Advertisement

ಲೋಕಸಭೆ: ರಾಹುಲ್‌ಗಿಂತ ಸೋನಿಯಾ ಹಾಜರಿ ಹೆಚ್ಚು

03:45 AM Jun 05, 2017 | Team Udayavani |

ನವದೆಹಲಿ: ಹಾಲಿ ಲೋಕಸಭೆಯ 3 ವರ್ಷಗಳ ಅವಧಿಯ ಕಲಾಪದಲ್ಲಿ ಕೇವಲ ಐವರು ಸಂಸದರಷ್ಟೇ ಶೇ.100ರಷ್ಟು ಹಾಜರಾತಿ ಹೊಂದಿದ್ದರು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗಿಂತ ಹೆಚ್ಚು ಕಲಾಪಗಳಲ್ಲಿ ಭಾಗಿಯಾಗಿದ್ದರು ಎಂಬ ಅಂಶ ಇದೀಗ ಬಹಿರಂಗವಾಗಿದೆ.

Advertisement

ಉತ್ತರಪ್ರದೇಶದ ಸಂಸದ ಭೈರೋನ್‌ ಪ್ರಸಾದ್‌ ಮಿಶ್ರಾ ಅವರು ಲೋಕಸಭೆಯಲ್ಲಿ 1,468 ಚರ್ಚೆಗಳಲ್ಲಿ ಪಾಲ್ಗೊಂ ಡಿದ್ದು, ಶೇ.100ರಷ್ಟು ಹಾಜರಾತಿ ಹೊಂದಿದ್ದಾರೆ. 22 ಮಂದಿ ಸಂಸದರು ಅರ್ಧದಷ್ಟು ಕಲಾಪಗಳಲ್ಲೂ ಭಾಗಿಯಾಗಿಲ್ಲ. ಸೋನಿಯಾ ಅವರಿಗೆ ಪದೇ ಪದೆ ಆರೋಗ್ಯ ಕೈಕೊಡು ತ್ತಿದ್ದರೂ, ಅವರು ಶೇ.59ರಷ್ಟು ಹಾಜರಾತಿ ಹೊಂದಿದ್ದಾರೆ. ಆದರೆ, ರಾಹುಲ್‌ ಹಾಜರಾಗಿದ್ದು ಶೇ.54 ಕಲಾಪಗಳಿಗೆ ಮಾತ್ರ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ಬಿಡುಗಡೆ ಮಾಡಿರುವ ಹಾಜರಾತಿ ಅಂಕಿಅಂಶದಿಂದ ತಿಳಿದುಬಂದಿದೆ.

ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವೀರಪ್ಪ ಮೊಯ್ಲಿ ಕ್ರಮವಾಗಿ ಶೇ.92 ಮತ್ತು ಶೇ.91ರಷ್ಟು ಹಾಜರಾತಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next