Advertisement
ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದದೆ ಕೂಡಾ ಎಫ್.ಡಿ. ಮಾಡಬಹುದು ಹಾಗೂ ಖಾತೆದಾರ ಬೇರೊಂದು ಬ್ಯಾಂಕಿನಲ್ಲಿ ಖಾತೆ ಹೊಂದಿದಲ್ಲಿ ಠೇವಣಿ ಇರಿಸಿದ ಬ್ಯಾಂಕು ಖಾತೆದಾರರು ಬಯಸುವ ಬೇರೆ ಬ್ಯಾಂಕಿನ ಉಳಿತಾಯ ಖಾತೆಗೆ ಆರ್.ಟಿ.ಜಿ.ಎಸ್.- ನೆಫ್ಟ್ ಮುಖಾಂತರ ಹಣ ಜಮಾ ಮಾಡುತ್ತಾರೆ. ಈ ಸೇವೆ ಶುಲ್ಕರಹಿತವಾಗಿದೆ. ಎಫ್.ಡಿ. ಅವಧಿ ಮುಗಿದು, ಅದೇ ಠೇವಣಿಯನ್ನು ಮುಂದುವರಿಸಲು ಆಟೋ ರಿನೀವಲ್ ಕೂಡಾ ಮಾಡುವ ಸೌಲಭ್ಯವಿರುತ್ತದೆ. ಹೀಗೆ ಮಾಡಲು ಠೇವಣಿದಾರ ಬ್ಯಾಂಕಿಗೆ ಬರುವ ಆವಶ್ಯಕತೆ ಇರುವುದಿಲ್ಲ. ಈ ಠೇವಣಿಗೆ ನಾಮನಿರ್ದೇಶನ ಸೌಲಭ್ಯವಿದೆ. ಆದರೆ, ಒಂದು ಠೇವಣಿಗೆ ಒಬ್ಬರನ್ನೇ ನಾಮನಿರ್ದೇಶನ ಮಾಡಬಹುದು.
ಬಡ್ಡಿಯ ಹಣದಿಂದಲೇ ಜೀವಿಸುವವರು ಎಫ್.ಡಿ. ಮೇಲೆ ಪ್ರತೀ ತಿಂಗಳು ಬಡ್ಡಿ ಬಯಸುವುದು ಸಹಜ. ಆದರೆ, ಈ ಮಾರ್ಗದಲ್ಲಿ ನಿಗದಿತ ಬಡ್ಡಿಗಿಂತ ಬ್ಯಾಂಕ್‌ಗಳಲ್ಲಿ ಸ್ವಲ್ಪ ಕಡಿಮೆ ಬಡ್ಡಿ ಕೊಡುತ್ತಾರೆ.ಇದನ್ನು ಡಿಸ್ಕೌಂಟೆಡ್ ರೇಟ್ ಆಫ್ ಇಂಟರೆಸ್ಟ್ (Discounted rate of interest) ಎಂಬುದಾಗಿ ಕರೆಯುತ್ತಾರೆ. ಇದರ ಬದಲು, ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯುವುದೇ ಲೇಸು. ಹೀಗೆ ಮೂರು ತಿಂಗಳ ನಂತರ ಪಡೆಯುವ ಬಡ್ಡಿಯನ್ನು ಉಳಿತಾಯ ಖಾತೆಯಲ್ಲಿ ಜಮಾ ಇರಿಸಿ, ಮುಂದೆ ಅದೇ ಮೊತ್ತದಿಂದ ಪ್ರತೀ ತಿಂಗಳು, ಮುಂದಿನ ಮೂರು ತಿಂಗಳಲ್ಲಿ ಬಡ್ಡಿ ಪಡೆಯಬಹುದು. ಅಷ್ಟರಲ್ಲಿ ಮತ್ತೆ ಮೂರು ತಿಂಗಳ ಬಡ್ಡಿ ಜಮಾ ಆಗುತ್ತದೆ. ಮೊದಲ ಮೂರು ತಿಂಗಳು ಮಾತ್ರ ಬಡ್ಡಿ ಪಡೆಯಲು ಕಾಯಬೇಕಾದರೂ, ಮುಂದಿನ ಅವಧಿಯಲ್ಲಿ ಬಡ್ಡಿಯಲ್ಲಿ ಯಾವ ಕಡಿತ ಇಲ್ಲದೆಯೇ ಪಡೆಯಬಹುದು ಹಾಗೂ ಇದರಿಂದ ಖಾತೆದಾರರ ಉದ್ದೇಶ ಸಫಲವಾಗುತ್ತದೆ. ಜತೆಗೆ ಗರಿಷ್ಠ ಹಾಗೂ ಸಂಪೂರ್ಣ ಬಡ್ಡಿ ಪಡೆದಂತಾಗುತ್ತದೆ.
Related Articles
Advertisement