ಮಹಾನಗರ: ಸ್ಮಾರ್ಟ್‌ಸಿಟಿ ಮಂಗಳೂರಿನಲ್ಲಿ ಭವಿಷ್ಯದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಗರದ 13 ಕಡೆಗಳಲ್ಲಿ ಪಾರ್ಕಿಂಗ್ ವಲಯವನ್ನಾಗಿ ಗುರುತಿಸಲು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸಿಟಿಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಪರಿಣಾಮ ನಗರದ ಪ್ರಮುಖ ಕಡೆಗಳಲ್ಲಿ ಟ್ರಾಫಿಕ್ ಒತ್ತಡ ನಿರ್ಮಾಣವಾಗುತ್ತಿದೆ. ಇನ್ನು, ವಾಹನ ಪಾರ್ಕಿಂಗ್ ಮಾಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿ, ನಗರದ 13 ಕಡೆಗಳಲ್ಲಿ ಪಾರ್ಕಿಂಗ್ ವಲಯವನ್ನಾಗಿ ಗುರುತಿಸಲು ಮಹಾನಗರ ಪಾಲಿಕೆ ಮುಂದಾಗಿದ್ದು ಸದ್ಯ, ಟೆಂಡರ್ ಕರೆಯಲಾಗಿದೆ. ಈ ಮಧ್ಯೆ ಈಗಾಗಲೇ ಹಳೆ ಬಸ್ ನಿಲ್ದಾಣದಲ್ಲಿ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್‌ಗೆ ಶಿಲಾನ್ಯಾಸ ನಡೆದಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ನಗರದ ಪಾರ್ಕಿಗ್ ವ್ಯವಸ್ಥೆ ಮತ್ತಷ್ಟು ಸರಾಗವಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಪಾರ್ಕಿಂಗ್ ವ್ಯವಸ್ಥೆ?
ಬಲ್ಮಠ ರಸ್ತೆಯ ತನಿಷ್ಕ ಜುವೆಲರ್ನಿಂದ ಖಜಾನ ಜುವೆಲರಿವರೆಗೆ (ದ್ವಿಚಕ್ರ, ಹಾಗೂ ನಾಲ್ಕು ಚಕ್ರದ ವಾಹನಗಳು), ಹಂಪನಕಟ್ಟೆ ಪಿರೇರಾ ಹೊಟೇಲ್ ಎದುರುಗಡೆ (ಗಾಡಿಚೌಕ) (ದ್ವಿಚಕ್ರ ವಾಹನ), ಹ್ಯಾಮಿಲ್ಟನ್ ವೃತ್ತದಿಂದ ರಾವ್ ಆ್ಯಂಡ್ ರಾವ್ ರಸ್ತೆಯ ಬಲಗಡೆ (ಮೀನು ಮಾರುಕಟ್ಟೆಯ ಬದಿಯಿಂದ ರಾವ್ ಆ್ಯಂಡ್ ರಾವ್ ವೃತ್ತದ ವರೆಗೆ) (ದ್ವಿಚಕ್ರ ವಾಹನ), ಲಾಲ್‌ಬಾಗ್ ಪಬ್ಟಾಸ್ ಐಸ್ ಕ್ರೀಂ ಅಂಗಡಿಯ ಮುಂಭಾಗದ ರಸ್ತೆಯಿಂದ ಕರಾವಳಿ ಉತ್ಸವ ಮೈದಾನ ಪ್ರವೇಶದ್ವಾರದ ವರೆಗೆ (ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ), ಕೆಸಿಸಿಐ ಗೋಳಿಕಟ್ಟೆ ಬಜಾರ್ ಬಂದರು (ದ್ವಿಚಕ್ರ ವಾಹನ), ಹ್ಯಾಮಿಲ್ಟನ್ ವೃತ್ತದಿಂದ ಬದ್ರಿಯಾ ಶಾಲೆಗೆ ಹೋಗುವ ಎಡ ಭಾಗ (ಗೇಟ್ ವೇ ಎದುರು), ನೆಲ್ಲಿಕಾಯಿ ರಸ್ತೆ ಆಲÅಮ್ ಕಟ್ಟಡದ ಎದುರಿನಿಂದ ಹರ್ಷ ಬಾರ್‌ವರೆಗೆ (ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನ), ಮಿಷನ್ ಸ್ಟ್ರೀಟ್ ಸಿಟಿವಾಕ್ ಕಟ್ಟಡದ ಎದುರಿನಿಂದ ರಾವ್ ಆ್ಯಂಡ್ ರಾವ್ ರಸ್ತೆಯವರೆಗೆ ಪರ್ಯಾಯ ದಿನಗಳು (ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ), ಮಾರ್ಕೇಟ್ ರಸ್ತೆ ಕಲ್ಪನಾ ಸೀÌಟ್ಸ್ ಎದುರಿನಿಂದ ಶೇಷ್ಮ ಮೆಡಿಕಲ್‌ವರೆಗೆ (ದ್ವಿಚಕ್ರ ವಾಹನ), ಮಾರ್ಕೆಟ್ ರಸ್ತೆ ಷಣ್ಮುಗಂ ಸ್ಟೋರ್ ಎದುರಿನಿಂದ ಮಹಾಲಕ್ಷ್ಮೀ ಜುವೆಲರ್ವರೆಗೆ (ದ್ವಿಚಕ್ರ ವಾಹನ), ರೂಪವಾಣಿ ಚಿತ್ರ ಮಂದಿರದ ಬಲ ಬದಿಯ ಗೇಟ್‌ನಿಂದ ಎಡ ಬದಿಯ ಗೇಟ್ ವರೆಗೆ (ನಾಲ್ಕು ಚಕ್ರ ವಾಹನ), ಮಾರ್ಕೇಟ್ ರಸ್ತೆ, ಮೈದಾನ 1ನೇ ಅಡ್ಡರಸ್ತೆಯಿಂದ ಪಾತಿಮಾ ಸ್ಟೋರ್ ಎದುರುಗಡೆ ಜೆಡಿ ಡಿ’ಸೋಜಾ ಅಂಗಡಿಯಿಂದ ದುರ್ಗಾ ಪ್ಲವರ್ ಸ್ಟಾಲ್‌ವರೆಗೆ (ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ), ಲಿಂಕಿಂಗ್ ಟವರ್ ಕಟ್ಟಡದ ಎದುರುಗಡೆ ಕಲ್ಪನಾ ಸ್ವೀಟ್ಸ್ ಕಡೆಯಿಂದ ಹಾದು ಹೋಗುವ ರಸ್ತೆಯ ಎಡಬದಿಯಲ್ಲಿ (ದ್ವಿಚಕ್ರ ವಾಹನ), ಬಲ್ಮಠ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ ಗೇಟಿನ ಎಡಗಡೆಯಿಂದ ಫುಡ್ ಜಂಕ್ಷನ್ ಹೊಟೇಲ್‌ವರೆಗೆ (ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ), ಲೈಟ್ ಹೌಸ್ ಹಿಲ್ ರಸ್ತೆ ಎಂಸಿಸಿ ಬ್ಯಾಂಕ್ ಎದುರುಗಡೆಯಿಂದ ಲೋಬೊ ಪ್ರಭು ಅಪಾರ್ಟ್‌ಮೆಂಟ್‌ವರೆಗೆ (ದ್ವಿಚಕ್ರ, ನಾಲ್ಕು ಚಕ್ರದ ವಾಹನ), ಬಾವುಟಗುಡ್ಡೆ ಮೈದಾನ (ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ), ಅಳಕೆ ಮಾರುಕಟ್ಟೆ ತೆರೆದ ಮೈದಾನದಲ್ಲಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಟೆಂಡರ್ ಕರೆಯಲಾಗಿದೆ.