ಹೊಸದಿಲ್ಲಿ : ಐದು ವರ್ಷ ಪ್ರಾಯದ ಬಾಲಕಿಯೊಬ್ಬಳು ದಿಲ್ಲಿ ಮೆಟ್ರೋ ರೈಲುಗಳ ಓಡಾಟದಿಂದ ಅತೀವವಾದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ದೂರಿದ್ದಾಳೆ.
ಬಾಲಕಿಯ ದೂರನ್ನು ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ), ಶಬ್ದ ಮಾಲಿನ್ಯ ಪರಿಮಿತಿಯ ನಿಮಯಗಳಿಗೆ ಬದ್ಧವಾಗಿರುವಂತೆ ಡಿಎಂಆರ್‌ಸಿಗೆ ನೊಟೀಸ್ ಜಾರಿ ಮಾಡಿದೆ.
ಎನ್‌ಜಿಟಿ ಅಧ್ಯಕ್ಷ ಜಸ್ಟಿಸ್ ಸ್ವತಂತ್ರ ಕುಮಾರ್ ಅವರು ದಿಲ್ಲಿ ಮೆಟ್ರೋ ರೈಲ್ ಕಾಪೊರೇಶನ್ (ಡಿಎಂಆರ್‌ಸಿ) ಗೆ ಶಬ್ದ ಮಾಲಿನ್ಯವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಂತೆ ಮತ್ತು ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಡಿಎಂಆರ್‌ಸಿ ಚಟುವಟಿಕೆಗಳಿಂದ ಶಬ್ದ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿದೆ.