Advertisement
ನಾವು ಮಾಡುವ ಕೆಲಸಕ್ಕೆ ಏನಾದರೂ ಗುರಿಯನ್ನಿಟ್ಟುಕೊಂಡರೆ ಆ ಉದ್ದೇಶವನ್ನು ಈಡೇರಿಸುವುದು ಸುಲಭ ಸಾಧ್ಯ. ಗುರಿಯನ್ನು ದಾಟಿ ಮುನ್ನಡೆಯಬಹುದಾಗಿದೆ. ಗುರಿಯೇ ಇಲ್ಲದಿದ್ದರೆ ಕಾಯಕ ವ್ಯರ್ಥ. ದೇಶದ ಆರ್ಥಿಕ ಅಭಿಧಿವೃದ್ಧಿಯೆಂಬ ಉದ್ದೇಶವನ್ನು ಸಾಧಿಸಲು ದೇಶದ ಸರಕಾರವು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಮಹತ್ವಾಕಾಂಕ್ಷೆಯಿಂದಾಗಿ 1951ರಲ್ಲಿ ಭಾರತವು ಪಂಚವಾರ್ಷಿಕ ಯೋಜನೆಗಳ ಯುಗವನ್ನು ಪ್ರವೇಶಿಸಿತು. ಇಂತಹ ಯೋಜನೆಗಳು, ಆರ್ಥಿಕ ಸುಧಾರಣೆಗಳು ದೇಶದಲ್ಲಿ ಆಗಲೇಬೇಕು. ಬದಲಾವಣೆ ಇಲ್ಲದಿದ್ದರೆ ಬೆಳವಣಿಗೆ ಅಸಾಧ್ಯ.
Related Articles
ಕಳೆದ 67 ವರ್ಷಗಳ ಯೋಜನೆಗಳ ಅವಧಿಯಲ್ಲಿ ದೇಶವು ಆರ್ಥಿಕವಾಗಿ ಬಹಳಷ್ಟು ಬದಲಾಗಿದೆ. ಬಹಳಷ್ಟು ಒಳಿತಾಗಿದೆ, ನಿರೀಕ್ಷೆಗಳೆಲ್ಲ ಈಡೇರಲಿಲ್ಲ, ಬಡತನ ಸಮಸ್ಯೆ ಸಂಪೂರ್ಣ ನಿವಾರಣೆಗೊಂಡಿಲ್ಲ. 2016ರ ಅಂದಾಜಿನ ಪ್ರಕಾರ ಇನ್ನೂ ಶೇ.21.3ರಷ್ಟು ಜನರು ಬಡತನ ರೇಖೆಯ ಕೆಳಗಿದ್ದಾರೆ. ಜನರ ತಲಾ ಆದಾಯ 1 ಲಕ್ಷ ರೂ.ಗಳನ್ನು ದಾಟಿದೆ. ಒಂದನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶದ ನೈಜ ಅಭಿವೃದ್ಧಿಯ ದರ ಶೇ.3.6ರಷ್ಟಿತ್ತು. ಇವತ್ತು ದೇಶದ ಅಭಿವೃದ್ಧಿ ದರ ಶೇ.7ರ ಆಸುಪಾಸಿನಲ್ಲಿದೆ. 1990ರ ಏಶ್ಯನ್ ಕರೆನ್ಸಿ ಸಮಸ್ಯೆ, 2008-2009ರ ಜಾಗತಿಕ ಹಿಂಜರಿತದಂತಹ ಆರ್ಥಿಕ ದುರಂತಗಳು ಜಗತ್ತಿನ ರಾಷ್ಟ್ರಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವುದರ ಹೊರತಾಗಿಯೂ ನಮ್ಮದು ಇವತ್ತು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ.
Advertisement
ಈ ಕಾರಣಕ್ಕಾಗಿಯೇ ನಮ್ಮ ರಾಷ್ಟ್ರಕ್ಕೆ ಬ್ರಿಕ್ಸ್ ಕ್ಲಬ್‌ನಲ್ಲಿ ಸದಸ್ಯ ಪಟ್ಟ ಸಿಕ್ಕಿದ್ದು. 1991ಕ್ಕೆ ಹಿಂದೆ 10 ಮಿಲಿಯನ್ ಭಾರತೀಯರು ಸ್ವಯಂ ಪ್ರೇರಿತರಾಗಿ ಅಡುಗೆ ಅನಿಲ ಸಬ್ಸಿಡಿ ಸೌಲಭ್ಯವನ್ನು ತ್ಯಜಿಸುವ ಮನಸ್ಥಿತಿಯನ್ನು ಕನಸು ಕಾಣುವುದಕ್ಕೆ ಕೂಡ ಅಸಾಧ್ಯವಿತ್ತು. ಇವತ್ತು ನಮ್ಮ ನಿತ್ಯ ಜೀವನ lets painful ಎಂದರೆ ತಪ್ಪಾಗಲಿಕ್ಕಿಲ್ಲ. ಅಭಿವೃದ್ಧಿಯ ಜತೆಗೆ ನಿರುದ್ಯೋಗದ ಸಮಸ್ಯೆಯು ಗಂಭೀರ ರೂಪವನ್ನು ತಾಳುವ ವೈರುಧ್ಯವನ್ನು ನಾವು ಕಾಣುತ್ತಿದ್ದೇವೆ. ಅಪೌಷ್ಟಿಕತೆಯ ಸಮಸ್ಯೆ, ಲಿಂಗತಾರತಮ್ಯ, ಕೌಶಲಭರಿತ ಶ್ರಮದ ಕೊರತೆ, ಬುದ್ಧಿವಂತರ ಕೊರತೆ, ಆವಿಷ್ಕಾರಗಳ ಕೊರತೆ, ವಿಜ್ಞಾನಿಗಳ ಕೊರತೆ ಹೀಗೆ ಅನೇಕ ಸಮಸ್ಯೆಗಳು ಅಭಿವೃದ್ಧಿಗೆ ತಡೆಗೋಡೆಯಾಗಿ ನಿಂತಿವೆ. ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಖರ್ಚು ಮಾಡುವ ಹಣವು ತಲುಪಬೇಕಾದವರಿಗೆ ತಲಪಿಸುವುದೇ ಬಹುದೊಡ್ಡ ಸಮಸ್ಯೆ ಇವತ್ತು. ಭ್ರಷ್ಟ ರಾಷ್ಟ್ರ ಪಟ್ಟದಿಂದ ಹೊರಬೇಕಾದ ಅಗತ್ಯ ಇದೆ. ಶಿಕ್ಷಣ ಮತ್ತು ಆರೋಗ್ಯ ಸೇವೆ ವ್ಯಾಪಾರದ ವಸ್ತುಗಳಾಗಿವೆ. ಉತ್ಪಾದನಾ ಕ್ಷೇತ್ರದ ಬೆಳವಣಿಗೆ ನಿಂತ ನೀರಿನಂತಿದೆ. ಉದ್ಯಮ ಸ್ನೇಹಿ ವಾತಾವರಣವು ಇನ್ನಷ್ಟು ಬಲಗೊಳ್ಳಬೇಕಿದೆ. ಅಭಿವೃದ್ಧಿಯ ಗುರಿಯನ್ನು ತಲುಪುವಲ್ಲಿ ಅತ್ಯಂತ ದೊಡ್ಡ ತಡೆಗೋಡೆ ಭ್ರಷ್ಟಾಚಾರ. ಉತ್ತಮ, ಪಾರದರ್ಶಕ, ಜವಾಬ್ದಾರಿಯುತ ಆಡಳಿತವು ಗವರ್ನರ್ಸ್ ಮತ್ತು ಗವರ್ನ್ಡ್ನ ಮಧ್ಯದ ಕಂದರವನ್ನು ನಿವಾರಿಸಬಹುದು. ಕೃಷಿ ಪ್ರಧಾನ ರಾಷ್ಟ್ರವಾಗಿ ಬೆಳೆಯಬೇಕಿದ್ದ ನಾವು ಬದಲಾಗಿ ಸೇವಾ ಕ್ಷೇತ್ರದ ಬೆಳವಣಿಗೆಯಿಂದ ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ಅಭಿವೃದ್ಧಿಯ ಲೆಕ್ಕಾಚಾರ ಕಳೆದ 67 ವರ್ಷಗಳಲ್ಲಿ ಬದಲಾಗಿದೆ. ಹೊಸ ಐಡಿಯಾ, ಹೊಸ ತಾಂತ್ರಿಕತೆ, ಯುವ ಕೃಷಿ ಉದ್ಯಮಿಗಳ ನಾಯಕತ್ವವಷ್ಟೇ ಕೃಷಿಯನ್ನು ಸಂರಕ್ಷಿಸಬಹುದು.
ಸುಧಾರಣೆ ನಿಂತ ನೀರಾಗಲು ಸಾಧ್ಯವೇ ಇಲ್ಲ. ಸುಧಾರಣೆಯಿಂದ ಬದಲಾವಣೆ ಸಾಧ್ಯ. ಇವತ್ತು ಸುಧಾರಣೆಯೇ ಅಭಿವೃದ್ಧಿಯ ಹೊಸ ಮಂತ್ರ. ಭಾರತವು ಈ ಸುಧಾರಣಾ ಪರ್ವವನ್ನು ಮುಂದುವರಿಸಿ ದೇಶದ ಪ್ರಗತಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವಷ್ಟು ಸಶಕ್ತವಾಗಿದೆ. ಸಮಯಕ್ಕನುಸಾರವಾಗಿ ಸುಧಾರಣೆಯನ್ನು ಅಳವಡಿಸಿಕೊಳ್ಳುವುದಷ್ಟೇ ಮಾಡಬೇಕಾದ ಕೆಲಸ. ಸುಧಾರಣೆಗಳು ಪಂಚವಾರ್ಷಿಕ ಯೋಜನೆಯ ರೂಪದಲ್ಲಿರಬಹುದು ಅಥವಾ ರಾಷ್ಟ್ರೀಯ ಅಭಿವೃದ್ಧಿ ಗುರಿಯ ರೂಪದಲ್ಲಿರಬಹುದು. ಒಟ್ಟಾರೆ ಉದ್ದೇಶ ಅಭಿವೃದ್ಧಿ ಗುರಿಯನ್ನು ರೂಪಿಸುವುದರಲ್ಲಿ ದೇಶದ ರಾಜ್ಯಗಳೂ ತಮ್ಮನ್ನು ತೊಡಗಿಸಿಕೊಳ್ಳಬೇಕಾದುದು ಅತೀ ಅಗತ್ಯ. ಆಗ ಮಾತ್ರ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರನ್ನೊಳಗೊಂಡ ಅಭಿವೃದ್ಧಿ ಸಾಧ್ಯ.
ರಾಘವೇಂದ್ರ ರಾವ್, ಬೈಲ್