Advertisement
ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರಬೇಕಾದರೆ ಅಲ್ಲಿಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.ಈ ನಿಟ್ಟಿನಲ್ಲಿ ರಮೇಶ ಜಾರಕಿಹೊಳಿ ಚಿಕ್ಕೋಡಿಶೈಕ್ಷಣಿಕ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ,ಮಮದಾಪುರದ ಸರಕಾರಿ ಮಾದರಿ ಗಂಡು ಮಕ್ಕಳಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯಪ್ರಾಥಮಿಕ ಶಾಲೆ, ಧೂಪದಾಳ ಮತ್ತು ಸುಲದಾಳಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.
Related Articles
Advertisement
ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಹೆಚ್ಚುತ್ತಿದೆ. ಹೀಗಾಗಿ ಹೊಸ ಕೊಠಡಿಗಳ ಅವಶ್ಯಕತೆ ಇದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಒಂದು ಕಡೆ ಕುಳಿತು ಊಟ ಮಾಡುವ ವ್ಯವಸ್ಥೆಇಲ್ಲ. ಆದ್ದರಿಂದ ಭೋಜನಾಲಯ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದೇವೆ.ಇದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪ್ರಯೋಗಾಲಯ ಸ್ಥಾಪನೆ ಮಾಡುವಂತೆ ಬೇಡಿಕೆ ಸಲ್ಲಿಸಿದ್ದೇವೆ.-ಬಿ.ಎನ್. ಬಶೆಟ್ಟಿ, ಪ್ರಧಾನ ಗುರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಧೂಪದಾಳ (ಅಂದಾಜು ವೆಚ್ಚ: 55 ಲಕ್ಷ ) :
118 ವರ್ಷಗಳ ಇತಿಹಾಸ ಹೊಂದಿರುವ ಧೂಪದಾಳದ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಬಹಳ ಹಳೆಯದಾಗಿದೆ. 368 ಮಕ್ಕಳನ್ನು ಹೊಂದಿರುವಶಾಲೆಯಲ್ಲಿ ತುರ್ತಾಗಿ ಕಟ್ಟಡದ ದುರಸ್ತಿ ಹಾಗೂ ಹೊಸಕಟ್ಟಡಗಳ ನಿರ್ಮಾಣದ ಅಗತ್ಯತೆ ಇದೆ. ಸುಸಜ್ಜಿತ ಶಾಲೆ ನಿರ್ಮಾಣವಾದರೆ ಸಹಜವಾಗಿಯೇ ಮಕ್ಕಳ ಸಂಖ್ಯೆಹೆಚ್ಚುತ್ತದೆ. ಇದೇ ಕಾರಣದಿಂದ ಶಾಲೆಯನ್ನು ದತ್ತು ಪಡೆದಿರುವ ಶಾಸಕರು 55 ಲಕ್ಷ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ.
ಶಾಲೆಯ ಕಟ್ಟಡ ಬಹಳ ಹಳೆಯದಾಗಿದೆ. 1ರಿಂದ 8ನೇ ತರಗತಿಗಳು ನಡೆಯುತ್ತಿದ್ದುಕೊಠಡಿಗಳ ದುರಸ್ತಿ ಜೊತೆಗೆ ಹೊಸ ಕೊಠಡಿಗಳ ನಿರ್ಮಾಣ ಆಗಬೇಕಿದೆ. ಊಟದಹಾಲ್ ಮತ್ತು ಹೈಟೆಕ್ ಶೌಚಾಲಯ ನಿರ್ಮಾಣಮಾಡಬೇಕು. ಇದರ ಬಗ್ಗೆ ಜಿಲ್ಲೆಯ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದೇವೆ. -ಎಚ್.ಎಸ್. ಸಂಭೋಜಿ, ಮುಖ್ಯಾಧ್ಯಾಪಕ
ಕನ್ನಡ ಮಾದರಿ ಗಂಡು ಮಕ್ಕಳ ಶಾಲೆ, ಮಮದಾಪುರ :
ಇದು 150 ವರ್ಷಗಳಷ್ಟು ಹಳೆಯದಾದ ಶಾಲೆ. ಆದರೂ ಶಾಲೆಯ ಕಟ್ಟಡ ಇನ್ನೂ ಗಟ್ಟಿಯಾಗಿದೆ.1ರಿಂದ 7ನೇ ತರಗತಿಯ ಶಾಲೆಯಲ್ಲಿ 299 ಮಕ್ಕಳು ಓದುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯವಾಗಿ ಕೊಠಡಿಗಳ ದುರಸ್ತಿ ಕಾರ್ಯ ತುರ್ತಾಗಿ ನಡೆಯಬೇಕಿದೆ. ಹಂಚಿನ ಶಾಲೆಯಾಗಿರುವುದರಿಂದ ಮಂಗಗಳ ಕಾಟ ಬಹಳ. ಇದಕ್ಕೆ ಮುಕ್ತಿ ನೀಡಬೇಕು ಎಂಬುದು ಶಾಲಾ ಶಿಕ್ಷಕರ ಮನವಿ.
ನಮಗೆ ಹೊಸ ಕೊಠಡಿಗಳ ಅಗತ್ಯವಿಲ್ಲ. ಆದರೆ ಈಗಿರುವ ಕೊಠಡಿಗಳ ಮೇಲ್ಛಾವಣಿ ದುರಸ್ತಿ ಮಾಡಿಸಿಕೊಟ್ಟರೆ ಸಾಕು. ಇದರ ಜೊತೆಗೆ ಮಕ್ಕಳಿಗೆ ಒಂದು ಕಡೆ ಕುಳಿತು ಊಟಮಾಡಲು ಹಾಗೂ ಸಭೆ ನಡೆಸಲು ಭೋಜನಾಲಯ ನಿರ್ಮಾಣ ಮಾಡಿಕೊಡಬೇಕು. ಗ್ರಂಥಾಲಯ, ಪ್ರಯೋಗಾಲಯದ ಅಗತ್ಯವಿದೆ. -ಯು.ಆರ್. ಲೋಹಾರ, ಪ್ರಧಾನ ಗುರು
ಎಚ್‌ಪಿಎಸ್ ಸುಲದಾಳ (ಅಂದಾಜು ವೆಚ್ಚ: 65 ಲಕ್ಷ) :
ಸುಲದಾಳದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ 65 ಲಕ್ಷ ರೂ. ಯೋಜನೆ ಸಿದ್ಧವಾಗಿದೆ. ಇದರಲ್ಲಿಐದು ಕೊಠಡಿಗಳ ನಿರ್ಮಾಣ, ಭೋಜನಾಲಯ, 20 ಕಂಪ್ಯೂಟರ್‌ಹಾಗೂ ಕಂಪ್ಯೂಟರ್ ಕೊಠಡಿ,ಶೌಚಾಲಯ ನಿರ್ಮಾಣ ಸೇರಿವೆ.
ಶಾಲೆಗೆ ಕಟ್ಟಡ, ಭೋಜನಾಲಯದ ಕೊರತೆ ಇದೆ. ಐದು ಹೊಸ ಕಟ್ಟಡಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಜೊತೆಗೆ 20 ಕಂಪ್ಯೂಟರ್ ಹಾಗೂ ಒಂದು ಕಂಪ್ಯೂಟರ್ ಕೊಠಡಿ ನಿರ್ಮಾಣ ಮಂಜೂರು ಮಾಡಬೇಕು ಎಂದು ಸಚಿವರು ಮತ್ತು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. -ವೈ.ಬಿ. ಭಜಂತ್ರಿ, ಪ್ರಧಾನ ಗುರು
ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಅಂಕಲಗಿ (ಅಂದಾಜು ವೆಚ್ಚ: 54.50ಲಕ್ಷ) :
ಅಂಕಲಗಿ ಹಿರಿಯ ಹೆಣ್ಣುಮಕ್ಕಳ ಶಾಲೆಯ ಅಭಿವೃದ್ಧಿಗೆ 54.50 ಲಕ್ಷ ರೂ. ಕ್ರಿಯಾ ಯೋಜನೆಸಿದ್ಧಪಡಿಸಲಾಗಿದೆ. ಇದರಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಭೋಜನಾಲಯ, 22 ಲಕ್ಷ ರೂ. ವೆಚ್ಚದಲ್ಲಿಎರಡು ಕೊಠಡಿಗಳ ನಿರ್ಮಾಣ, 4 ಲಕ್ಷ ರೂ.ದಲ್ಲಿ ಶೌಚಾಲಯ ಹಾಗೂ ಐದು ಲಕ್ಷದಲ್ಲಿ ಕಂಪ್ಯೂಟರ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಸರ್ವರಿಗೂ ಶಿಕ್ಷಣ ಎಂಬ ಮಹದಾಸೆಯಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದೇನೆ. ಶಾಲಾಕ್ರೀಡಾಂಗಣ, ಕಾಂಪೌಂಡ್ ಗೋಡೆ ನಿರ್ಮಾಣ,ಸಮರ್ಪಕ ಪೀಠೊಪಕರಣ, ಕಂಪ್ಯೂಟರ್ ಶಿಕ್ಷಣಕ್ಕೆ ಅನುವಾಗುವಂತಹ ಉಪಕರಣ,ಗ್ರಂಥಾಲಯ ಮತ್ತು ಪ್ರಯೋಗಾಲಯಗಳನ್ನು ತರಲು ಯೋಜನೆ ರೂಪಿಸಲಾಗಿದೆ. ಮುಂದಿನದಿನಗಳಲ್ಲಿ ಈ ಶಾಲೆಗಳನ್ನು ಯಾವುದೇಹೈಟೆಕ್ ಶಾಲೆಗಿಂದ ಕಡಿಮೆ ಇಲ್ಲದಂತೆ ಮಾದರಿ ಶಾಲೆಗಳನ್ನಾಗಿ ರೂಪಿಸುವ ಕನಸು ಹೊಂದಿದ್ದೇನೆ. -ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ
school adopt , Minister jarakihulli,Belegavi,Development,kannada newspaper,online kannada news,online kannada newspaper
-ಕೇಶವ ಆದಿ