Advertisement

ಐವರು ಶ್ರೀಗಂಧ ಮರ ಕಳ್ಳರು ಪೊಲೀಸರ ಬಲೆಗೆ

12:02 PM Feb 13, 2018 | |

ಬೆಂಗಳೂರು: ಹಗಲು ವೇಳೆ ಮನೆಗಳು ಮತ್ತು ಪಾಕ್‌‌ìಗಳಲ್ಲಿ ಶ್ರೀಗಂಧದ ಮರಗಳನ್ನು ಗುರುತಿಸಿ ರಾತ್ರಿ ವೇಳೆ ಆ ಮರಗಳನ್ನು ಕತ್ತರಿಸಿ ಕದ್ದೊಯ್ಯುತ್ತಿದ್ದ ಐವರು ಕಳ್ಳರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ತುಮಕೂರಿನ ಮೊಹಮದ್‌ ಇಮ್ರಾನ್‌ (30), ಫೈಜುಲ್ಲಾ ಖಾನ್‌ (48), ರಂಗಸ್ವಾಮಿ (45), ಶಫೀವುಲ್ಲಾ (30) ಹಾಗೂ ಹಾಸನ ಜಿಲ್ಲೆಯ ಉದಯಕುಮಾರ್‌ (24) ಬಂಧಿತರು. ಇವರಿಂದ 10 ಲಕ್ಷ ರೂ. ಮೌಲ್ಯದ 138 ಕೆ.ಜಿ ಶ್ರೀಗಂಧದ ತುಂಡುಗಳು ಹಾಗೂ 1 ಟಾಟಾ ಸುಮೋ ವಾಹನ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚುಹಾಕುತ್ತಿದ್ದ ಆರೋಪಿಗಳನ್ನು ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳು ಎರಡು ವರ್ಷಗಳಿಂದ ಕೆ.ಎಸ್‌.ಲೇಔಟ್‌, ಬನಶಂಕರಿ, ಬಸವನಗುಡಿ ಹಾಗೂ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಕೆಲ ಮನೆಗಳು ಹಾಗೂ ಪಾರ್ಕ್‌ಗಳಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದರು.

ಗಂಧದ ಮರ ಕೊಯ್ಯುವಾಗ ಶಬ್ಧಬಾರದಂತೆ ಗೋಣಿಚೀಲ ಹಾಕುತ್ತಿದ್ದ ಆರೋಪಿಗಳು, ಕಳೆದ ವರ್ಷ ವಿದ್ಯಾರಣ್ಯಪುರದ ಪಾರ್ಕ್‌ವೊಂದರಲ್ಲಿ ಶ್ರೀಗಂಧ ಮರ ಕೊಯ್ದು ಕಾರಿನಲ್ಲಿ ಕದ್ದೊಯ್ಯುತ್ತಿರುವಾಗ ಪೊಲೀಸರನ್ನು ಕಂಡು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು.

ಪ್ರಕರಣದ ಪ್ರಮುಖ ಆರೋಪಿ ಮೊಹಮದ್‌ ಇಮ್ರಾನ್‌ ಮೆಕಾನಿಕ್‌ ಹಾಗೂ ಕಾರು ಚಾಲನೆ ಮಾಡುತ್ತಿದ್ದು, ಫೈಜುಲ್ಲಾ ಖಾನ್‌ ಮತ್ತು ಶಫೀವುಲ್ಲಾ ಸಾಮಿಲ್‌ನಲ್ಲಿ ಕೆಲಸ ಮಾಡತ್ತಾರೆ. ಇನ್ನು ರಂಗಸ್ವಾಮಿ ನೆಲಮಂಗಲದಲ್ಲಿ ಟ್ರ್ಯಾಕ್ಟರ್‌ ಚಾಲಕನಾಗಿದ್ದು, ಉದಯಕುಮಾರ್‌ ಬೆಡ್‌ಶೀಟ್‌ ವ್ಯಾಪಾರ ಮಾಡುತ್ತಾನೆ. ಪರಸ್ಪರ ಪರಿಚಿತರಾಗಿರುವ ಆರೋಪಿಗಳು ಶ್ರೀಗಂಧ ಮರ ಕಳವಲ್ಲಿ ತೊಡಗಿಕೊಂಡಿದ್ದರು.

Advertisement

ಉದಯ್‌ಗೆ ಮರ ಗುರುತಿಸುವ ಕೆಲಸ: ಬಂಧಿತರ ಪೈಕಿ ಉದಯಕುಮಾರ್‌ ಆಟೋ, ಓಮ್ನಿ ಹಾಗೂ ಮತ್ತಿತರ ವಾಹನಗಳಲ್ಲಿ ಬೆಡ್‌ಶೀಟ್‌ ಹಾಗೂ ಇತರೆ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ಎಲ್ಲೆಡೆ ಸುತ್ತಾಡುತ್ತಿದ್ದ. ಈ ವೇಳೆ ಮನೆಗಳ ಆವರಣಗಳಲ್ಲಿ ಕಾಣುತ್ತಿದ್ದ ಶ್ರೀಗಂಧದ ಮರವನ್ನು ಗುರುತಿಸಿ ಇಮ್ರಾನ್‌ಗೆ ಮಾಹಿತಿ ನೀಡುತ್ತಿದ್ದ.

ಒಂದೆರಡು ದಿನ ಬಿಟ್ಟು ಐವರು ಆರೋಪಿಗಳು ಒಟ್ಟಿಗೆ ಆ ಮರವನ್ನು ಕೊಯ್ದು ಸಣ್ಣ-ಸಣ್ಣ ತುಂಡುಗಳನ್ನಾಗಿ ಮಾಡಿ ಕಾರಿನಲ್ಲಿ  ಹಾಕಿಕೊಂಡು ಪರಾರಿಯಾಗುತ್ತಿದ್ದರು. ಎರಡು ವರ್ಷಗಳಿಂದ ದಂಧೆ ನಡೆಸುತ್ತಿರುವ ಮ್ರಾನ್‌, ಪರಿಚಯಸ್ಥರ ಮೂಲಕ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ. ಬಳಿಕ ಬಂದ ಹಣದಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಕೆಲ ತಿಂಗಳ ಹಿಂದೆ ಕೊದೊಯ್ದಿದ್ದ ಮರದ ತುಂಡುಗಳನ್ನು ರಂಗಸ್ವಾಮಿ ಮತ್ತು ಶಫೀವುಲ್ಲಾ ಮನೆಯಲ್ಲಿ ಅಡಗಿಸಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next