ನಾರಯಣಪುರ : ಛತ್ತೀಸ್‌ಗಢದ ನಾರಾಯಣಪುರ ಪ್ರದೇಶದಲ್ಲಿ ನಕ್ಸಲರು ನಡೆಸಿರುವ ಐಇಡಿ ಸ್ಫೋಟದಿಂದ ಐದು ಮಂದಿ ಪೊಲೀಸರು ಹುತಾತ್ಮರಾಗಿರುವ ಘಟನೆ ಮಂಗಳವಾರ ನಡೆದಿದೆ.
ಜಿಲ್ಲಾ ಮೀಸಲು ರಕ್ಷಣಾ ಪಡೆಯ (ಡಿಆರ್‌ಜಿ) ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದ ಬಸ್ಸು ಸ್ಫೋಟಕ್ಕೆ ಗುರಿಯಾಗಿದೆ. ಇದರಲ್ಲಿದ್ದ ಐದು ಮಂದಿ ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿರುವುದು ವರದಿಯಾಗಿದೆ.
ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದು, ಚಾಲಕ ಸೇರಿದಂತೆ ಡಿಆರ್‌ಜಿಯ ಐದು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯು ಕದೆನಾರ್ ಮತ್ತು ಕಂಹಾರ್‌ಗಾಂವ್ ನಡುವಣ ಪ್ರದೇಶದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ರಕ್ಷಣಾ ಪಡೆ ಪ್ರಯಣ ಮಾಡುತ್ತಿದ್ದ ಬಸ್ಸಿನಲ್ಲಿ 27 ಮಂದಿ ಹೋಗುತ್ತಿದ್ದರು. ಇನ್ನು ಸ್ಪೋಟದಲ್ಲಿ ಗಾಯಗೊಂಡವರನ್ನು ವಾಯು ಪಡೆಯ ಚಾಪರ್‌ಗಳ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ.
ಈ ಬಗ್ಗೆ ಕಂಬನಿ ಮಿಡಿದಿರುವ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಗಾಯಗೊಂಡಿರುವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.