Advertisement
ವಿಶ್ವದ 59ನೇ ರ್‍ಯಾಂಕಿನ ಟ್ರೆವಿಸನ್ 17ನೇ ಶ್ರೇಯಾಂಕದ ಎಡಗೈ ಆಟ ಗಾರ್ತಿ ಫೆರ್ನಾಂಡೆಸ್ ಅವರನ್ನು 6-2, 6-7 (3-7), 6-3 ಸೆಟ್‌ಗಳಿಂದ ಉರುಳಿಸಿದರು.
ಚೀನದ ಝೆಂಗ್ ಕ್ವಿನ್‌ವೆನ್ ಹೊಟ್ಟೆಯ ಸ್ನಾಯು ಸೆಳೆತದಿಂದಾಗಿ ವಿಶ್ವದ ನಂಬರ್ ವನ್ ಆಟಗಾರ್ತಿ ಇಗಾ ಸ್ವಿಯಾಟೆಕ್ ವಿರುದ್ಧ ಸೋಲನ್ನು ಕಂಡರು. ಮೊದಲ ಸೆಟ್ ಅನ್ನು ಟೈಬ್ರೇಕರ್ ಮೂಲಕ ಗೆದ್ದಿದ್ದ ಕ್ವಿನ್‌ವೆನ್ ಆಬಳಿಕ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಲು ವಿಫಲರಾದರು.
Related Articles
Advertisement
ಮಂಗಳವಾರ ತನ್ನ 21ನೇ ಹುಟ್ಟುಹಬ್ಬ ಆಚರಿಸಿದ ಸ್ವಿಯಾಟೆಕ್ 2020ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು. ಒಂದು ವೇಳೆ ಈ ಬಾರಿ ಪ್ರಶಸ್ತಿ ಗೆದ್ದರೆ ವೀನಸ್ ವಿಲಿಯಮ್ಸ್ ಅವರ ಹೆಸರಲ್ಲಿದ್ದ ಸತತ ಗೆಲುವಿನ ಸಾಧನೆಯನ್ನು ಅವರು ಹಿಂದಿಕ್ಕಲಿದ್ದಾರೆ. ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯವು ರಷ್ಯಾದ ದಾರಿಯಾ ಮತ್ತು ವೆರೋನಿಕಾ ಕುದೆರ್‌ವೆುಟೋವಾ ಅವರ ನಡುವೆ ನಡೆಯಲಿದೆ. ಹೀಗಾಗಿ ರಷ್ಯಾದ ಆಟಗಾರ್ತಿಯೊಬ್ಬರು ಸೆಮಿಫೈನಲಿ ಗೇರುವುದು ಖಚಿತವಾಗಿದೆ.
ಮೆಡ್ವೆಡೇವ್‌ಗೆ ಆಘಾತವಿಶ್ವದ ಎರಡನೇ ರ್‍ಯಾಂಕಿನ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ನೇರ ಸೆಟ್‌ಗಳಿಂದ ಸೋತು ಆಘಾತ ಕ್ಕೊಳಗಾಗಿ ದ್ದಾರೆ. ಏಕಮುಖವಾಗಿ ಸಾಗಿದ ಈ ಪಂದ್ಯದಲ್ಲಿ ಕ್ರೊವೇಶಿಯದ ಮರಿನ್ ಸಿಲಿಕ್ 6-2, 6-3, 6-2 ಸೆಟ್‌ಗಳಿಂದ ಮೆಡ್ವೆಡೇವ್ ಅವರ ಓಟಕ್ಕೆ ಬ್ರೇಕ್ ಹಾಕಿದರು. 2014ರಲ್ಲಿ ಯುಎಸ್ ಚಾಂಪಿಯನ್ ಆಗಿದ್ದ ಸಿಲಿಕ್ ಇಲ್ಲಿ ನಾಲ್ಕು ವರ್ಷಗಳ ಬಳಿಕ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದಾರೆ.