Advertisement

ಐದು ವಿಕೆಟ್‌ ಜಯ; ಪಾಕಿಗೆ ಸರಣಿ

11:32 PM Oct 03, 2019 | Sriram |

ಕರಾಚಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಚೇಸಿಂಗ್‌ ನಡೆಸಿದ ಪಾಕಿಸ್ಥಾನ 5 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲ ಮುಖಾಮುಖೀ ಮಳೆ ಯಿಂದ ರದ್ದುಗೊಂಡಿತ್ತು.

Advertisement

“ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 9ಕ್ಕೆ 297 ರನ್‌ ಗಳಿಸಿ ಸವಾಲೊಡ್ಡಿತ್ತು. ಪಾಕಿಸ್ಥಾನ 48.2 ಓವರ್‌ಗಳಲ್ಲಿ 5 ವಿಕೆಟಿಗೆ 299 ರನ್‌ ಬಾರಿಸಿ ಸತತ 2ನೇ ಜಯ ಸಾಧಿಸಿತು.
ಪಾಕ್‌ ಆರಂಭಿಕರಾದ ಫ‌ಕಾರ್‌ ಜಮಾನ್‌ (76)-ಅಬಿದ್‌ ಅಲಿ (74) 19.3 ಓವರ್‌ಗಳಿಂದ 123 ರನ್‌ ಗಳಿಸಿ ಭದ್ರ ಬುನಾದಿ ನಿರ್ಮಿಸಿದರು. ಬಳಿಕ ಬಾಬರ್‌ ಆಜಂ 31, ಹ್ಯಾರಿಸ್‌ ಸೊಹೈಲ್‌ 56, ಇಫ್ತಿಕರ್‌ ಅಹ್ಮದ್‌ ಅಜೇಯ 28 ರನ್‌ ಮಾಡಿ ತಂಡವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು.

ಲಂಕೆಯ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ಎಡಗೈ ಆರಂಭಕಾರ ದನುಷ್ಕ ಗುಣತಿಲಕ ಅವರ 2ನೇ ಶತಕ. ಅವರು 134 ಎಸೆತಗಳಿಂದ 133 ರನ್‌ ಬಾರಿಸಿದರು (16 ಬೌಂಡರಿ, 1 ಸಿಕ್ಸರ್‌). ಇದು ಅವರ ಜೀವನಶ್ರೇಷ್ಠ ಸಾಧನೆಯೂ ಆಗಿದೆ.

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ-9 ವಿಕೆಟಿಗೆ 297 (ಗುಣತಿಲಕ 133, ಶಣಕ 43, ಭನುಕ 36, ಆಮಿರ್‌ 50ಕ್ಕೆ 3). ಪಾಕಿಸ್ಥಾನ-48.2 ಓವರ್‌ಗಳಲ್ಲಿ 5 ವಿಕೆಟಿಗೆ 299 (ಫ‌ಕಾರ್‌ 76, ಅಲಿ 74, ಸೊಹೈಲ್‌ 56, ಪ್ರದೀಪ್‌ 53ಕ್ಕೆ 2).
ಪಂದ್ಯಶ್ರೇಷ್ಠ: ಅಬಿದ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next