದರಿಯಾಗಿದೆ.

ಕನ್ನಡ ಭಾಷೆಗೆ ಧಕ್ಕೆ ಬಂದಾಗ ನಿರಂತರ ಹೋರಾಟ, ಪ್ರತಿಭಟನೆ, ಕನ್ನಡ ಜಾಗƒತಿ ಅಭಿಯಾನ ನಡೆಸುವಲ್ಲಿ ಮುಂದಾದ ಶ್ರೀಮಠದ ಕನ್ನಡ ಸೇವೆ ಈ ಗ್ರಾಮದ ಬ್ರಹ್ಮಾನಂದ ದೇವಸ್ಥಾನ ರಥೋತ್ಸವದಲ್ಲೂ ಜಾಗೃತವಾಗಿದೆ. ರಥೋತ್ಸವದಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಭಕ್ತ ಸಮೂಹದಲ್ಲಿ ಕನ್ನಡದ ಹೆಮ್ಮೆ ಬಡಿದೆಬ್ಬಿಸುವಲ್ಲಿ ರಥೋತ್ಸವ ಪ್ರಮುಖ ಪಾತ್ರ ವಹಿಸುತ್ತಿದೆ.

ಸೋಮವಾರ ಜರುಗಿದ ರಥೋತ್ಸವದಲ್ಲಿ ರಥದ ಕಳಶದ ಸುತ್ತಲೂ ಕನ್ನಡ ಬಾವುಟ ಹಾರಿಸಲಾಗಿತ್ತು. ಭೈರನಹಟ್ಟಿ ಹಾಗೂ ಸುತ್ತಲಿನ ಮದಗುಣಕಿ, ಬಂಡೆಮ್ಮ ನಗರ, ಉಡಚಮ್ಮ ನಗರ, ಗೋವನಕೊಪ್ಪ, ಕೊಣ್ಣೂರು ಮುಂತಾದ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next