Advertisement

ವಿಜಯಪುರ: ಮುಂಬೈನಿಂದ ಬಂದ ಐವರಿಗೆ ಕೋವಿಡ್-19 ಸೋಂಕು ದೃಢ

02:12 PM May 18, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್-19 ಅಬ್ಬರ ತಣ್ಣಗಾಗುವ ಹಂತದಲ್ಲಿ ಜಿಲ್ಲೆಯಿಂದ ಗುಳೇ ಹೋಗಿದ್ದವರು ತವರಿಗೆ ಮರಳುವಾಗ ಸೋಂಕು ಹೊತ್ತು ಬರುತ್ತಿದ್ದಾರೆ. ಸೋಮವಾರ ಮತ್ತೇ ಐವರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.

Advertisement

ಮಹಾರಾಷ್ಟ್ರದ ಮುಂಬೈಗೆ ಗುಳೆಗೆ ತೆರಳಿದ್ದ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿದೆ. 19 ವರ್ಷದ ಪಿ1176 ಮಹಿಳೆ, 45 ವರ್ಷದ ಪಿ1177 ಪುರುಷ,10 ವರ್ಷದ ಪಿ1183 ಬಾಲಕ, 20 ವರ್ಷದ ಪಿ1184 ಮಹಿಳೆ ಹಾಗೂ 22 ವರ್ಷದ ಪಿ1211 ಪುರುಷ ಸೇರಿ ಐವರಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 59 ಕ್ಕೇರಿದೆ.

ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದವರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ ಐವರನ್ನು ಜಿಲ್ಲಾ ಕೇಂದ್ರದಲ್ಲಿ ಇರುವ ಕೋವಿಡ್ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next