Advertisement
ಎಪ್ರಿಲ್ 1ರಿಂದ ಎ. 14ರ ವರೆಗೆ ಈ ಐದು ರಾಜ್ಯಗಳ ಕೋವಿಡ್ ಅಂಕಿಅಂಶಗಳನ್ನು ಗಮನಿಸಿದರೆ ಕೊರೊನಾ ಹಬ್ಬಲು ಚುನಾವಣ ರ್ಯಾಲಿಗಳೇ ನೇರ ಕಾರಣವಾಗಿವೆ ಎಂಬುದು ಸಾಬೀತಾಗುತ್ತದೆ. ಈ ಅವಧಿಯಲ್ಲಿ ಪಶ್ಚಿಮ ಬಂಗಾಲದಲ್ಲಿ ಕೊರೊನಾ ಪ್ರಕರಣಗಳು ಶೇ. 420, ಅಸ್ಸಾಂನಲ್ಲಿ ಶೇ. 532, ತಮಿಳುನಾಡಿನಲ್ಲಿ ಶೇ. 159, ಕೇರಳದಲ್ಲಿ ಶೇ. 103 ಮತ್ತು ಪುದುಚೇರಿಯಲ್ಲಿ ಶೇ. 165ರಷ್ಟು ಹೆಚ್ಚಾಗಿದೆ. ಈ ಐದು ರಾಜ್ಯಗಳಲ್ಲಿ ಕೊರೊನಾ ಸಾವುಗಳ ಪ್ರಮಾಣ ಸರಾಸರಿ ಶೇ. 45ರಷ್ಟು ಅಧಿಕವಾಗಿದೆ. ಇದು ಆರಂಭಿಕ ಸ್ಥಿತಿಯಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಗಳಿವೆ.
ಅಸ್ಸಾಂನ ಕೊರೊನಾ ಅಂಕಿ ಅಂಶಗಳು ಸಾಕಷ್ಟು ಆಘಾತ ಕಾರಿಯಾಗಿದೆ. ರಾಜ್ಯದಲ್ಲಿ ಮಾರ್ಚ್ 16 ಮತ್ತು 31ರ ನಡುವೆ ಕೇವಲ 537 ಜನರು ಕೋವಿಡ್ ಸೋಂಕಿಗೆ ಒಳಗಾಗಿ ದ್ದರು. ಆದರೆ ಈಗ ಎಪ್ರಿಲ್ 1ರಿಂದ 14ರ ವರೆಗೆ ಸಂಪೂರ್ಣ ಚಿತ್ರಣವೇ ಬದಲಾಗಿದ್ದು ದಾಖಲೆಯ 3,398 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಅಂದರೆ ಈಗ ಕೊರೊನಾ ಹಬ್ಬುವ ವೇಗ ಶೇ. 532ಕ್ಕೆ ಏರಿಕೆಯಾಗಿದೆ. ಇನ್ನು ಸಾವಿನ ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದೆ. ಮಾರ್ಚ್ 16ರಿಂದ 31ರ ವರೆಗೆ ಕೇವಲ 6 ಜನರು ಮಾತ್ರ ಪ್ರಾಣ ಕಳೆದುಕೊಂಡಿ ದ್ದರೆ ಕಳೆದ 14 ದಿನಗಳಲ್ಲಿ 15 ಸಾವುಗಳು ವರದಿಯಾಗಿವೆ. ಪಶ್ಚಿಮ ಬಂಗಾಲ : 8 ಸಾವಿರದಿಂದ 42 ಸಾವಿರದತ್ತ (ಶೇ. 420 ಹೆಚ್ಚಳ)
ಸದ್ಯ ಐದು ರಾಜ್ಯಗಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಗಳಲ್ಲಿ ಅತೀ ಪ್ರತಿಷ್ಠೆಯ ಮತ್ತು ಕುತೂಹಲಕಾರಿ ಕಣವಾಗಿ ಮಾರ್ಪಟ್ಟಿರುವ ಪಶ್ಚಿಮ ಬಂಗಾಲದಲ್ಲಿ ಚುನಾ ವಣೆ ಹವಾ ಜೋರಾಗಿಯೇ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ದೇಶದ ಬಹುತೇಕ ಹಿರಿಯ ನಾಯಕರು ಪ್ರಸ್ತುತ ಬಂಗಾಲದಲ್ಲಿ ಸಾಕಷ್ಟು ಚುನಾವಣ ರ್ಯಾಲಿಗಳು, ರೋಡ್‌ಶೋಗಳು ಮತ್ತು ಸಭೆಗಳನ್ನು ನಡೆಸುತ್ತಿ¨ªಾರೆ. ಈ ರ್ಯಾಲಿಗಳಿಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಬಂಗಾಲದಲ್ಲಿ ಕಳೆದ 14 ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಸರಣದ ವೇಗ ಶೇ. 420ರಷ್ಟು ಹೆಚ್ಚಾಗಿದೆ. ಮಾರ್ಚ್ 16ರಿಂದ 31ರ ವರೆಗೆ ಇಲ್ಲಿ ಕೇವಲ 8,062 ಪ್ರಕರಣಗಳು ವರದಿಯಾಗಿದ್ದವು. ಆದರೆ ಎಪ್ರಿಲ್ 1-14ರ ನಡುವೆ ಇದು 41,927ಕ್ಕೆ ಏರಿದೆ. ಮಾರ್ಚ್‌ನಲ್ಲಿ ಕೇವಲ 32 ಜನರು ಪ್ರಾಣ ಕಳೆದುಕೊಂಡರೆ, ಎಪ್ರಿಲ್‌ನಲ್ಲಿ ಈ ವರೆಗೆ 127 ಜನರು ಸಾವನ್ನಪ್ಪಿ¨ªಾರೆ. ಕೊರೊನಾ ಸೋಂಕು ರಾಜ್ಯದಲ್ಲಿ ತೀವ್ರತೆ ಕಂಡುಕೊಳ್ಳುತ್ತಿರುವ ಹೊರತಾಗಿಯೂ ರಾಜಕೀಯ ನಾಯಕರ ರ್ಯಾಲಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಾರದಿದ್ದರೂ ಚುನಾವಣ ಆಯೋಗ ರಾಜ್ಯದಲ್ಲಿ 8 ಹಂತಗಳಲ್ಲಿ ಅದರಲ್ಲೂ ಸುದೀರ್ಘ ಕಾಲ ಚುನಾವಣೆ ನಡೆಸಲು ತೀರ್ಮಾನ ಕೈಗೊಂಡುದುದು ಇದೀಗ ಕೇವಲ ರಾಜಕೀಯವಾಗಿ ಮಾತ್ರವಲ್ಲದೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.
Related Articles
ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆರಂಭ ದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿತ್ತು. ಉಳಿದ ರಾಜ್ಯ ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಂತೆ ಇಲ್ಲಿ ಹೆಚ್ಚು ಪ್ರಕ ರಣಗಳು ವರದಿಯಾಗುತ್ತಿರಲಿಲ್ಲ. ನವೆಂಬರ್ ಕೊನೆಯ ವಾರ ದಿಂದ ಫೆಬ್ರವರಿ ವರೆಗೆ ದಿನಕ್ಕೆ ಗರಿಷ್ಠ 50 ಪ್ರಕರಣಗಳು ಮಾತ್ರ ವರದಿಯಾಗುತ್ತಿದ್ದವು. ಚುನಾವಣೆ ವರೆಗೆ ಎಲ್ಲವೂ ಸರಿಯಾ ಗಿಯೇ ಇತ್ತು. ಆದರೆ ಈಗ ಪ್ರತೀ ದಿನ 400ರಿಂದ 500 ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಹೊಸ ಪ್ರಕರಣಗಳ ಪ್ರಮಾಣವು ಶೇ. 165ರಷ್ಟು ಹೆಚ್ಚಾಗಿದೆ. ಮಾರ್ಚ್ 16ರಿಂದ 31ರ ವರೆಗೆ 1,400 ಜನರು ಕೋವಿಡ್ ಪಾಸಿಟಿವ್ ಹೊಂದಿದ್ದಾರೆ. ಎಪ್ರಿಲ್ 1ರಿಂದ 14ರ ವರೆಗೆ ಪ್ರಕರಣಗಳ ಸಂಖ್ಯೆ 3,721ಕ್ಕೆ ಏರಿದೆ. ಮಾರ್ಚ್‌ನಲ್ಲಿ 9 ಸಾವುಗಳು ಸಂಭವಿಸಿ ದರೆ, ಎಪ್ರಿಲ್‌ನಲ್ಲಿ ಈಗಾಗಲೇ 15 ಮಂದಿ ಸಾವನ್ನಪ್ಪಿದ್ದಾರೆ.
Advertisement
ತಮಿಳು ನಾಡು : 25 ಸಾವಿರದಿಂದ 65 ಸಾವಿರಕ್ಕೆ ಏರಿಕೆ ( ಶೇ.159ರಷ್ಟು ಹೆಚ್ಚಳ)ತಮಿಳುನಾಡಿನಲ್ಲಿ ಮಾರ್ಚ್‌ನಲ್ಲೇ ಕೋವಿಡ್ ವೇಗ ಪಡೆದುಕೊಂಡಿತ್ತು. ಆದರೆ ಇದರಿಂದ ಎಚ್ಚೆತ್ತುಕೊಳ್ಳದೇ ಇದ್ದ ಪರಿಣಾಮ ಎಪ್ರಿಲ್‌ನಲ್ಲಿ ಸೋಂಕು ಹೆಚ್ಚಿನ ಸಂಖ್ಯೆಯ ಜನ ರನ್ನು ಕಾಡತೊಡಗಿದೆ. ಮಾರ್ಚ್ 16ರಿಂದ 31ರ ಅಂಕಿ- ಅಂಶ ಗಳ ಪ್ರಕಾರ ಒಟ್ಟು 25,244 ಜನರು ಸೋಂಕಿಗೆ ಒಳಗಾಗಿದ್ದಾರೆ. ಎಪ್ರಿಲ್ 1ರಿಂದ 14ರ ವರೆಗೆ 65,458ಕ್ಕೆ ಏರಿಕೆ ಯಾಗಿದೆ. ಸೋಂಕಿನ ಪ್ರಮಾಣ ಶೇ. 159 ರಷ್ಟು ಹೆಚ್ಚಾಗಿದೆ. ಮಾರ್ಚ್ ತಿಂಗಳಿನಲ್ಲಿ 163 ಸಾವುಗಳು ಸಂಭವಿಸಿದ್ದರೆ, ಎಪ್ರಿಲ್‌ನಲ್ಲಿ 232 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇರಳ : 30 ಸಾವಿರದಿಂದ 61 ಸಾವಿರಕ್ಕೆ ಏರಿಕೆ (ಶೇ. 103ರಷ್ಟು ಹೆಚ್ಚಳ)
ಕೇರಳದಲ್ಲಿ ಕೂಡ ಕೋವಿಡ್ ತೀವ್ರತೆ ಕಂಡುಕೊಳ್ಳತೊಡ ಗಿದೆ. ಬಹಳ ಮುಖ್ಯವಾಗಿ ಚುನಾವಣ ಪ್ರಚಾರದ ಬಳಿಕ ಪ್ರಕ ರಣಗಳಲ್ಲಿ ವಿಪರೀತ ಏರಿಕೆಯಾಗಿದೆ. ರಾಜಕೀಯ ಪಕ್ಷಗಳ ರ್ಯಾಲಿಗಳು, ರೋಡ್ ಶೋಗಳು ಮತ್ತು ಸಭೆಗಳಿಂದಾಗಿ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿದೆ.ರಾಜ್ಯದಲ್ಲಿ ಕಳೆದ 14 ದಿನಗಳಲ್ಲಿ ಹೊಸ ರೋಗಿಗಳ ಸಂಖ್ಯೆಯಲ್ಲಿ ಶೇ. 103ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಮಾರ್ಚ್ 16 ಮತ್ತು 31ರ ನಡುವೆ ಒಟ್ಟು 30,390 ಜನರು ಇಲ್ಲಿ ಸೋಂಕಿಗೆ ಒಳಗಾಗಿದ್ದು, ಎಪ್ರಿಲ್‌ನಲ್ಲಿ 61,793ಕ್ಕೆ ಏರಿದೆ. ಮಾರ್ಚ್‌ನಲ್ಲಿ 199 ಜನರು ಪ್ರಾಣ ಕಳೆದು ಕೊಂಡರೆ, ಈ ತಿಂಗಳಿನಲ್ಲಿ 204 ಸಾವುಗಳು ವರದಿಯಾಗಿವೆ. ಮಾಸ್ಕ್ಗೆ ಗುಡ್ ಬೈ ಹೇಳಿ ಪಕ್ಷಗಳಿಗೆ ಜೈ ಎಂದ ಜನ!
ಚುನಾವಣ ರ್ಯಾಲಿಗಳಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದು ಸೋಂಕು ಪ್ರಸರಣಕ್ಕೆ ಮೂಲ ಕಾರಣ ಎನ್ನಲಾಗಿದೆ. ಕೋವಿಡ್ ನಿಯಮಾವಳಿಗಳ ಹೊರತಾಗಿಯೂ ರಾಜಕೀಯ ಪಕ್ಷಗಳು ಮತ್ತದರ ನಾಯಕರು ಜನರ ಪ್ರಾಣಕ್ಕಿಂತ ಚುನಾವಣೆಯೇ ಪ್ರಮುಖ ಎಂದು ಪರಿಭಾವಿಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಚುನಾವಣ ರ್ಯಾಲಿಗಳಲ್ಲಿ ಸೇರುವ ಶೇ. 80ರಷ್ಟು ಜನರು ಮಾಸ್ಕ್ ಇಲ್ಲದೇ ಭಾಗವಹಿಸುತ್ತಿದ್ದಾರೆ. ಜನರಲ್ಲಿ ಅಂತೂ ಮಾಸ್ಕ್ ಇಲ್ಲ. ಇನ್ನು ವೇದಿಕೆಯ ಮೇಲೆ ಕುಳಿತ ನಾಯಕರಿಗೂ ಮಾಸ್ಕ್ ಧಾರಣೆ ಮರೆತೇ ಹೋಗಿತ್ತು. ಇನ್ನು ರ್ಯಾಲಿ, ರೋಡ್‌ಶೋ..ಹೀಗೆ ಚುನಾವಣ ಪ್ರಚಾರದ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಪಾಲನೆಯ ಪ್ರಶ್ನೆಯಾದರೂ ಏಲ್ಲಿಂದ?!