ಚಾಮರಾಜನಗರ: ಜಿಲ್ಲೆಯಲ್ಲಿ ಶನಿವಾರ ಐದು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಮೂವರು ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನ ಎರಡಂಕಿ ಇರುತ್ತಿತ್ತು. ಶನಿವಾರ 5 ಪ್ರಕರಣಗಳು ಮಾತ್ರ ದೃಢಪಟ್ಟಿರುವುದು ಜಿಲ್ಲೆಗೆ ಕೊಂಚ ಸಮಾಧಾನ ತರುವ ವಿಷಯವಾಗಿದೆ. 416 ಮಾದರಿಗಳ ಪೈಕಿ ಈ ಐದು ಪ್ರಕರಣಗಳು ಪಾಸಿಟಿವ್ ಬಂದಿವೆ. ಇನ್ನುಳಿದ 411 ನೆಗೆಟಿವ್ ಆಗಿವೆ.
ಜಿಲ್ಲೆಯಲ್ಲಿ ಒಟ್ಟು 83 ದೃಢೀಕೃತ ಪ್ರಕರಣಗಳಿದ್ದು, ಒಟ್ಟು ನಾಲ್ವರು ಗುಣಮುಖರಾಗಿದ್ದಾರೆ. ಹಾಗಾಗಿ 79 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಇಬ್ಬರು ಐಸಿಯುನಲ್ಲಿ ದಾಖಲಾಗಿದ್ದಾರೆ. ಎಲ್ಲರೂ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ವರದಿಯಾಗಿರುವ ಐದು ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳು, ಈಗಾಗಲೇ ಸೋಂಕಿತರಾಗಿರಾಗಿದ್ದು ಕ್ವಾರಂಟೈನ್‌ನಲ್ಲಿರುವವರಿಗೆ ಹರಡಿರುವಂಥವು. ರೋಗಿ ಸಂಖ್ಯೆ 80ರ ಗುಂಡ್ಲುಪೇಟೆಯ ಪ್ರಕರಣ ಬೆಂಗಳೂರಿನಿಂದ ಪ್ರಯಾಣ ಮಾಡಿರುವವರು.
ಸೋಂಕಿತರ ವಿವರ: ರೋಗಿ ಸಂಖ್ಯೆ 80: 28 ವರ್ಷದ ಯುವಕ ಗುಂಡ್ಲುಪೇಟೆ., ಸಂಖ್ಯೆ 81: 47 ವರ್ಷದ ಮಹಿಳೆ ಗುಂಡ್ಲುಪೇಟೆ. ಸಂಖ್ಯೆ 82: 26 ವರ್ಷದ ಯುವತಿ ಚಾಮರಾಜನಗರ. ಸಂಖ್ಯೆ 83: 45 ವರ್ಷದ ಮಹಿಳೆ ಚಾಮರಾಜನಗರ. ಸಂಖ್ಯೆ 84: 25 ವರ್ಷದ ಯುವತಿ ಗುಂಡ್ಲುಪೇಟೆ.